ನಮ್ಮ ದೇಶದಲ್ಲಿ, ವಿಶೇಷವಾಗಿ ಮಳೆಗಾಲದಲ್ಲಿ ಉಂಟಾಗುವ ಭೂಕುಸಿತಗಳಿಂದಾಗಿ ಹೆದ್ದಾರಿಗಳು, ರೈಲುಮಾರ್ಗಗಳು ಮತ್ತು ಜನವಸತಿ ಪ್ರದೇಶಗಳಿಗೆ ತೀವ್ರ ಹಾನಿ, ಸಾವು ಮತ್ತು ನೋವುಂಟಾಗುವ ಪ್ರಕರಣಗಳು ವರದಿಯಾಗುತ್ತಿವೆ. ಉದಾಹರಣೆಗೆ ಕೊಡಗು, ಸಕಲೇಶಪುರ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮೊದಲಾದ ಕಡೆ ಭೂಕುಸಿತ ಪ್ರಕರಣಗಳನ್ನು ಗಮನಿಸಬಹುದು. ಭೂಕುಸಿತದಿಂದಾಗುವ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಅಪಾರ ಹಾನಿ, ಸಾವು-ನೋವುಗಳನ್ನು ನೋಡಿದಾಗ, ಇಂದಿನ ಅಧುನಿಕ ತಂತ್ರಜ್ಞಾನದ ಯುಗದಲ್ಲಿ ಭೂಕುಸಿತದ ಮುನ್ಸೂಚನೆಯನ್ನು ನೀಡಲು ಸಾಧ್ಯವಿಲ್ಲವೆ ಎನ್ನುವ ಪ್ರಶ್ನೆ ಎದುರಾಗುತ್ತದೆ.

‘ಭೂಕುಸಿತ ಉಂಟಾಗುತ್ತದೆ’ ಎನ್ನುವ ಮಾಹಿತಿಯನ್ನು ಎರಡು ವಾರ ಮುಂಚಿತವಾಗಿ ತಿಳಿಸಲು ಸಾಧ್ಯವಿದೆ ಎಂದು ಆಸ್ಟ್ರೇಲಿಯಾ ದೇಶದ ಖ್ಯಾತ ವಿಜ್ಞಾನಿಗಳಲ್ಲಿ ಒಬ್ಬರಾದ ಪ್ರೊ. ರಾಬಿನ್ ಬ್ಯಾಟರ್ಹ್ಯಾಮ್ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಭೂಕುಸಿತವುಂಟಾಗುತ್ತದೆ ಎಂದು ಕೆಲವು ನಿಮಿಷಗಳು ಅಥವಾ ಹೆಚ್ಚೆಂದರೆ ಕೆಲವು ಗಂಟೆಗಳು ಮುಂಚಿತವಾಗಿ ಮುನ್ಸೂಚನೆ ದೊರೆಯುವುದು ಮಾತ್ರ ಸಾಧ್ಯ ಎನ್ನುವ ವಾದವನ್ನು ಅವರು ಒಪ್ಪುವುದಿಲ್ಲ. ಈಗ ಲಭ್ಯವಿರುವ ಅತ್ಯಾಧುನಿಕ ಕಂಪ್ಯೂಟರ್, ತಂತ್ರಾಂಶ, ನೆಟವರ್ಕ್ ಮತ್ತು ಅರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಬಳಸಿ, 15 ದಿನಗಳು ಮುಂಚಿತವಾಗಿ ಭೂಕುಸಿತವುಂಟಾಗುವ ಮುನ್ಸೂಚನೆಯನ್ನು ನೀಡಲು ಸಾಧ್ಯವಿದೆ ಎಂದು ಅವರು ವಿವರಿಸುತ್ತಾರೆ.

ಸಾಮಾನ್ಯವಾಗಿ ಭೂಕುಸಿತ ಏಕಾಏಕಿಯಾಗಿ ಆಗುವುದಿಲ್ಲ. ಅತ್ಯಂತ ಸ್ಥಿರವಾಗಿದೆ ಎಂದು ಕಂಡುಬರುವ ಪ್ರದೇಶವನ್ನು ಸೂಕ್ಷ್ಮವಾಗಿ ನೋಡಿದರೆ, ಕೆಲವು ಕಡೆಯಾದರೂ ಮಣ್ಣು ಮತ್ತು ಪುಟ್ಟ ಕಲ್ಲುಗಳು ಸ್ಥಾನಪಲ್ಲಟವಾಗುತ್ತಿರುವುದನ್ನು ಗುರುತಿಸಬಹುದು. ಕಿಲೋಮೀಟರ್ಗಳಷ್ಟು ವ್ಯಾಪ್ತಿಯ ಪ್ರದೇಶದಲ್ಲಿ ಕೆಲವೊಂದು ಕಡೆ ದಿನಕ್ಕೆ ಹೆಚ್ಚೆಂದರೆ ಕೆಲವು ಮಿಲಿಮೀಟರ್ನಷ್ಟು ಮಣ್ಣು ಮತ್ತು ಪುಟ್ಟ ಕಲ್ಲುಗಳು ಸ್ಥಾನಪಲ್ಲಟವಾಗುತ್ತಿರುವುದನ್ನು ಗುರುತಿಸಲು ತಜ್ಞರ ಸಹಾಯ ಅತ್ಯಗತ್ಯವಾಗುತ್ತದೆ. ಅರಣ್ಯನಾಶ, ಜೋರಾಗಿ ಬೀಸುವ ಗಾಳಿ, ಬಿಸಿಲು, ಹತ್ತಿರದ ರಸ್ತೆಯಲ್ಲಿ ಬೃಹತ್ ಸರಕು ಸಾಗಾಣಿಕೆ ವಾಹನಗಳು ಚಲಿಸುವುದರಿಂದಾಗುವ ಕಂಪನಗಳು, ಸಮೀಪದಲ್ಲಿ ಬೃಹತ್ ಬಂಡೆಗಳನ್ನು ಸಿಡಿಮದ್ದಿನಿಂದ ಸ್ಫೋಟಿಸುವುದು, ರಸ್ತೆ ಅಥವಾ ಸುರಂಗನಿರ್ಮಾಣಕ್ಕೆ ಬಳಸುವ ಬೃಹತ್ ಯಂತ್ರಗಳಿಂದಾಗುವ ಕಂಪನಗಳು – ಹೀಗೆ ಅನೇಕ ಕಾರಣಗಳಿಂದ ಇಂತಹ ಸೂಕ್ಷ್ಮವಾದ ಸ್ಥಾನಪಲ್ಲಟವಾಗುತ್ತಿರಬಹುದು. ತಜ್ಞರ ನೆರವಿನಿಂದ ಒಂದು ಪ್ರದೇಶದಲ್ಲಿ ಮತ್ತೆ ಮತ್ತೆ ಮಣ್ಣು, ಕಲ್ಲುಗಳು ಸ್ಥಾನಪಲ್ಲಟವಾಗುತ್ತಿರುವ ಪ್ರದೇಶಗಳನ್ನು ಗುರುತಿಸಿಲಾಗುತ್ತದೆ. ಮೊದಲು ವಿಶಾಲ ಪ್ರದೇಶದಲ್ಲಿ ಚದುರಿದ ಎಲೆಗಳಂತೆ ಅಲ್ಲಿ ಇಲ್ಲಿ ಕಾಣಸಿಗುವ ಸ್ಥಾನಪಲ್ಲಟವಾಗುವ ಪ್ರದೇಶಗಳ ನಿರಂತರ ಅಧ್ಯಯನವನ್ನು ಹಲವಾರು ದಿನಗಳ ಕಾಲ ನಡೆಸಲಾಗುತ್ತದೆ. ದಿನಕಳೆದಂತೆ, ಹೀಗೆ ಗುರುತು ಮಾಡಿದ ಪ್ರದೇಶಗಳಲ್ಲಿ ಏಕರೂಪದಲ್ಲಿ ಸ್ಥಾನಪಲ್ಲಟವಾಗುತ್ತಿರುವುದನ್ನು ಗುರುತಿಸಲಾಗುತ್ತದೆ. ಹೀಗೆ ಗುರುತು ಮಾಡಿದ ಪ್ರದೇಶಗಳ ಡಿಜಿಟಲ್ ನಕ್ಷೆಯನ್ನು ಸಿದ್ಧಪಡಿಸಿ ಅಧ್ಯಯನ ನಡೆಸಿದಾಗ, ಎಲ್ಲಿ ಭೂಕುಸಿತ ಉಂಟಾಗಬಹುದು ಎನ್ನುವುದು ಸ್ಪಷ್ಟವಾಗುತ್ತದೆ. ದಿನಕ್ಕೆ ಹೆಚ್ಚಂದರೆ ಕೆಲವು ಮಿಲಿಮೀಟರ್ ಸರಿಯುವ ಮಣ್ಣು, ಕಲ್ಲುಗಳು, ಭೂಕುಸಿತವುಂಟಾದಾಗ ಗಂಟೆಗೆ 55 ಕಿಲೋಮೀಟರ್ಗಳೂ ಅಧಿಕ ವೇಗದಲ್ಲಿ ಸರಿಯುತ್ತವೆ. ಹೀಗಾಗಿ ಕೆಲವೇ ಕ್ಷಣಗಳಲ್ಲಿ ಸ್ಥಿರವಾಗಿದ್ದ ಪ್ರದೇಶವು ಭೂಕುಸಿತದಿಂದಾಗಿ ಗುರುತೇ ಸಿಗದಷ್ಟು ಬದಲಾಗಿ ಹೋಗುತ್ತದೆ.

ಮಳೆಗಾಲದಲ್ಲಿ ಗಂಟೆಗೆ ಸರಾಸರಿ 55 ಕಿಲೋಮೀಟರ್ ವೇಗದಲ್ಲಿ ನೀರಿನೊಡನೆ ಸಾವಿರಾರು ಟನ್ ಮಣ್ಣು ಜಾರಿದಾಗ, ಅದರ ದಾರಿಯಲ್ಲಿ ಬರುವ ಕಲ್ಲುಗಳು, ಮರಗಳು, ಮನೆಗಳು, ವಾಹನಗಳು – ಹೀಗೆ ಎಲ್ಲವನ್ನೂ ಎಳೆದುಕೊಂಡು ರಭಸವಾಗಿ ಪ್ರವಾಹದಂತೆ ಹರಿಯುತ್ತದೆ. ಇದ್ದಕ್ಕಿದಂತೆ ಇಡೀ ಗುಡ್ಡವೇ ಕುಸಿದುಬಿದ್ದಂತಾಗುತ್ತದೆ.

ಭಾರಿ ಪ್ರಮಾಣದಲ್ಲಿ ಮಳೆಯಾದಾಗ, ಮಳೆಯ ನೀರಿನಿಂದ ಒದ್ದೆಯಾಗುವ ಮಣ್ಣು, ಭಾರವಾಗಿ ಗುರುತ್ವಾಕರ್ಷಣೆಯಿಂದಾಗಿ ಜಾರ ತೊಡಗುತ್ತದೆ. ಈ ಮೊದಲು ಗುರುತಿಸಲಾದ ಪ್ರದೇಶಗಳಲ್ಲಿ ಹೀಗೆ ಮಣ್ಣು, ಕಲ್ಲುಗಳು ಸೂಕ್ಷ್ಮವಾಗಿ ಜಾರತೊಡಗಿರುವುದನ್ನು ಗುರುತಿಸಿ, ಅಧ್ಯಯನ ಮಾಡಲಾಗುತ್ತದೆ. ಭೂಪ್ರದೇಶವನ್ನು ಮರಳಿನ ಕಣ ಕಣದಷ್ಟು ಸೂಕ್ಷ್ಮವಾಗಿ ಮಾಡುವ ಇಂತಹ ವೈಜ್ಞಾನಿಕ ವಿಶ್ಲೇಷಣೆ ಮತ್ತು ಅಧ್ಯಯನದಿಂದಾಗಿ, ಮುಂದಿನ 15 ದಿನಗಳಲ್ಲಿ ಯಾವ ಪ್ರದೇಶದಲ್ಲಿ ಮತ್ತು ಎಷ್ಟು ಭೂಕುಸಿತವುಂಟಾಗಬಹುದು ಎಂದು ಮುನ್ನೆಚರಿಕೆಯನ್ನು ನೀಡಲು ಸಾಧ್ಯವಾಗುತ್ತದೆ.

ಗುಡ್ಡಗಾಡು ಪ್ರದೇಶದಲ್ಲಿ ಇಷ್ಟು ಸೂಕ್ಷ್ಮವಾಗಿ ಅಧ್ಯಯನ ಮಾಡಲು ವಿಶೇಷ ರೇಡಾರ್ಗಳನ್ನು ಬಳಸಲಾಗುತ್ತದೆ. 2ರಿಂದ 20 ಕಿಲೋಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ, ಒಂದು ಮಿಲಿಮೀಟರ್ಗಿಂತ ಕಡಿಮೆ ಪ್ರದೇಶದಲ್ಲಿ ಮಣ್ಣು, ಕಲ್ಲುಗಳು ಸ್ಥಾನಪಲ್ಲಟಗೊಂಡರೂ ಗುರುತಿಸುವ ಸಾಮರ್ಥ್ಯವನ್ನು ಈ ವಿಶೇಷ ಡಾಪ್ಲರ್ ರೇಡಾರ್ಗಳು ಹೊಂದಿರುತ್ತವೆ. ದಿನರಾತ್ರಿಯೆನ್ನದೆ, ಎಂತಹ ಹವಾಮಾನ ಪರಿಸ್ಥಿತಿಯಲ್ಲೂ ಪ್ರತಿ 6 ನಿಮಿಷಕ್ಕೆ ಒಮ್ಮೆ ಈ ರೀತಿಯ ಮಾಹಿತಿಯನ್ನು ಸಂಗ್ರಹಿಸಿ ಇಂತಹ ರೇಡಾರ್ ನೀಡುತ್ತದೆ. ಸೂಕ್ತವಾದ ಸ್ಥಳಗಳಲ್ಲಿ ಇಂತಹ ರೇಡಾರ್ಗಳನ್ನು ಸ್ಥಾಪಿಸಿ, ಅವುಗಳಿಂದ ದೊರೆಯುವ ಮಾಹಿತಿಯನ್ನು ಸಂಗ್ರಹಿಸಲು ನೆಟ್ವರ್ಕ್ ಸ್ಥಾಪಿಸಿದರೆ ಅಂಥ ಭೂಪ್ರದೇಶಗಳನ್ನು ನಿರಂತರವಾಗಿ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ.

ರೇಡಾರ್ಗಳು ಕಳುಹಿಸುವ ಅಗಾಧ ಪ್ರಮಾಣದ ಮಾಹಿತಿಯನ್ನು ಸಂಸ್ಕರಿಸಲು ಮತ್ತು ವಿಶ್ಲೇಷಣೆ ಮಾಡಲು ವಿಶೇಷ ತಂತ್ರಜ್ಞಾನ ಮತ್ತು ತಂತ್ರಾಂಶಗಳು ಬೇಕಾಗುತ್ತವೆ. ಹೀಗಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಇಲ್ಲಿ ಬಳಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.