ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಸ್‌ವರ್ಡ್‌ ಇಲ್ಲದೆಯೂ ಖಾತೆಗಳಿಗೆ ಪ್ರವೇಶಿಸುವ ಆಯ್ಕೆ ನೀಡಿದ ಮೈಕ್ರೋಸಾಪ್ಟ್‌

Last Updated 17 ಸೆಪ್ಟೆಂಬರ್ 2021, 10:35 IST
ಅಕ್ಷರ ಗಾತ್ರ

ಬಳಕೆದಾರರ ಖಾತೆಗಳನ್ನು ಹೆಚ್ಚು ಸುರಕ್ಷಿತವಾಗಿಸುವ ನಿಟ್ಟಿನಲ್ಲಿ ಮೈಕ್ರೋಸಾಫ್ಟ್ ಕಂಪನಿಯು ಪಾಸ್‌ವರ್ಡ್‌ಗೆ ಪರ್ಯಾಯ ಆಯ್ಕೆಗಳನ್ನು ನೀಡಿದೆ. ಆ ಮೂಲಕ ಪಾಸ್‌ವರ್ಡ್‌ ರಹಿತ ಖಾತೆಗಳನ್ನು ಬಳಕೆದಾರರು ಹೊಂದಬಹುದಾಗಿದೆ ಎಂದು ಕಂಪನಿಯು ಮಾಹಿತಿ ನೀಡಿದೆ.

ಅಕ್ಟೋಬರ್ 5 ರಂದು ವಿಂಡೋಸ್ 11 ಬಿಡುಗಡೆಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ಈ ಸೇವೆ ನೀಡುವ ಇಂಗಿತವನ್ನು ಮೈಕ್ರೋಸಾಫ್ಟ್‌ ಹೊಂದಿದೆ.

ಪಾಸ್‌ವರ್ಡ್‌ಗೆ ಬದಲಾಗಿ ಮೈಕ್ರೋಸಾಫ್ಟ್ ಅಥೆಂಟಿಕೇಟರ್ ಆ್ಯಪ್‌, ವಿಂಡೋಸ್ ಹಲೋ, ಸೆಕ್ಯುರಿಟಿ ಕೀ, ಫಿಂಗರ್‌ಪ್ರಿಂಟ್‌, ಫೇಸ್‌ ಸ್ಕ್ಯಾನರ್‌, ಎಸ್‌ಎಂಎಸ್ ಅಥವಾ ಇಮೇಲ್ ಕೋಡ್‌ಗಳನ್ನು ಬಳಸಿ ಖಾತೆಗಳನ್ನು ಪ್ರವೇಶಿಸಬಹುದು ಎಂದು ಕಂಪನಿಯು ಹೇಳಿದೆ.

ಬಳಕೆದಾರರು ಔಟ್‌ಲುಕ್, ಒನ್ ಡ್ರೈವ್‌, ಮೈಕ್ರೋಸಾಫ್ಟ್ ಫ್ಯಾಮಿಲಿ ಸೇಫ್ಟಿ ಮತ್ತು ಎಕ್ಸ್ ಬಾಕ್ಸ್ ಸಿರೀಸ್ ಎಕ್ಸ್/ಎಸ್‌ನಂತಹ ಸೇವೆಗಳಿಗೆ ಪಾಸ್‌ವರ್ಡ್ ಇಲ್ಲದೇ ಸೈನ್ ಇನ್ ಆಗಲು ಸಾಧ್ಯವಿದೆ.

ವಿಂಡೋಸ್‌ 11ನಲ್ಲಿ ಹೊಸ ಆ್ಯಪ್‌ ಸ್ಟೋರ್‌, ಆ್ಯಂಡ್ರಾಯ್ಡ್‌ ಆ್ಯಪ್‌ಗಳು, ಅತ್ಯುತ್ತಮ ಗ್ರಾಫಿಕ್ಸ್‌ ಇರುವ ಸಾವಿರಕ್ಕೂ ಹೆಚ್ಚು ಗೇಮ್‌ಗಳು, ಅಟೊ ಎಚ್‌ಡಿಆರ್‌ ಇರಲಿವೆ ಎಂದು ಮೈಕ್ರೋಸಾಫ್ಟ್‌ ತಿಳಿಸಿದೆ.

ವಿಂಡೋಸ್‌ 11 ಓಎಸ್‌ ಅತ್ಯಂತ ಸುರಕ್ಷಿತ ಓಎಸ್‌ ಆಗಿದೆ. ಲ್ಯಾಪ್‌ಟಾಪ್‌ನ ಬ್ಯಾಟರಿಯ ಕಾರ್ಯಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT