ಹ್ಯಾಕರ್‌ಗಳಿಗೆ ಮಾಹಿತಿ ಸಿಗುವುದು ಹೇಗೆ?

7

ಹ್ಯಾಕರ್‌ಗಳಿಗೆ ಮಾಹಿತಿ ಸಿಗುವುದು ಹೇಗೆ?

Published:
Updated:
Deccan Herald

‘ನನಗೊಂದು ಇ–ಮೇಲ್‌ ಬಂದಿತ್ತು. ನಿನ್ನ ಕಂಪ್ಯೂಟರ್‌ ಹ್ಯಾಕ್‌ ಮಾಡಿದ್ದೇವೆ. ನೀನು ವಯಸ್ಕರ ವೆಬ್‌ಸೈಟ್‌ ನೋಡುತ್ತಿದ್ದುದನ್ನು ವೆಬ್‌ ಕ್ಯಾಮ್‌ ಮೂಲಕ ಸೆರೆಹಿಡಿದಿದ್ದೇವೆ ಎಂದು ಆ ಮೇಲ್‌ನಲ್ಲಿ ಬರೆಯಲಾಗಿತ್ತು. ಇದೊಂದು ಮೋಸದ ಜಾಲ ಎಂದು ನನಗೆ ತಿಳಿದಿದೆ. ಆದರೆ, ನಾನು ಈ ಮೊದಲು ಹಳೆಯ ಪಾಸ್‌ವರ್ಡ್‌ ಬಳಸುತ್ತಿದ್ದೆ. ಈ ಪಾಸ್‌ವರ್ಡ್‌ನ್ನೇ ಆ ಮೇಲ್‌ನಲ್ಲಿ ದಾಖಲಿಸಲಾಗಿತ್ತು. ನನ್ನ ಮಾಹಿತಿ ಹ್ಯಾಕರ್‌ಗೆ ಹೇಗೆ ಲಭ್ಯವಾಯಿತು’ – ಇದು ಒಬ್ಬಿಬ್ಬರ ಸಮಸ್ಯೆಯಲ್ಲ. ಅನೇಕರಲ್ಲಿ ಇಂತಹ ಅನುಮಾನ ಕಂಡು ಬರುತ್ತದೆ.

ಆನ್‌ಲೈನ್‌ ಬಳಕೆದಾರರಲ್ಲಿ ತಾನು ತಪ್ಪಿತಸ್ಥ ಎಂಬ ಭಾವನೆ ಮೂಡಿಸಿ, ಅವರಿಂದ ಹಣ ಪಡೆಯುವ ಕುತಂತ್ರ ಇದು. ಇದರಲ್ಲಿ ಹೊಸದೇನೂ ಇಲ್ಲ. ಇತ್ತೀಚೆಗೆ ಇಂತಹ ಮೇಲ್‌ಗಳು ಹೆಚ್ಚು ಸದ್ದು ಮಾಡಲಾರಂಭಿಸಿವೆ. ಅವರು ಕಳುಹಿಸುವ ಮೇಲ್‌ನ ಸಬ್ಜೆಕ್ಟ್‌ ಟೈಪಿಸುವ ಜಾಗದಲ್ಲಿಯೇ ನಿಮ್ಮ ಪಾಸ್‌ವರ್ಡ್‌ಗಳನ್ನು ಹಾಕುತ್ತಾರೆ. ಅಂದರೆ, ‘ನಿಮ್ಮ ಮಾಹಿತಿಯು ಅವರ ಬಳಿ ಇದೆ ಎಂಬುದಕ್ಕೆ ‘ಇದೇ ದಾಖಲೆ’ ಎಂದು ತೋರಿಸುವ ಉದ್ದೇಶ ಅವರದು. ಆದರೆ, ಇದು ಹಳೆಯ ಪಾಸ್‌ವರ್ಡ್‌ ಆಗಿರುತ್ತದೆ. 

ಯಾಹೂ, ಇಬೇ, ಸೋನಿ ಪ್ಲೇಸ್ಟೇಷನ್‌ ಹಾಗೂ ಇಂತಹ ಅನೇಕ ಕಂಪನಿಗಳ ವೆಬ್‌ಸೈಟ್‌ಗಳನ್ನು ಸರ್ಚ್‌ ಮಾಡುವಾಗ ನಮೂದಿಸುವ ಪಾಸ್‌ವರ್ಡ್‌ಗಳ ದತ್ತಾಂಶ ಸಂಗ್ರಹವಾಗಿರುತ್ತದೆ. ಅಲ್ಲದೆ, ಅಂತರ್ಜಾಲದಲ್ಲಿ ಈ ದತ್ತಾಂಶಗಳು ಹರಿದಾಡುತ್ತಿರುತ್ತವೆ. ಕಾಳಸಂತೆಯಲ್ಲಿ ಈ ದತ್ತಾಂಶಗಳ ಮಾರಾಟವೂ ನಡೆಯುತ್ತದೆ. ಇದನ್ನೇ ಹ್ಯಾಕರ್‌ಗಳು ಬಳಕೆದಾರರಿಂದ ಹಣ ವಸೂಲಿ ಮಾಡಲು, ಹೆದರಿಸಲು ಬಳಸಿಕೊಳ್ಳುತ್ತಾರೆ. 

ಸೆಕ್ಯುರಿಟಿ ಬ್ಲಾಗ್‌ಗಳ ಸಿಬ್ಬಂದಿ ಹೇಳುವ ಪ್ರಕಾರ, ಈ ರೀತಿಯ ‘ಬ್ಲ್ಯಾಕ್‌ಮೇಲ್‌’ ಸಂದೇಶವನ್ನು ಸ್ವೀಕರಿಸುವ ಬಳಕೆದಾರರಿಗೆ, ಅವರು ಸುಮಾರು ಹತ್ತು ವರ್ಷಗಳ ಹಿಂದೆ ಬಳಸುತ್ತಿದ್ದ ಪಾಸ್‌ವರ್ಡ್‌ಗಳನ್ನೇ ಹಾಕಿರುತ್ತಾರೆ. ಸದ್ಯ ಬಳಕೆಯಲ್ಲಿರುವ ಪಾಸ್‌ವರ್ಡ್‌ಗಳನ್ನು ಈ ರೀತಿ ಸಬ್ಜೆಕ್ಟ್‌ನಲ್ಲಿ ತೋರಿಸುವುದಿಲ್ಲ. ಆದರೆ, ದಶಕಗಳ ಕಾಲ ತಮ್ಮ ಪಾಸ್‌ವರ್ಡ್‌ಗಳನ್ನು ಬದಲಾಯಿಸಿಕೊಳ್ಳದೇ ಇರುವವರಿಗೆ ಇಂತಹ ಸಂದೇಶಗಳು ನೈಜವಾದುದು ಎಂದೆನಿಸುತ್ತದೆ. ಆಗ ಅವರು ಬ್ಲ್ಯಾಕ್‌ಮೇಲ್‌ಗೆ ಒಳಗಾಗುವ, ಹೆದರುವ ಸಾಧ್ಯತೆ ಇರುತ್ತದೆ. 

ನಿಮ್ಮ ಪಾಸ್‌ವರ್ಡ್‌ಗಳನ್ನು ನಿಯಮಿತವಾಗಿ ಬದಲಾಯಿಸಿಕೊಳ್ಳುತ್ತಿರುವುದೇ ಉತ್ತಮ ಸುರಕ್ಷತಾ ಅಭ್ಯಾಸ ಎನಿಸಿಕೊಳ್ಳುತ್ತದೆ. ‘ಬ್ಲ್ಯಾಕ್‌ಮೇಲ್‌’ ಮಾಡುವಂತಹ ಮೇಲ್‌ಗಳು ಬರುತ್ತಿದ್ದರೆ, ಸೈಬರ್‌ ಅಪರಾಧ ಕೇಂದ್ರಕ್ಕೆ ದೂರು ಸಲ್ಲಿಸಬಹುದು. 

ವಿಂಡೋಸ್ ಟ್ರಬಲ್‌ ಶೂಟರ್‌ ಆ್ಯಪ್‌ಗಳ ನಿಜವಾದ ಕೆಲಸವೇನು. ನನಗೇನೂ ಇವು ಅಷ್ಟೊಂದು ಪರಿಣಾಮಕಾರಿ ಎನಿಸಿಲ್ಲ ಎಂದು ಅನೇಕರಿಗೆ ಅನಿಸಿರುತ್ತದೆ. ಅದಕ್ಕೂ ಇಲ್ಲಿ ಉತ್ತರ ಇದೆ. 

ಕಂಪ್ಯೂಟರ್‌ನ ನಿರ್ದಿಷ್ಟ ಕಾರ್ಯವಿಧಾನದಲ್ಲಿ ಸಮಸ್ಯೆ ಉಂಟಾದಾಗ, ಈ ಟ್ರಬಲ್‌ ಶೂಟರ್‌ಗಳು ಪರಿಹಾರ ಒದಗಿಸುತ್ತವೆ. ಬ್ಲೂಟೂತ್‌ ಸಂಪರ್ಕದಲ್ಲಿ ತೊಂದರೆ, ಶಬ್ದದ ಸಮಸ್ಯೆ ಅಥವಾ ವಿಂಡೋಸ್‌ ಅಪ್‌ಡೇಟ್‌ ಮಾಡುವ ಸಂದರ್ಭದಲ್ಲಿ ಇದರ ಬಳಕೆ ಉಪಯುಕ್ತವಾಗಿದೆ. ನೋಂದಾಯಿಸದ ಅಥವಾ ದೋಷಪೂರಿತ ಡೈನಾಮಿಕ್-ಲಿಂಕ್ ಲೈಬ್ರರಿ (ಡಿಎಲ್‌ಎಲ್‌) ಫೈಲ್‌ಗಳು, ಹಳೆಯ ಅಥವಾ ಹಾನಿಗೊಳಗಾದ ಡ್ರೈವ್‌ಗಳು ಅಥವಾ ವಿಂಡೋಸ್ ರಿಜಿಸ್ಟ್ರಿ ಸೆಟ್ಟಿಂಗ್‌ಗಳ ಸಮಸ್ಯೆಗಳ ಪರಿಹಾರಕ್ಕೆ ಪೂರಕವಾಗಿ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ.

ವಿಂಡೋಸ್‌ 10ರಲ್ಲಿ, ಟ್ರಬಲ್‌ಶೂಟರ್‌ ಆ್ಯಪ್‌ ಸಂಗ್ರಹವಿದೆ. ಸೆಟ್ಟಿಂಗ್‌ ಬಾಕ್ಸ್‌ ತೆರೆಯಲು ವಿಂಡೋಸ್‌ ಮತ್ತು ಐ ಕೀಲಿ ಒತ್ತುವ ಮೂಲಕ ಟ್ರಬಲ್‌ಶೂಟರ್‌ ಅಪ್ಲಿಕೇಷನ್‌ ಕಲೆಕ್ಷನ್‌ಗೆ ಹೋಗಬಹುದು. ಅಪ್‌ಡೇಟ್‌ ಮತ್ತು ಸೆಕ್ಯುರಿಟಿಯನ್ನು ಆಯ್ಕೆ ಮಾಡಿ ಟ್ರಬಲ್‌ಶೂಟ್‌ ಆ್ಯಪ್‌ ಡೌನ್‌ಲೋಡ್‌ ಮಾಡಬಹುದು. ವಿಂಡೋಸ್‌ನ ಹಿಂದಿನ ಆವೃತ್ತಿಗಳಲ್ಲಿ ವಿಂಡೋಸ್‌ 10ರಲ್ಲಿ ಮಾಡಿದ ಹಾಗೆ ಸಿಸ್ಟಂ ಕಂಟ್ರೋಲ್‌ ಪ್ಯಾನಲ್‌ ತೆರೆಯುವ ಮೂಲಕ ಟ್ರಬಲ್‌ಶೂಟ್‌ ಐಕಾನ್‌ಗೆ ಹೋಗಬಹುದು. ಕಂಪ್ಯೂಟರ್‌ನಲ್ಲಿ ಕೆಲವೊಮ್ಮೆ ಅಗತ್ಯ ಬದಲಾವಣೆಗಳನ್ನು ಮಾಡುವ ಸಲುವಾಗಿ ಟ್ರಬಲ್‌ಶೂಟರ್‌ ಉಪಕರಣವನ್ನು ಅಳವಡಿಸಲಾಗಿದೆ. ಈ ಉಪಕರಣ ವಿಂಡೋಸ್‌ನ ಒಳಹೊಕ್ಕು ಅದರ ಪ್ರಕ್ರಿಯೆಯನ್ನು ಸರಳವಾಗಿಸಲು ನೆರವಾಗುತ್ತದೆ. 

ಮೈಕ್ರೊಸಾಫ್ಟ್‌ ಹಲವು ದಶಕಗಳಿಂದ ಸ್ವಯಂಚಾಲಿತ ಪರಿಹಾರಗಳನ್ನು ಅಭಿವೃದ್ಧಿಗೊಳಿಸುತ್ತಿದೆ. ಇದನ್ನು ‘ಮೈಕ್ರೊಸಾಫ್ಟ್ ಇಸಿ ಫಿಕ್ಸ್‌’ ಪರಿಹಾರಗಳು ಎಂದು ಕರೆಯಲಾಗುತ್ತದೆ. ಟ್ರಬಲ್‌ಶೂಟರ್‌ನಲ್ಲಿ ಸಮಸ್ಯೆಯಿದ್ದರೆ, ಮೈಕ್ರೊಸಾಫ್ಟ್‌ ಸೈಟ್‌ನಲ್ಲಿ ಇದಕ್ಕೆ ಪರಿಹಾರ ಮಾರ್ಗಗಳನ್ನು ಸೂಚಿಸಲಾಗಿದೆ.

ನ್ಯೂಯಾರ್ಕ್‌ ಟೈಮ್ಸ್‌

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !