ಆನ್‌ಲೈನ್‌ ಹಣಕಾಸು ವಂಚನೆ ಪ್ರಕರಣ ಹೆಚ್ಚಳ

7

ಆನ್‌ಲೈನ್‌ ಹಣಕಾಸು ವಂಚನೆ ಪ್ರಕರಣ ಹೆಚ್ಚಳ

Published:
Updated:

ಹಣಕಾಸು ವ್ಯವಹಾರ ಡಿಜಿಟಲೀಕರಣಗೊಂಡ ಮೇಲೆ ದೇಶದಲ್ಲಿ ಆನ್‌ಲೈನ್‌ ಹಣಕಾಸು ವಂಚನೆ ಪ್ರಕರಣಗಳಲ್ಲಿ ಶೇ 25 ರಷ್ಟು ಹೆಚ್ಚಳವಾಗಿವೆ ಎಂದು  ಸಮೀಕ್ಷೆಯೊಂದು ತಿಳಿಸಿದೆ.

ಜಾಗತಿಕ ಹಣಕಾಸು ಮಾಹಿತಿ ಸಂಸ್ಥೆಯಾಗಿರುವ  ಎಕ್ಸಿಪೀರಿಯನ್ ಸಂಸ್ಥೆ ಈ ಅಧ್ಯಯನ ನಡೆಸಿದೆ.  ಶೇ 24 ರಷ್ಟು ಆನ್‌ಲೈನ್‌ ವಂಚನೆಗಳು, ಬ್ಯಾಂಕ್ ಮತ್ತು ರಿಟೇಲರ್‌ಗಳಿಂದ ನಡೆಯುತ್ತಿವೆ ಎಂದು ಎಕ್ಸಿಪೀರಿಯನ್ ಹೇಳಿದೆ.

ಶೇ 50 ರಷ್ಟು ಭಾರತೀಯರು ತಮ್ಮ ವೈಯಕ್ತಿಕ ಮಾಹಿತಿಯನ್ನು 
ಬ್ಯಾಂಕ್‌ಗಳ ಜತೆ ಹಂಚಿಕೊಳ್ಳುತ್ತಾರೆ. ಹಾಗೇ ಶೇ 36 ರಷ್ಟು ಜನರು ಬ್ರ್ಯಾಂಡೆಡ್ ರಿಟೇಲರ್‌ಗಳ ಜೊತೆ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಬ್ಯಾಂಕ್‌ಗಳು ಮೂರನೇ ವ್ಯಕ್ತಿಗಳಿಗೆ ಆನ್‌ಲೈನ್‌

ವಹಿವಾಟಿನ ನಿರ್ವಹಣೆ ನೀಡುವುದರಿಂದ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ಎಕ್ಸಿಪೀರಿಯನ್ ಆತಂಕ ವ್ಯಕ್ತಪಡಿಸಿದೆ. ಏಷ್ಯಾ-ಪೆಸಿಫಿಕ್ ದೇಶಗಳಲ್ಲೇ ಭಾರತ ಶೇ 90 ಡಿಜಿಟಲೀಕರಣಗೊಂಡಿದ್ದರೂ ಆನ್‌ಲೈನ್‌ ಹಣಕಾಸು ವಹಿವಾಟಿನಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ಮೊದಲ ಮೂರು ಸ್ಥಾನಗಳಲ್ಲಿ ಆಸ್ಟ್ರೇಲಿಯಾ, ಹಾಂಕಾಂಗ್‌  ಹಾಗೂ ಚೀನಾ ದೇಶಗಳು ಸೇರಿವೆ.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !