ಮಂಗಳವಾರ, ಆಗಸ್ಟ್ 3, 2021
22 °C

ಪಿಎ ಕಾಲೇಜು ವಿದ್ಯಾರ್ಥಿಗಳ ‘ವಾಟ್ಸ್‌ಕಟ್ ಪ್ರೊ’ಗೆ ಹೆಚ್ಚಿದ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಇಲ್ಲಿನ ಪಿ.ಎ. ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಹಳೆಯ ವಿದ್ಯಾರ್ಥಿಗಳ ತಂಡವು ಅಭಿವೃದ್ಧಿಪಡಿಸಿದ ಕಿರು ವಿಡಿಯೊ ಅಪ್ಲಿಕೇಶನ್ ‘ವಾಟ್ಸ್‌ಕಟ್ ಪ್ರೊ’ಗೆ ಇದೀಗ ಬೇಡಿಕೆ ಹೆಚ್ಚಾಗಿದೆ. ಚೀನಿ ಆ್ಯಪ್‌ಗಳನ್ನು ನಿಷೇಧಿಸಿದ ನಂತರ, ಟಿಕ್‌ಟಾಕ್‌ನಲ್ಲಿ ವಿಡಿಯೊ ಮಾಡುತ್ತಿದ್ದ ಬಳಕೆದಾರರು ಸ್ವದೇಶಿ ಆಪ್ ‘ವಾಟ್ಸ್‌ಕಟ್ ಪ್ರೊ’ಗೆ ಮೊರೆ ಹೋಗಿದ್ದಾರೆ.

ಪಿ.ಎ. ಎಂಜಿನಿಯರಿಂಗ್‌ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಅಂತಿಮ ವರ್ಷದ ವಿದ್ಯಾಭ್ಯಾಸದ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಸುಶಿನ್ ಪಿ.ವಿ., ರಿಜ್ವಾನ್ ಸದಾತ್ ಮತ್ತು ರಮೀಸ್ ಪಿ. ಅವರ ಕನಸಿನ ‘ವಾಟ್ಸ್‌ಕಟ್ ಪ್ರೊ’ ಯೋಜನೆಯನ್ನು 2017ರಲ್ಲಿ ಕಾರ್ಯರೂಪಕ್ಕೆ ತಂದಿದ್ದರು. ಇವರಿಗೆ ಮುಂಬೈನ ಎಸ್‌ಪಿಜೆಐಎಂಆರ್ ಕಾಲೇಜಿನ ಹಳೆಯ ವಿದ್ಯಾರ್ಥಿ ವಿಕಾಸ್ ಶ್ರೀವಾಸ್ತವ ಸಾಥ್ ನೀಡಿದ್ದರು.

ಸದ್ಯಕ್ಕೆ 17 ಲಕ್ಷಕ್ಕೂ ಅಧಿಕ ಡೌನ್‌ಲೋಡ್‌ಗಳನ್ನು ಹೊಂದಿರುವ ಈ ಆ್ಯಪ್‌ನ ಪ್ಲಾಟ್‌ಫಾರ್ಮ್‌ನಲ್ಲಿ 90 ಲಕ್ಷಕ್ಕೂ ಹೆಚ್ಚು ಸ್ಟೋರೀಸ್ ಹಂಚಿಕೊಳ್ಳಲಾಗಿದೆ. ವಾಟ್ಸ್‌ಕಟ್ ಪ್ರೊ, ನಿಷೇಧಕ್ಕೆ ಒಳಗಾದ ಟಿಕ್‌ಟಾಕ್‌ನ ಪರಿಪೂರ್ಣ ಪರ್ಯಾಯ ಎಂದು ಜನಮನ್ನಣೆ ಪಡೆಯುತ್ತಿದೆ. ಅಲ್ಲದೆ ವಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಐಎಂಒ ಸೇರಿದಂತೆ ಅನೇಕ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮತ್ತು ಚಾಟ್ ಮೆಸೆಂಜರ್‌ಗಳಲ್ಲಿ ವಿಡಿಯೊ ಮತ್ತು ಆಡಿಯೊಗಳನ್ನು ರಚಿಸಲು ಮತ್ತು ಹಂಚಿಕೊಳ್ಳಲು ಇದು ಸುಧಾರಿತ ಅಪ್ಲಿಕೇಶನ್ ಆಗಿದೆ.

ಸಂಸ್ಥೆಯ ಹಳೆವಿದ್ಯಾರ್ಥಿಗಳ ಸಾಧನೆಯನ್ನು ಪಿಎ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಡಾ.ಪಿ.ಎ. ಇಬ್ರಾಹಿಂ, ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ಲಾ ಇಬ್ರಾಹಿಂ, ಪ್ರಾಂಶುಪಾಲರು, ಎಲ್ಲಾ ವಿಭಾಗ ಮುಖ್ಯಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.