ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಶ್ಮಿ ಎಂಬ ಹಿಂದಿ ಮಾತನಾಡುವ ಮೊದಲ ರೋಬೊ!

Last Updated 30 ಆಗಸ್ಟ್ 2018, 14:58 IST
ಅಕ್ಷರ ಗಾತ್ರ

ನವದೆಹಲಿ:ಹಿಂದಿ ಮಾತನಾಡುವ ಮತ್ತು ಮಾನವನಂತೆಯೇ ಕಾಣುವ ರೋಬೊಟ್ (Humanoid robot) ಅನ್ನು ನೋಡಿದ್ದೀರಾ? ಇಲ್ಲವೆಂದಾದಲ್ಲಿ ರಾಂಚಿ ಮೂಲದ ಸಾಫ್ಟ್‌ವೇರ್‌ ಎಂಜಿನಿಯರ್‌ ರಂಜಿತ್‌ ಶ್ರೀವಾಸ್ತವ (38) ಅವರು ಅಭಿವೃದ್ಧಿಪಡಿಸಿರುವ ‘ರಶ್ಮಿ’ಯನ್ನು ನೋಡಿ!

ಹಾಂಕಾಂಗ್‌ ಮೂಲದ ಹ್ಯಾನ್ಸನ್‌ ರೋಬೊಟಿಕ್ಸ್‌ ಎಂಬ ಕಂಪನಿ ಅಭಿವೃದ್ಧಿಪಡಿಸಿರುವ ಮಾನವನಾಕೃತಿಯ ‘ಸೋಫಿಯಾ’ ರೋಬೊದ ಭಾರತದ ಆವೃತ್ತಿಯನ್ನು ರಂಜಿತ್ ಅಭಿವೃದ್ಧಿಪಡಿಸಿದ್ದಾರೆ. ಅದಕ್ಕೆ ‘ರಶ್ಮಿ’ ಎಂದು ಹೆಸರಿಟ್ಟಿದ್ದಾರೆ. ಇದು ಹಿಂದಿ ಮಾತನಾಡುವ ವಿಶ್ವದ ಮೊದಲ ರೋಬೊ ಎಂದು ರಂಜಿತ್ ಹೇಳಿಕೊಂಡಿದ್ದಾರೆ.

ಇದು ಹಿಂದಿ ಮಾತ್ರವಲ್ಲದೆ ಇಂಗ್ಲೀಷ್‌, ಮರಾಠಿ, ಭೋಜ್ಪುರಿ ಭಾಷೆಗಳನ್ನು ಮಾತನಾಡುತ್ತದೆ. ಜತೆಗೆ, ಲಿಪ್‌ ಸಿಂಕಿಂಗ್‌ ಮಾಡುವ ಸಾಮರ್ಥ್ಯ ಹೊಂದಿದೆ. ಭಾಷಾ ವಿವರಣೆ (linguistic interpretation), ಕೃತಕ ಬುದ್ಧಿಮತ್ತೆ (artificial intelligence), ಧ್ವನಿ ಹಾಗೂ ಮುಖದ ಚಹರೆಯನ್ನು ಗುರುತಿಸುವಿಕೆಯ ತಂತ್ರಜ್ಞಾನ ಒಳಗೊಂಡಿದ್ದು, ಮನುಷ್ಯನಂತೆಯೇ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ.

ಇದನ್ನು ಅಭಿವೃದ್ಧಿಪಡಿಸಲು ರಂಜಿತ್ ಅವರು ಸುಮಾರು 2 ವರ್ಷ ಸಮಯ ತೆಗೆದುಕೊಂಡಿದ್ದು, ₹50 ಸಾವಿರ ವೆಚ್ಚ ತಗುಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT