ಸ್ಯಾನ್ ಫ್ರಾನ್ಸಿಸ್ಕೊ: ಅಮೆರಿಕದ ತನ್ನ ಪ್ರೀಮಿಯಂ ಚಂದಾದಾರರಿಗೆ ಎಡಿಟ್ ಬಟನ್ ಪರಿಚಯಿಸಲಾಗುತ್ತಿದೆ ಎಂದು ಟ್ವಿಟರ್ ಕಂಪನಿ ಹೇಳಿದೆ. ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಲ್ಲಿ ವ್ಯಾಪಕ ಬೇಡಿಕೆ ಇದ್ದ ಈ ವೈಶಿಷ್ಟ್ಯವನ್ನು ಪರಿಚಯಿಸಿದ ಕೆಲ ದಿನಗಳ ನಂತರ ಅಮೆರಿಕದಲ್ಲೂ ಈ ಪ್ರಯೋಗಕ್ಕೆ ಸಂಸ್ಥೆ ಮುಂದಾಗಿದೆ.

ಟ್ವಿಟರ್ ಬಳಕೆದಾರರು ತಮ್ಮ ಟ್ವೀಟ್ಗಳನ್ನು ಪ್ರಕಟಿಸಿದ ನಂತರ ಎಡಿಟ್ ಮಾಡುವ ಆಯ್ಕೆ ಬೇಕು ಎಂದು ಹಲವು ವರ್ಷಗಳಿಂದ ಬೇಡಿಕೆ ಇಡುತ್ತಿದ್ದಾರೆ. ಪ್ರಮುಖವಾಗಿ, ಟೈಪ್ ಮಾಡುವಾಗ ಆದ ಅಕ್ಷರ ದೋಷಗಳನ್ನು ಸರಿಪಡಿಸಲು ಈ ಆಯ್ಕೆ ಬೇಕು ಎಂಬುದು ಅವರ ಒತ್ತಾಯವಾಗಿತ್ತು.

ಈ ನಡುವೆ, ಟ್ವೀಟ್ಗಳನ್ನು ಎಡಿಟ್ ಮಾಡಲು ಅನುಮತಿಸುವುದು ತಪ್ಪು ಮಾಹಿತಿಯ ಹರಡುವಿಕೆಯಂತಹ ಹಾನಿಕಾರಕ ಪರಿಣಾಮಗಳಿಗೆ ಕಾರಣವಾಗಬಹುದೇ ಎಂಬ ಕುರಿತು ಟ್ವಿಟರ್ ಮತ್ತು ಅದರ ಮೇಲ್ವಿಚಾರಕರು ಚರ್ಚಿಸಿ ಒಂದು ತೀರ್ಮಾನಕ್ಕೆ ಬಂದಿದ್ದಾರೆ.

ಟ್ವಿಟರ್ ಬ್ಲೂಗಾಗಿ ತಿಂಗಳಿಗೆ 4.99 ಡಾಲರ್ ಪಾವತಿಸುವ ಚಂದಾದಾರರು ತಮ್ಮ ಟ್ವೀಟ್ಗಳನ್ನು ಪ್ರಕಟಿಸಿದ 30 ನಿಮಿಷಗಳಲ್ಲಿ ಕೆಲವು ಬಾರಿ ಎಡಿಟ್ ಮಾಡಲು ಸಾಧ್ಯವಾಗುತ್ತದೆ ಎಂದು ಟ್ವಿಟರ್ ತಿಳಿಸಿದೆ.

ಜೊತೆಗೆ, ಪೋಸ್ಟ್ ಅನ್ನು ಕೊನೆಯದಾಗಿ ಯಾವಾಗ ಎಡಿಟ್ ಮಾಡಲಾಯಿತು ಎಂಬುದನ್ನು ಪ್ರದರ್ಶಿಸಲು ಎಡಿಟ್ ಮಾಡಿದ ಟ್ವೀಟ್ಗಳಲ್ಲಿ ಒಂದು ಐಕಾನ್ ಮತ್ತು ಟೈಮ್ಸ್ಟ್ಯಾಂಪ್ ಇರುತ್ತದೆ. ಬಳಕೆದಾರರು ಎಡಿಟ್ ಟ್ವೀಟ್ನ ಲೇಬಲ್ ಅನ್ನು ಕ್ಲಿಕ್ ಮಾಡಿ ಎಡಿಟ್ ಮಾಡಲಾದ ಟ್ವೀಟ್ನ ಇತಿಹಾಸ ಮತ್ತು ಪೋಸ್ಟ್ನ ಹಿಂದಿನ ಆವೃತ್ತಿಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ ಎಂದು ಕಂಪನಿ ಹೇಳಿದೆ.

ಸದ್ಯ, ಪ್ರೀಮಿಯಂಚಂದಾದಾದರು ತಾವು ಪ್ರಕಟಿಸುವ ಟ್ವೀಟ್ ಅನ್ನು ಒಂದು ನಿಮಿಷದವರೆಗೆ ಹೋಲ್ಡ್ ಮಾಡಿ, ಪರಿಶೀಲಿಸಿ ಪ್ರಕಟಿಸುವ ಅಥವಾ ಅನ್ಡು ಮಾಡುವ ಅವಕಾಶ ಹೊಂದಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೊ ಮೂಲದ ಟ್ವಿಟರ್ ಪ್ರಸ್ತುತ ಹಲವು ತಿಂಗಳುಗಳಿಂದ ನಡೆಯುತ್ತಿರುವ ಮಾರಾಟ ಒಪ್ಪಂದದ ವಿವಾದದ ಇತ್ಯರ್ಥದತ್ತ ದೃಷ್ಟಿ ನೆಟ್ಟಿದೆ.ಉದ್ಯಮಿ ಎಲೋನ್ ಮಸ್ಕ್ 44 ಬಿಲಿಯನ್ ಡಾಲರ್ ಕೊಟ್ಟು ಟ್ವಿಟರ್ ಕಂಪನಿ ಖರೀದಿಗೆ ಪ್ರಸ್ತಾಪ ಇಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.