ಸೋಮವಾರ, ಜನವರಿ 17, 2022
27 °C

ಭಾರತದಲ್ಲಿ ‘password’ ತುಂಬಾ ದುರ್ಬಲ! ಇಲ್ಲಿವೆ ಸಾಮಾನ್ಯ ಪಾಸ್‌ವರ್ಡ್‌ಗಳ ಪಟ್ಟಿ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತದಲ್ಲಿ ‘password’ ಎಂಬ ಗುಪ್ತಪದ (ಪಾಸ್‌ವರ್ಡ್‌) ಅನ್ನು ಅತ್ಯಂತ ಸಾಮಾನ್ಯ ಎಂಬಂತೆ ಬಳಸಲಾಗುತ್ತಿದೆ. ಈ ಪಾಸ್‌ವರ್ಡ್‌ಗಳಿಂದ ಸೆಟ್‌ ಮಾಡಲಾದ ತಾಣಗಳನ್ನು ಹ್ಯಾಕರ್‌ಗಳು ಸೆಕೆಂಡ್‌ಗಿಂತಲೂ ಕಡಿಮೆ ಅವಧಿಯಲ್ಲಿ ಭೇದಿಸುತ್ತಿದ್ದಾರೆ ಎಂದು ಗೊತ್ತಾಗಿದೆ.

ಪಾಸ್‌ವರ್ಡ್ ನಿರ್ವಾಹಕ ಸಂಸ್ಥೆ ‘ನಾರ್ಡ್‌ಪಾಸ್’ ಪಾಸ್‌ವರ್ಡ್‌ಗಳ ಮೇಲಿನ ತನ್ನ ಈ ವರ್ಷದ ಅಧ್ಯಯನವನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ‘password’ ಅತ್ಯಂತ ದುರ್ಬಲ ಎನಿಸಿಕೊಂಡಿದೆ.

ಅದರ ನಂತರ ‘12345’, ‘123456’, ‘1234567’, ‘12345678’, ‘123456789’, ‘1234567890’, ‘india123’, ‘qwerty’ ಮತ್ತು ‘abc123’ ಎಂಬ ಪಾಸ್‌ವರ್ಡ್‌ಗಳು ಸಾರ್ವತ್ರಿಕವಾಗಿ ಬಳಕೆಯಾಗುತ್ತಿವೆ. ‘xxx’, ‘iloveyou’, ‘krsihna’, ‘omsairam’ ಮತ್ತು ‘jaimatadi’ ಎಂಬ ಪಾಸ್‌ವರ್ಡ್‌ಗಳೂ ಸಾಮನ್ಯವಾಗಿ ಸೆಟ್ ಆಗುತ್ತಿವೆ ಎಂದು ‘ನಾರ್ಡ್‌ಪಾಸ್‌’ ಹೇಳಿದೆ.

ಸೈಬರ್‌ ಭದ್ರತೆಗೆ ಸಂಬಂಧಿಸಿದ ಘಟನೆಗಳ ಮೇಲೆ ಅಧ್ಯಯನ ನಡೆಸುವ ಸ್ವತಂತ್ರ ಸಂಶೋಧನಾ ತಜ್ಞರ ಸಹಯೋಗದೊಂದಿಗೆ ‘ನಾರ್ಡ್‌ಪಾಸ್’ ಈ ಪಟ್ಟಿ ಸಿದ್ಧಪಡಿಸಿದೆ. ಇದಕ್ಕಾಗಿ 4 ಟಿ.ಬಿ ದತ್ತಾಂಶಗಳನ್ನು ತಜ್ಞರು ಅಧ್ಯಯನ ಮಾಡಿದ್ದಾರೆ ಎಂದು ನಾರ್ಡ್‌ಪಾಸ್‌ ಹೇಳಿದೆ.

50 ದೇಶಗಳ ಡೇಟಾವನ್ನು ಸಂಶೋಧಕರು ವಿವಿಧ ಭಾಗಗಳಾಗಿ ವರ್ಗೀಕರಿಸಿದ್ದಾರೆ. ಇದು ದೇಶ, ಲಿಂಗ ಆಧಾರದಲ್ಲಿ ಅಧ್ಯಯನ ನಡೆಸಲು ಅವಕಾಶ ಮಾಡಿಕೊಟ್ಟಿತು ಎಂದು ಸಂಸ್ಥೆ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು