ಬೆಂಗಳೂರು:ಅಲರ್ಜಿ, ಕೆಮ್ಮು, ಉಸಿರಾಟದ ಸಮಸ್ಯೆ ಇರುವವರಿಗಾಗಿ ಬೆಂಗಳೂರಿನ ಪವರ್ ಫ್ಯಾಕ್ಟರ್ ಎಂಬ ಸಂಸ್ಥೆಯು ಗಾಳಿಯಿಂದ ಹರಡುವ ಸೋಂಕು ತಡೆಯುವ ‘ಝ್ಯಾಪ್ಸಿ’ ಎಂಬ ಉಪಕರಣವನ್ನು ಅಭಿವೃದ್ಧಿ ಪಡಿಸಿದೆ.

‘ಸೋಂಕು ಗಾಳಿಯಿಂದಲೂ ಹರಡುತ್ತವೆ. ಅವುಗಳನ್ನು ನಿಯಂತ್ರಿಸುವ ಸಲುವಾಗಿ ಈ ಉಪಕರಣ ಅಭಿವೃದ್ಧಿಪಡಿಸಲಾಗಿದೆ. ಇದು, ನಕಾರಾತ್ಮಕ ಅಯಾನ್ಗಳನ್ನು ಹೊರಬಿಡುತ್ತದೆ. ಇದರಿಂದ ಸೋಂಕು ಹತ್ತಿರಕ್ಕೆ ಸುಳಿಯದು. ಈ ಸಣ್ಣದಾದ ಉಪಕರಣವನ್ನು ಕತ್ತಿನಲ್ಲಿ ಧರಿಸಬಹುದು’ ಎಂದುಪವರ್ ಫ್ಯಾಕ್ಟರ್ ಸಂಸ್ಥೆಯ ಸ್ಥಾಪಕ ಶ್ರೀರಾಮ್ ಮೊಕಾಶಿ ತಿಳಿಸಿದರು.

‘ಧೂಳಿನ ಅಲರ್ಜಿ, ಅತಿಯಾದ ಕೆಮ್ಮು ಹಾಗೂ ಉಸಿರಾಟ ಸಮಸ್ಯೆ ಇರುವವರು ಈ ಉಪಕರಣ ಬಳಸಬಹುದು.ಇದನ್ನು ಕಳೆದ ಡಿಸೆಂಬರ್ನಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಯಿತು. ದೇಶದಾದ್ಯಂತ ಈವರೆಗೆ 200ಕ್ಕೂ ಹೆಚ್ಚು ಮಂದಿ ಈ ಉಪಕರಣ ಖರೀದಿಸಿದ್ದು, ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ಇದನ್ನು 20 ನಿಮಿಷದವರೆಗೆ ಚಾರ್ಜ್ ಮಾಡಿದರೆ 10 ಗಂಟೆ ಕೆಲಸ ಮಾಡುತ್ತದೆ. ಇದನ್ನು ಫ್ಲಿಪ್ಕಾರ್ಟ್ ಹಾಗೂ ಅಮೆಜಾನ್ ಮೂಲಕವೂ ಖರೀದಿಸಬಹುದು’ ಎಂದು ಮಾಹಿತಿ ನೀಡಿದರು.

ಸಂಪರ್ಕ:6360062061

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.