ಸೋಮವಾರ, ಫೆಬ್ರವರಿ 17, 2020
15 °C
ಪತ್ನಿ ಮೇಲಿನ ಕೋಪಕ್ಕೆ ಕೃತ್ಯ * ರೌಡಿಶೀಟರ್‌ ಕೃತ್ಯ‌

ಮಗುವಿಗೆ ಮದ್ಯ ಕುಡಿಸಿ ವಿಕೃತಿ ಮೆರೆದ ಅಪ್ಪ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪತ್ನಿ ಮೇಲಿನ ಕೋಪಕ್ಕೆ ರೌಡಿಶೀಟರ್ ಪತಿಯೊಬ್ಬ ತನ್ನ ಮಗುವಿಗೆ ಮದ್ಯ ಕುಡಿಸಿ ವಿಕೃತಿ ಮೆರೆದಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ರೌಡಿಶೀಟರ್ ಕುಮಾರೇಶ್ ಈ ಕೃತ್ಯ ಎಸಗಿದ್ದು, ಸಹಾಯ ಕೇಳಿ ಪತ್ನಿ ನಗರ ಪೊಲೀಸ್ ಆಯುಕ್ತ ಕಚೇರಿಯಲ್ಲಿರುವ ವನಿತಾ ಸಹಾಯವಾಣಿ ಕೇಂದ್ರ ಕಚೇರಿ ಸಂಪರ್ಕಿಸಿದಾಗ ಕೃತ್ಯ ಗೊತ್ತಾಗಿದೆ. ಘಟನೆ ಬಗ್ಗೆ ವನಿತಾ ಸಹಾಯವಾಣಿ ಸಿಬ್ಬಂದಿ ಸ್ಥಳೀಯ ಪೊಲೀಸರಿಗೆ ವಿಷಯ ತಿಳಿಸಿದ್ದು, ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಡುತ್ತಿದ್ದಾರೆ.

ಕುಮಾರೇಶ್ ಪ್ರೀತಿಸಿ ಮದುವೆಯಾಗಿದ್ದ. ಪತಿ ರೌಡಿಶೀಟರ್, ದರೋಡೆಕೋರ ಎಂಬುದು ವಿವಾಹದ ಬಳಿಕ ಯುವತಿಗೆ ಗೊತ್ತಾಗಿತ್ತು. ಈ ದಂಪತಿಗೆ ಗಂಡು ಮಗುವಿದೆ. ಆದರೂ, ಸಂಸಾರ ಮಾಡಿಕೊಂಡಿದ್ದರು. ಆತನ ಕಿರುಕುಳ ಹೆಚ್ಚಾದಾಗ ಪ್ರತ್ಯೇಕವಾಗಿ ನೆಲೆಸಿದ್ದರು.

ಪತ್ನಿ ತನ್ನನ್ನು ದೂರ ಮಾಡಿದ್ದಾಳೆ ಎಂಬ ಸಿಟ್ಟಿಗೆ ಆತ, ಮನೆಯಲ್ಲಿದ್ದ ನಾಲ್ಕೂವರೆ ವರ್ಷದ ಮಗುವಿಗೆ ಮದ್ಯ ಕುಡಿಸಿದ್ದಾನೆ. ಅಲ್ಲದೆ, ಕುಡಿದ ಮತ್ತಿನಲ್ಲಿ ಮಗು ಮಾತನಾಡುವ ದೃಶ್ಯವನ್ನು ಚಿತ್ರೀಕರಿಸಿದ್ದಾನೆ.

ಪತಿಯ ಕಿರುಕುಳದಿಂದ ನೊಂದ ಯುವತಿ, ವನಿತಾ ಸಹಾಯ ವಾಣಿ ಸಂಪರ್ಕಿಸಿದ್ದರು. ಯುವತಿಯನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿದಾಗ ಪತಿ ರೌಡಿಶೀಟರ್ ಆಗಿದ್ದು, ಆತನ ಜೊತೆ ಜೀವನ ಸಾಗಿಸುವುದು ಸಾಧ್ಯವಿಲ್ಲ ಎಂದಿದ್ದರು. ಅಲ್ಲದೆ, ತನ್ನ ಮೂಗನ್ನು ಸ್ಕ್ರೂಡ್ರೈವರ್‌ನಿಂದ ಚುಚ್ಚಿ ಗಾಯಗೊಳಿಸಿ‌ ಪತಿ ವಿಕೃತಿ ಮೆರೆದಿದ್ದ ಬಗ್ಗೆಯೂ ಆಕೆ ಹೇಳಿಕೊಂಡಿದ್ದರು.

ರೌಡಿಶೀಟರ್‌ಗೆ ಆಪ್ತ ಸಮಾಲೋಚನೆ ಮಾಡಲು ಸಾಧ್ಯವಿಲ್ಲ ಎಂದು ತಿಳಿದು ಸಹಾಯವಾಣಿ ಕೇಂದ್ರದ ಸಿಬ್ಬಂದಿ, ಆತನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು