ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈರಲ್ ವಿಡಿಯೊ: ಜೀವಂತ ಇಲಿಮರಿಯನ್ನು ಸಾಸ್‌ನಲ್ಲಿ ಮುಳುಗಿಸಿ ತಿಂದ!

Last Updated 28 ಜನವರಿ 2020, 6:58 IST
ಅಕ್ಷರ ಗಾತ್ರ

ಬೀಜಿಂಗ್:ಆಹಾರ ಪದ್ಧತಿಯಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಹಾಗೂ ಆಯಾ ಪ್ರದೇಶಕ್ಕನುಗುಣವಾಗಿ ವ್ಯತ್ಯಾಸ ಇರಬಹುದು. ಭಾರತದ ಮಾಂಸಾಹಾರಿಗಳು ಆಹಾರ ಎಂದು ಪರಿಗಣಿಸದ ಅನೇಕ ಪ್ರಾಣಿಗಳನ್ನು ಚೀನಾದವರು ತಿನ್ನುವುದೂ ನಿಜ. ಆದರೆ, ವ್ಯಕ್ತಿಯೊಬ್ಬ ಜೀವಂತ ಇಲಿಮರಿಯನ್ನು ಸಾಸ್‌ನಲ್ಲಿ ಮುಳುಗಿಸಿ ತಿನ್ನುತ್ತಿರುವ ವಿಡಿಯೊವೊಂದು ಟ್ವಿಟರ್‌ನಲ್ಲಿ ವೈರಲ್ ಆಗಿದೆ.

‘ಫ್ರೀ ವಿದ್ ಹಾಂಕಾಂಗ್’ ಎಂಬ ಟ್ವಿಟರ್‌ ಹ್ಯಾಂಡಲ್‌ನಲ್ಲಿ ವಿಡಿಯೊ ಪೋಸ್ಟ್‌ ಮಾಡಲಾಗಿದೆ. ಇನ್ನೊಬ್ಬ ವ್ಯಕ್ತಿಯ ಜತೆ ಸಂಭಾಷಣೆ ನಡೆಸುತ್ತಲೇ ವ್ಯಕ್ತಿಯೊಬ್ಬ ಎದುರಿನ ತಟ್ಟೆಯಲ್ಲಿರುವ ಜೀವಂತ ಇಲಿಮರಿಗಳನ್ನು ಸಾಸ್‌ನಲ್ಲಿ ಮುಳುಗಿಸಿ ಒಂದೊಂದಾಗಿ ತಿನ್ನುತ್ತಿರುವ ದೃಶ್ಯ ವಿಡಿಯೊದಲ್ಲಿದೆ. ಜತೆಗೆ, ‘ಈ ದೃಶ್ಯವನ್ನು ನಂಬಲು ಸಾಧ್ಯವಿಲ್ಲ. ಈ ನಾಗರಿಕ ಸಮಾಜದಲ್ಲಿ ನವಜಾತ ಇಲಿಮರಿಗಳನ್ನು ತಿನ್ನುತ್ತಿರುವುದು ಅಸಹನೀಯವಾಗಿದೆ’ ಎಂಬ ಒಕ್ಕಣೆಯೂ ಇದೆ. ಈ ಟ್ವೀಟ್ ಈಗಾಗಲೇ 3.4 ಸಾವಿರ ರಿಟ್ವೀಟ್ ಆಗಿದ್ದು, 4.7 ಸಾವಿರ ಲೈಕ್ಸ್‌ ಗಳಿಸಿದೆ.

ಡೇಲಿ ಮೇಲ್ ವರದಿ ಪ್ರಕಾರ, ಇದು ಆಗ್ನೇಯ ಚೀನಾದ ಗುವಾಂಗ್‌ಡಾಂಗ್ ಪ‍್ರಾಂತ್ಯದ ಒಂದು ಆಹಾರವಾಗಿದ್ದು, ಇದನ್ನು ನಿಷೇಧಿಸಲಾಗಿದೆ. ಆದಾಗ್ಯೂ, ಬೀದಿ ಬದಿಯ ಕೆಲವು ಹೋಟೆಲ್‌ಗಳಲ್ಲಿ ಈಗಲೂ ಲಭ್ಯವಿದೆಯಂತೆ.

ಇದಕ್ಕೆ ಟ್ವಿಟರ್‌ನಲ್ಲಿ ಅನೇಕರು ಆಕ್ಷೇಪ ಮತ್ತು ಆಘಾತ ವ್ಯಕ್ತಪಡಿಸಿದ್ದಾರೆ. ‘ಓದೇವರೇ, ನವಜಾತ ಇಲಿಗಳನ್ನು ಅದ್ಹೇಗೆ ತಿನ್ನುತ್ತಿದ್ದಾನೆ? ಅಸಹ್ಯಕರ’ ಎಂದು ವ್ಯಕ್ತಿಯೊಬ್ಬರು ಉಲ್ಲೇಖಿಸಿದ್ದಾರೆ.

ಚೀನಾದಲ್ಲಿ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲೇ ಈ ವಿಡಿಯೊ ವೈರಲ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT