ಶುಕ್ರವಾರ, ಸೆಪ್ಟೆಂಬರ್ 18, 2020
28 °C
ಡಿಸ್ನಿ ವರ್ಲ್ಡ್‌

ಮುದ್ದಿನ ಡೊನಾಲ್ಡ್‌ ಡಕ್‌ ಮಡಿಲಲ್ಲಿ ಮಲಗಿದ ಶ್ವಾನ: ವೈರಲ್‌ ವಿಡಿಯೊ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜನಪ್ರಿಯ ಡಿಸ್ನಿ ಪಾತ್ರವಾದ ಡೊನಾಲ್ಡ್‌ ಡಕ್‌ ಭೇಟಿಯಾಗಿರುವ ಶ್ವಾನವೊಂದು ಅದರ ತೊಡೆಯ ಮೇಲೆ ಮಲಗಿ ತನ್ನ ಪ್ರೀತಿ ಹಂಚಿಕೊಂಡಿದೆ. ಇದರ ವಿಡಿಯೊ ಇತ್ತೀಚೆಗೆ ವೈರಲ್‌ ಆಗಿದೆ. 

ಇಂದಿಗೂ ಬಹುತೇಕ ಮಕ್ಕಳ ಮುದ್ದಿನ ಕಾರ್ಟೂನ್‌ ಪಾತ್ರಗಳಲ್ಲಿ ಡೊನಾಲ್ಡ್‌ ಡಕ್‌ ಮತ್ತು ಮಿಕಿ ಮೌಸ್‌ ಸಹ ಸ್ಥಾನ ಉಳಿಸಿಕೊಂಡಿವೆ. ಆದರೆ, ಶ್ವಾನಗಳಿಗೂ ಕಾರ್ಟೂನ್‌ ಪಾತ್ರಗಳಿಗೂ ಎಲ್ಲಿನ ನಂಟು? ಎರಡು ವರ್ಷ ವಯಸ್ಸಿನ ನಾಲಾ ಹೆಸರಿನ ನಾಯಿ ಡಿಸ್ನಿ ವರ್ಲ್ಡ್‌ನಲ್ಲಿ ಡೊನಾಲ್ಡ್‌ ಡಕ್‌ ಕಾಣುತ್ತಿದ್ದಂತೆ ಅದರ ಮಡಿಲಲ್ಲಿ ಮಲಗುವ ಗಮನ ಸೆಳೆದಿದೆ. ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿರುವ ಇದರ ವಿಡಿಯೊ ಈಗಾಗಲೇ 78 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. 

ಡೊನಾಲ್ಡ್‌ ಡಕ್‌ನನ್ನು ಎಷ್ಟೋ ವರ್ಷಗಳ ಪರಿಚಿತನಂತೆ ಕಂಡಿರುವ ಶ್ವಾನ, ನಿರಾತಂಕವಾಗಿ ಮಡಿಲಲ್ಲಿ ಮಲಗಿದೆ. ಡೊನಾಲ್ಡ್‌ ಡಕ್‌ ಅದರ ತಲೆ, ಮೈಮೇಲಿನ ಕೂದಲನ್ನು ನೇವರಿಸುತ್ತ ಮುದ್ದಿಸಿದೆ. ಟ್ವಿಟರ್‌ನಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಸಹ ವಿಡಿಯೊ ಮರುಹಂಚಿಕೆಯಾಗಿದ್ದು, ಲಕ್ಷಾಂತರ ಲೈಕ್‌ಗಳನ್ನು ಗಿಟ್ಟಿಸಿದೆ. ಶ್ವಾನ ಪ್ರಿಯರು ಹಾಗೂ ಡೊನಾಲ್ಡ್‌ ಡಕ್‌ ಪಾತ್ರವನ್ನು ಮೆಚ್ಚಿಕೊಂಡಿರುವವರು ಹಲವು ರೀತಿಯ ಪ್ರತಿಕ್ರಿಯೆಗಳನ್ನು ದಾಖಲಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು