ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಮರಿ ಜಿರಾಫೆ ಜತೆಯಾದ ಶ್ವಾನ; ಹಂಟರ್‌–ಜಾಝ್‌ ಸ್ನೇಹ

Last Updated 25 ನವೆಂಬರ್ 2019, 10:20 IST
ಅಕ್ಷರ ಗಾತ್ರ

ತಾಯಿಯಿಂದ ದೂರವಾಗಿ ಒಂಟಿಯಾಗಿ ನರಳುತ್ತಿದ್ದ ಜಿರಾಫೆ ಮರಿಗೆ ಈಗ ಶ್ವಾನವೇ ಆಪ್ತ ಸ್ನೇಹಿತ. ಎರಡು ಮೂರು ದಿನದ ಮರಿ ಇದ್ದಾಗಲೇ ತಾಯಿಯ ಸಂಪರ್ಕದಿಂದ ದೂರವಾಗಿ ಮರಿ ಜಿರಾಫೆ 'ಜಾಝ್‌' ನಿತ್ರಾಣವಾಗಿತ್ತು. ಈಗ ಅನಾಥ ಪ್ರಾಣಿಗಳ ಕೇಂದ್ರಗಳಲ್ಲಿ ಬೆಳೆಯುತ್ತಿರುವ ಜಾಝ್‌ ಶ್ವಾನದ ಸಂಪರ್ಕದಿಂದ ಸಂಭ್ರಮದಲ್ಲಿದ್ದು, ಅದರ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ.

ದಕ್ಷಿಣ ಆಫ್ರಿಕಾದ ಲಿಂಪೋಪೊ ವಲಯದಲ್ಲಿನ 'ದಿ ರೈನೊ ಆರ್ಫನೇಜ್‌' ಅನಾಥ ಪ್ರಾಣಿಗಳ ಪೋಷಣೆ ಕೇಂದ್ರದಲ್ಲಿ ಮರಿ ಜಿರಾಫೆಗೆ ಪೂರ್ಣಾವಧಿ ರಕ್ಷಕನಂತೆ ಶ್ವಾನ ಜತೆಯಾಗಿದೆ. ಬೇಟೆಗಾರಿಕೆಯನ್ನು ತಡೆಯುವಲ್ಲಿ ಈ ಕೇಂದ್ರದ ಕಾರ್ಯಗಳಲ್ಲಿ ಹಾಗೂ ರಕ್ಷಣಾ ಕಾರ್ಯಗಳಲ್ಲಿ ನಿರತವಾಗಿರುವ ಶ್ವಾನ ಇದಾಗಿದ್ದು, ಈಗ ಇಡೀ ದಿನ ಜಾಝ್‌ ಜತೆಗೆ ಕಾಲ ಕಳೆಯುತ್ತಿದೆ.

ಮುದ್ದಿಸಿ, ಮಲಗಿಸುವುದರಿಂದ ಹಿಡಿದು ಬೇರೆ ಯಾವುದೇ ಪ್ರಾಣಿಯೂ ಅದರತ್ತ ಸುಳಿಯದಂತೆ ಶ್ವಾನ 'ಹಂಟರ್‌' ನೋಡಿಕೊಳ್ಳುತ್ತಿದೆ. 'ಜಾಝ್‌ ಕೋಮಾ ಸ್ಥಿತಿಯಲ್ಲಿದ್ದಾರೆ ಹಂಟರ್‌ ಊಟ ಮಾಡುವುದರಿಂದಲೂ ಹಿಂದೆ ಸರಿದಿತ್ತು. ಇಬ್ಬರ ನಡುವಿನ ಆಪ್ತತೆ ಅಷ್ಟು ಗಾಢವಾಗಿದೆ' ಎಂದು ದಿ ರೈನೊ ಆರ್ಫನೇಜ್‌ ಕೇಂದ್ರ ಫೇಸ್‌ಬುಕ್‌ನಲ್ಲಿ ವಾರದ ಹಿಂದೆ ಬರೆದುಕೊಂಡಿತ್ತು.

ಸದ್ಯ ಮರಿ ಜಿರಾಫೆ ಜಾಝ್‌ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಹಂಟರ್‌ ಸಹ ಊಟ ಮಾಡುತ್ತಿದ್ದಾನೆ. ಜಾಝ್‌ ಮತ್ತು ಹಂಟರ್‌ ಆಟದಲ್ಲಿ ತೊಡಗಿರುವ ವಿಡಿಯೊ ಅನ್ನು ಶುಕ್ರವಾರ ಕೇಂದ್ರವು ಪ್ರಕಟಿಸಿಕೊಂಡಿದೆ.

ವೈರಲ್‌ ಆಗಿರುವ ವಿಡಿಯೊ ಈಗಾಗಲೇ 2.76 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ಸಾವಿರಕ್ಕೂ ಹೆಚ್ಚು ಜನರು ಎರಡೂ ಜೀವಿಗಳ ನಡುವಿನ ಬಾಂಧವ್ಯ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT