ಮಂಗಳವಾರ, ಸೆಪ್ಟೆಂಬರ್ 21, 2021
21 °C

ವಿಡಿಯೊ ನೋಡಿ: ಟ್ರಾಫಿಕ್‌ನಲ್ಲಿ ಡ್ಯಾನ್ಸ್‌ ಮಾಡಿ ಸಂಕಷ್ಟಕ್ಕೆ ಸಿಲುಕಿದ ಯುವತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದೋರ್‌: ಮಧ್ಯ‍ಪ್ರದೇಶದ ಇಂದೋರ್‌ನಲ್ಲಿ ರಸ್ತೆ ಮಧ್ಯೆ ಡ್ಯಾನ್ಸ್‌ ಮಾಡಿದ್ದ ಯುವತಿಯೊಬ್ಬರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇಲ್ಲಿನ ಸರ್ಕಲ್‌ವೊಂದರಲ್ಲಿ ಟಾಫ್ರಿಕ್‌ ಸಿಗ್ನಲ್‌ ಕೆಂಪು ಬಣ್ಣ ತೋರಿಸಿದ ಕೂಡಲೇ ಜೀಬ್ರಾ ಕ್ರಾಸಿಂಗ್‌ನಲ್ಲಿ ಡ್ಯಾನ್ಸ್‌ ಮಾಡಿದ್ದಾರೆ. 4 ದಿನಗಳ ಹಿಂದೆ ನೃತ್ಯ ಮಾಡಿದ ವಿಡಿಯೊವನ್ನು ತಮ್ಮ ಸಾಮಾಜಿಕ ಜಾಲತಾಣ ಇನ್‌ಸ್ಟಾದಲ್ಲಿ ಪ್ರಕಟಿಸಿದ್ದಾರೆ.

ಈ ವಿಡಿಯೊ ಈಗ ವೈರಲ್‌ ಆಗಿದ್ದು, ಇದನ್ನು ಪೊಲೀಸರು ಗಮನಿಸಿದ್ದು ಆ ಯುವತಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ ಆರೋಪದಡಿಯಲ್ಲಿ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ.

ನೃತ್ಯ ಮಾಡಿದ ಯುವತಿಯನ್ನು ಶ್ರೇಯಾ ಕಲ್ರಾ ಎಂದು ಗುರುತಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು