ಗುರುವಾರ , ಏಪ್ರಿಲ್ 2, 2020
19 °C

ನಿದ್ರೆಯಲ್ಲಿದ್ದ ಪತಿಗೆ ಉಡುಗೊರೆ ಕೊಟ್ಟ ಪ್ರಿಯಾಂಕಾ; ಕಕ್ಕಾಬಿಕ್ಕಿಯಾದ ನಿಕ್!

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ನಾಯಿ ಮರಿಯನ್ನು ಕಂಡು ಗಾಬರಿಯಾಗಿರುವ ನಿಕ್‌

ಬೆಂಗಳೂರು: ಅಮೆರಿಕದ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಮಿಂಚುತ್ತಿರುವ ಭಾರತೀಯ ನಟಿ ಪ್ರಿಯಾಂಕಾ ಚೋಪ್ರಾ ನ್ಯೂಯಾರ್ಕ್‌ನಲ್ಲಿರುವ ಪತಿ ನಿಕ್‌ ಜೋನಸ್‌ಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಇನ್ನೂ ಹಾಸಿಗೆಯಿಂದ ಏಳದ ನಿಕ್‌ ಕಣ್ಣೆದುರಿಗೆ ಉಡುಗೊರೆ ಇಟ್ಟು ಕಕ್ಕಾಬಿಕ್ಕಿಯಾಗುವಂತೆ ಮಾಡಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. 

'ದಿ ವೈಟ್‌ ಟೈಗರ್‌' ಸಿನಿಮಾ ಕೆಲಸಗಳಿಗಾಗಿ ಮುಂಬೈನಲ್ಲಿದ್ದ ಪ್ರಿಯಾಂಕಾ ಅಮೆರಿಕಕ್ಕೆ ಮರಳಿ ಪತಿಗೆ ಮುಂಚಿತವಾಗಿಯೇ ಮದುವೆ ವಾರ್ಷಿಕೋತ್ಸವದ ಉಡುಗೊರೆ ನೀಡಿದ್ದಾರೆ. ಪ್ರಿಯಾಂಕಾಳ ಮುದ್ದಿನ ನಾಯಿ 'ಡಯಾನಾ' ಜತೆಗೆ ಈಗ ನಿಕ್‌ಗೆ ಉಡುಗೊರೆಯಾಗಿ ಬಂದಿರುವ ಜರ್ಮನ್‌ ಶೆಫರ್ಡ್‌ 'ಗಿನೊ' ಮನೆಯ ಸದಸ್ಯನಾಗಿ ಸೇರಿಕೊಂಡಿದೆ. 

ಮಂಗಳವಾರ ಮಧ್ಯರಾತ್ರಿ ನಿಕ್‌ 'ಗಿನೊ' ನಾಯಿ ಮರಿ ಉಡುಗೊರೆಯ ವಿಡಿಯೊ ಹಂಚಿಕೊಂಡಿದ್ದಾರೆ. ನೀಲಿ ಬಣ್ಣದ ಕಾಲರ್‌ ಮತ್ತು ಬಿಳಿಯ ಬೋ ಕಟ್ಟಿಕೊಂಡು ಸಿಂಗಾರಗೊಂಡಿದ್ದ ನಾಯಿ ಮರಿ, ಮುದ್ದಿಸುತ್ತಲೇ ನಿಕ್‌ ಅವರನ್ನು ಎಚ್ಚರಿಸುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ವಿಡಿಯೊ ಚಿತ್ರೀಕರಿಸಿಕೊಳ್ಳುತ್ತಿರುವ ಪ್ರಿಯಾಂಕಾ 'ಗುಡ್‌ ಮಾರ್ನಿಂಗ್‌' ಎಂದಿರುವುದು, 'ಯಾರದು?' ಎಂದು ಗಲಿಬಿಲಿಯಾದ ಧ್ವನಿಯಲ್ಲೇ ಕೇಳುತ್ತ ಎಚ್ಚರಗೊಳ್ಳುವ ನಿಕ್‌ ಮಾತು ಸಹ ಇಲ್ಲಿ ದಾಖಲಾಗಿದೆ. 'ಓಹ್‌, ಇವನಿಗೆ ಇನ್ನೂ ಹೆಸರಿಟ್ಟಿಲ್ಲ...' ಎಂದು ಪ್ರಿಯಾಂಕಾ ಉತ್ತರಿಸಿದ್ದಾರೆ. 

ಈಗಾಗಲೇ ಗಿನೊಗಾಗಿ ಪ್ರತ್ಯೇಕ ಇನ್‌ಸ್ಟಾಗ್ರಾಂ ಪುಟವನ್ನು ತೆರೆದಿರುವ ನಿಕ್‌, 'ಪ್ರಿ ಬೆಳಿಗ್ಗೆ ಅಚ್ಚರಿಯ ಉಡುಗೊರೆಯೊಂದಿಗೆ ಕಾಣಿಸಿಕೊಂಡಳು. ಇದೋ ನಮ್ಮ ಮುದ್ದಿನ ನಾಯಿ ಮರಿ ಗಿನೊ. ಬೆಳಿಗ್ಗೆ ಎದ್ದಾಗಿನಿಂದಲೂ ನಗು ತಡೆಯಲು ಆಗುತ್ತಿಲ್ಲ.. ಅದು ಈಗಲೂ ಮುಂದುವರಿದಿದೆ. ಪ್ರಿಯಾಂಕಾ ಥ್ಯಾಂಕ್ಯೂ.' ಎಂದು ಬರೆದುಕೊಂಡಿದ್ದಾರೆ. ಅದೇ ಪೋಸ್ಟ್‌ ಅನ್ನು ಮತ್ತೆ ಹಂಚಿಕೊಂಡಿರುವ ಪ್ರಿಯಾಂಕಾ, 'ಒಂದೇ ಫ್ರೇಮ್‌ನಲ್ಲಿ ಎಷ್ಟೊಂದು ಮುದ್ದು. ಸಮೀಪಿಸುತ್ತಿರುವ ವಾರ್ಷಿಕೋತ್ಸವದ ಶುಭಾಶಯಗಳು ಬೇಬಿ' ಎಂದಿದ್ದಾರೆ. 

 
 
 
 

 
 
 
 
 
 
 
 
 

Morning cuddle puddle with daddy.

A post shared by Gino Jonas (@ginothegerman) on

2016ರ ನವೆಂಬರ್‌ನಲ್ಲಿ ರಕ್ಷಿಸಲಾದ ನಾಯಿ ಮರಿಯೊಂದನ್ನು ಮನೆಗೆ ತಂದಿದ್ದರು. ಅದಕ್ಕೆ ಡಯಾನಾ ಎಂದು ಹೆಸರಿಟ್ಟು, ಇನ್‌ಸ್ಟಾಗ್ರಾಂ ಪುಟದ ಮೂಲಕ ಜಗತ್ತಿಗೆ ಪರಿಚಯಿಸಿದರು. 'ಡಯರೀಸ್‌ ಆಫ್‌ ಡಯಾನಾ' ಪುಟವನ್ನು ಡಯಾನಾಗಾಗಿ ಮೀಸಲಿಟ್ಟಿದ್ದಾರೆ.

 
 
 
 

 
 
 
 
 
 
 
 
 

Miami baby! @priyankachopra

A post shared by Diana Chopra (@diariesofdiana) on

 
 
 
 

 
 
 
 
 
 
 
 
 

Hey mommy, look there’s puparazzi! 📸 @priyankachopra @nickjonas

A post shared by Diana Chopra (@diariesofdiana) on

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು