ಸೋಮವಾರ, ನವೆಂಬರ್ 18, 2019
20 °C
ಉತ್ತರ ಪ್ರದೇಶ ಚುನಾವಣೆ

ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೆ ಚುನಾವಣಾಧಿಕಾರಿ ರೀನಾ ದ್ವಿವೇದಿ

Published:
Updated:
ಉತ್ತರ ಪ್ರದೇಶದ ಚುನಾವಣಾಧಿಕಾರಿ ರೀನಾ ದ್ವಿವೇದಿ

ಬೆಂಗಳೂರು: ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದ ಹಳದಿ ಸೀರೆಯ ಚುನಾವಣಾಧಿಕಾರಿ ಈಗ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಸೋಮವಾರ ಉತ್ತರ ಪ್ರದೇಶದಲ್ಲಿ ನಡೆದ 11 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ನಸುಗೆಂಪು ಬಣ್ಣದ ಸೀರೆಯಲ್ಲಿ  ಕಾಣಿಸಿಕೊಂಡ ಅವರ ಚಿತ್ರಗಳು ಮತ್ತೊಮ್ಮೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. 

ಉತ್ತರ ಪ್ರದೇಶದ ದೇವರಿಯಾ ಮೂಲದ ಸರ್ಕಾರಿ ಅಧಿಕಾರಿ ರೀನಾ ದ್ವಿವೇದಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಲಖನೌದ ಮತಗಟ್ಟೆಯೊಂದಕ್ಕೆ ಇವಿಎಂ ಹಿಡಿದು ತೆರಳುತ್ತಿದ್ದ ಚಿತ್ರ ಹಾಗೂ ವಿಡಿಯೊಗಳು ವೈರಲ್‌ ಆಗಿದ್ದವು. ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗಲು ಹೊರಟ್ಟಿದ್ದ ಅವರು ಹಳದಿ ಸೀರೆ ಧರಿಸಿದ್ದರು. ಕಣ್ಣಿಗೆ ಕೂಲಿಂಗ್‌ ಗ್ಲಾಸ್‌ ಕೈಲಿ ಇವಿಎಂ ಹಿಡಿದು ಹೊರಟ್ಟಿದ್ದ ಅವರ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ರೀತಿ ಚರ್ಚೆಗೆ ಒಳಗಾಗಿತ್ತು.

ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರೀನಾ ಸೋಮವಾರ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ಲಖನೌದ ಕೃಷ್ಣನಗರ ಪ್ರದೇಶದ ಮತಕಟ್ಟೆಗೆ ಕಾರ್ಯನಿರ್ವಹಿಸಿದರು.

ಹಲವು ಟಿಕ್‌ಟಾಕ್‌ ವಿಡಿಯೊಗಳ ಮೂಲಕವೂ ರೀನಾ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಮಿಂಚುತ್ತಿದ್ದಾರೆ.

ಪ್ರತಿಕ್ರಿಯಿಸಿ (+)