ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video- ಬೀಸಿಲ ಬೇಗೆ ತಾಳಲಾರದೇ ಕೊಳದಲ್ಲಿ ವಿರಮಿಸಿ ಆಟವಾಡಿದ ಹುಲಿಗಳು

Last Updated 4 ಮಾರ್ಚ್ 2023, 14:43 IST
ಅಕ್ಷರ ಗಾತ್ರ

ಬೆಂಗಳೂರು: ಹುಲಿಗಳು ಭೇಟೆಯಾಡಿ, ಊಟ ಮಾಡಿ ಸಾಮಾನ್ಯವಾಗಿ ಪೊದೆಯಲ್ಲಿ ಗುಹೆಯಲ್ಲಿ ವಿರಮಿಸುತ್ತವೆ. ಅದರಲ್ಲೂ ಬೇಸಿಗೆ ಬಂದರೆ ಹುಲಿಗಳು ವಿರಮಿಸಲು ಕಷ್ಟ ಪಡಬೇಕಾಗುತ್ತದೆ.

ಹುಲಿಗಳು ಬೇಸಿಗೆಯಲ್ಲಿ ಬೇಗ ತಮ್ಮ ದೇಹದಲ್ಲಿ ಉಷ್ಣಾಂಶವನ್ನು ತಾಳುತ್ತವೆ. ಏಕೆಂದರೆ ಇದಕ್ಕೆ ಕಾರಣ ಹುಲಿಯ ಅಗಾಧ ದೇಹ ಮತ್ತು ತೂಕ.

ಇದಕ್ಕಾಗಿ ಅವು ಸಣ್ಣ ಸಣ್ಣ ಕೊಳಗಳನ್ನು ಹುಡುಕಿ ಹೋಗುತ್ತವೆ. ಕೊಳದಲ್ಲಿ ಆಟ ಆಡಿ ಅಲ್ಲೇ ತುಂಬಾ ಹೊತ್ತು ವಿರಮಿಸುತ್ತವೆ.

ಹೀಗೆ ಅರಣ್ಯವೊಂದರಲ್ಲಿ 6 ಹುಲಿಗಳು ಒಟ್ಟಿಗೆ ಕೊಳವೊಂದರಲ್ಲಿ ವಿರಮಿಸಿ ಆಟವಾಡುತ್ತಾ ಬಹಳ ಹೊತ್ತು ಅಲ್ಲೇ ಕೂತಿರುವ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ. ಇದನ್ನು ಸುಶಾಂತ್ ನಂದಾ ಎನ್ನುವ ಐಎಫ್ಎಸ್ ಅಧಿಕಾರಿ ಶೇರ್ ಮಾಡಿಕೊಂಡಿದ್ದಾರೆ.

ಇದು ಖಚಿತವಾಗಿ ಎಲ್ಲಿ ಮತ್ತು ಯಾವಾಗ ನಡೆದಿದ್ದು ಎಂಬುದು ದೃಢಪಟ್ಟಿಲ್ಲ. ಆದರೆ, ಟ್ವಿಟರ್ ಬಳಕೆದಾರರೊಬ್ಬರು ಇದು ರಣತಂಬೂರ್ ನ್ಯಾಷನಲ್ ಪಾರ್ಕ್‌ನಲ್ಲಿಯ ಘಟನೆ ಎಂದು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT