ಚಿಪ್ ತಯಾರಿಕೆಗೆ ಪ್ರಸಿದ್ಧವಾದ ಇಂಟೆಲ್ ಇಂಡಿಯಾ ಪ್ರೊಸೆಸರ್ಗಳನ್ನು ಬಳಸಿ ತಯಾರಿಸಿದ ಟು- ಇನ್ -ಒನ್ಸ್, ಅಲ್ಟ್ರಾಬುಕ್ಸ್, ವ್ಯಾಲ್ಯೂ ಪಿ.ಸಿ.ಗಳು, ಟ್ಯಾಬ್ಲೆಟ್ಗಳು ಮತ್ತು ಸ್ಮಾರ್ಟ್ಫೋನ್ ಗಳು ಸೇರಿದಂತೆ ಹಲವು ನೂತನ ಶ್ರೇಣಿಯ ಗ್ಯಾಜೆಟ್ಗಳನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದೆ.

ಇಂಡಿಯಾ ರಿಟೇಲ್ ಇನ್ನೊವೇಷನ್ ಅಂಡ್ ಟೆಕ್ನಾಲಜಿ(ಭಾರತ ಚಿಲ್ಲರೆ ವಹಿ ವಾಟು ಕ್ಷೇತ್ರ ಹೊಸ ಆಲೋಚನೆಗಳು ಮತ್ತು ತಂತ್ರಜ್ಞಾನ) ಪ್ರವಾಸ ಆಯೋಜಿ ಸಿರುವ ಅಮೆರಿಕ ಮೂಲದ ಇಂಟೆಲ್ ಸಂಸ್ಥೆಯು ಸ್ಪರ್ಶ, ಆಂಗಿಕ ಚಲನೆಗಳನ್ನು ಮತ್ತು ಧ್ವನಿಯನ್ನು ಗುರುತಿಸುವ ತಂತ್ರ ಜ್ಞಾನ ಆಧಾರಿತ ವ್ಯಾಪಕ ಶ್ರೇಣಿಯ ಸಾಧನಗಳನ್ನು ಪ್ರದರ್ಶಿಸುತ್ತಿದೆ.

‘ನಾಲ್ಕನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್ಗಳು ಮತ್ತು ಸಿಲ್ವರ್ ಮೊಂಟ್ ಸೂಕ್ಷ್ಮ ವಿನ್ಯಾಸದ ತಂತ್ರಾಂಶ ಗಳನ್ನು ಬಿಡುಗಡೆ ಮಾಡುವುದ ರೊಂದಿಗೆ 2013ನೇ ಸಾಲು ನಮಗೆ ವಿಶೇಷವಾದ ವರ್ಷವಾಗಿದೆ’ ಎನ್ನು ತ್ತಾರೆ ಇಂಟೆಲ್ ಕಾರ್ಪೊರೇಷನ್ ಗ್ರಾಹಕ ಜಾಲ ವಿಭಾಗದ ನಿರ್ದೇಶಕ ಥೈನ್ ಕ್ರೇಜ್.

ಸ್ಮಾರ್ಟ್ಫೋನ್ ದತ್ತಾಂಶ ಕೇಂದ್ರ ಮಾರುಕಟ್ಟೆಯಲ್ಲಿ ಕಡಿಮೆ ವಿದ್ಯುತ್ ಬಳಸುವಂತಹ ಸಿಲ್ವರ್ಮೊಂಟ್ ಸೂಕ್ಷ್ಮ ವಿನ್ಯಾಸದ ತಂತ್ರಾಂಶಗಳನ್ನು ಇಂಟೆಲ್ ಈ ವರ್ಷದ ಆರಂಭದಲ್ಲಿಯೇ ಬಿಡುಗಡೆಗೊಳಿಸಿತ್ತು.

ಟ್ಯಾಬ್ಲೆಟ್ಗಳು ಮತ್ತು ಟು-ಇನ್-ಒನ್ ವಿಭಾಗದ ನವೀನ ವಿನ್ಯಾಸಗಳ ವ್ಯಾಪ್ತಿಯಲ್ಲಿ ಬೇ ಟ್ರಯಲ್ ತುಂಬಾ ಪ್ರಮುಖವಾಗಿದೆ. ‘ಈ ವರ್ಷ ಬೇ ಟ್ರಯಲ್ ಅನಾವರಣದೊಂದಿಗೆ ಕನಸೊಂದನ್ನು ವಾಸ್ತವಕ್ಕಿಳಿಸುವಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದೇವೆ. ಗ್ರಾಹಕರ ಪ್ರತಿಕ್ರಿಯೆ ಅನುಸರಿಸಿ ಮುಂದಿನ ಹಂತಕ್ಕೆ ಹೇಗೆ ನಡೆಯಬೇಕು ಎನ್ನುವುದನ್ನು ಅರಿಯುವುದೇ ಈ ಪ್ರದರ್ಶನದ ಗುರಿಯಾಗಿದೆ’ ಎನ್ನುತ್ತಾರೆ ಕ್ರೇಜ್.

ಇಂಟೆಲ್ ನಾಲ್ಕನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್ಗಳಿಂದ ತಯಾರಿಸಲಾಗಿರುವ ತ್ವರಿತಗತಿಯ ವಿಡಿಯೊ ತಂತ್ರಜ್ಞಾನದಿಂದ ಮಾಧ್ಯಮಗಳಿಗೆ ಅಗತ್ಯವಾದ ವಿಡಿಯೊ ತಯಾರಿಕೆ ಹಾಗೂ ಪರಿವರ್ತನೆ ಕಾರ್ಯವನ್ನು ವೇಗವಾಗಿ ಹಾಗೂ ಸರಳವಾಗಿ ಮಾಡಬಹುದಾಗಿದೆ.

ಈ ತಂತ್ರಜ್ಞಾನವನ್ನು ಡಿವಿಡಿ ಅಥವಾ ಡಿಸ್ಕ್ ತಯಾರಿಕೆಗೆ ಬಳಸಬಹುದಾಗಿದೆ. ಜತೆಗೆ 3ಡಿ ವಿಡಿಯೊ ಸಿದ್ಧಪಡಿಸಲು ಮತ್ತು ಪರಿಷ್ಕರಿಸಲು, 2ಡಿ ವಿಡಿಯೊಗಳನ್ನು 3ಡಿ ವಿಡಿಯೊಗಳನ್ನಾಗಿ ಪರಿವರ್ತಿಸಲು ಹಾಗೂ ಸಾಮಾಜಿಕ ಜಾಲತಾಣಗಳಿಗೆ ಅಪಲೋಡ್ ಮಾಡಬಹುದಾದ ವಿಡಿಯೊಗಳಾಗಿ ರೂಪಾಂತರಿಸಲು ಈ ತಂತ್ರಜ್ಞಾನವನ್ನು ಬಳಸಬಹುದು.

ಇಂಟೆಲ್ನ ಈ ಗ್ಯಾಜೆಟ್ಗಳಲ್ಲಿ ಆರ್ಚ್ಶಾಫ್ಟ್ ಷೋಬಿಜ್ ಎಂಬ ವಿಂಡೋಸ್ 8 ಯೂಐ (ಯೂಸರ್ ಇಂಟರ್ಫೇಸ್) ಅಪ್ಲಿಕೇಷನ್ ಕೂಡ ಸೇರಿದ್ದು, ಇದನ್ನು ಬಳಸಿ ಇಂಟೆಲ್ ತ್ವರಿತಗತಿಯ ತಂತ್ರಜ್ಞಾನದಲ್ಲಿ ವಿಡಿಯೊಗಳನ್ನು ವೇಗವಾಗಿ ತಯಾರಿಸಬಹುದಾಗಿದೆ.
ಇಂಟೆಲ್ ಹೊರತಂದಿರುವ ಐರಿಸ್ ಪ್ರೊಗ್ರಾಫಿಕ್ಸ್ 5200ಮತ್ತು ಐರಿಸ್ ಗ್ರಾಫಿಕ್ಸ್ 5100 ತಂತ್ರಾಂಶಗಳ ಸಹಾಯದಿಂದ ಉತ್ತಮ ಗೇಮಿಂಗ್ ಅನುಭವ ಒದಗಿಸಬಹುದಾಗಿದೆ. ಹಾಗೆಯೇ, ಕೋಡ್ ಮಾಸ್ಟರ್ಸ್ ಗ್ರಿಡ್ –2 ಎಂಬ ವಿಶಿಷ್ಟ ಆಪ್ನಿಂದ ಬೆರಗುಗೊಳಿಸುವ ರೇಸಿಂಗ್ ಅನುಭವ ಪಡೆಯಬಹುದಾಗಿದೆ.

ಎಚ್ಪಿ, ಲೆನೊವೊ, ಏಸರ್, ಸ್ಯಾಮ್ಸಂಗ್, ಆಸಸ್, ತೊಷಿಬಾ, ಸೋನಿ, ಡೆಲ್, ರಾಮೋಸ್ ಸೇರಿದಂತೆ ವಿವಿಧ ಕಂಪೆನಿಗಳ ಅಲ್ಟ್ರಾಬುಕ್ಸ್, ಕಂಪ್ಯೂಟರ್, ಟ್ಯಾಬ್ಲೆಟ್ಗಳು, ಸ್ಮಾರ್ಟ್ಫೋನ್ಗಳಲ್ಲಿ ಅಳವಡಿಸಿ ಕೊಳ್ಳಬಹುದಾದ ಈ ಗ್ಯಾಜೆಟ್ಗಳಿಂದ ಗ್ರಾಹಕರು ಉತ್ಕೃಷ್ಟಮಟ್ಟದ ಅನುಭವ ಪಡೆಯಬಹುದಾಗಿದೆ ಎನ್ನುತ್ತದೆ ಇಂಟೆಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.