ಶುಕ್ರವಾರ, ಸೆಪ್ಟೆಂಬರ್ 20, 2019
22 °C
ಮೇ 12ರಂದು ಆಗಮಿಸಲಿರುವ ಜಾನ್‌ ರಿಚರ್ಡ್ಸನ್‌

ನಾಳೆ ಅಮೆರಿಕ ನೌಕಾಪಡೆ ಮುಖ್ಯಸ್ಥರ ಭಾರತ ಪ್ರವಾಸ

Published:
Updated:

ವಾಷಿಂಗ್ಟನ್‌: ಭಾರತ ಮತ್ತು ಅಮೆರಿಕ ನೌಕಾಪಡೆಯ ನಡುವಿನ ಬಾಂಧವ್ಯ ಬಲಗೊಳಿಸುವ ಉದ್ದೇಶದಿಂದ ಅಮೆರಿಕ ನೌಕಾಪಡೆ ಅಧ್ಯಕ್ಷ ಅಡ್ಮಿರಲ್‌ ಜಾನ್‌ ರಿಚರ್ಡ್ಸನ್‌ ಮೂರು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. 

ಮೇ 12ಕ್ಕೆ ರಿಚರ್ಡ್ಸನ್‌ ಭಾರತಕ್ಕೆ ಭೇಟಿ ನೀಡಲಿದ್ದಾರೆ. ನೌಕಾಪಡೆಯ ಮುಖ್ಯಸ್ಥರಾದ ಬಳಿಕ ಭಾರತಕ್ಕೆ ಇದು ಇವರ ಎರಡನೇ ಭೇಟಿ. ಇಂಡೋ–ಪೆಸಿಫಿಕ್‌ ಡಭಾಗದಲ್ಲಿ ಚೀನಾ ತನ್ನ ಪ್ರಾಬಲ್ಯ ವಿಸ್ತರಿಸಿಕೊಳ್ಳುತ್ತಿರುವ ಸಂದರ್ಭದಲ್ಲೇ, ವಿವಾದಿತ ‌ದಕ್ಷಿಣ ಚೀನಾ ಸಮುದ್ರದಲ್ಲಿ ಭಾರತ, ಅಮೆರಿಕ, ಫಿಲಿಪೈನ್ಸ್‌ ಹಾಗೂ ಜಪಾನ್‌ ನೌಕಾಪಡೆಗಳು ಮೊದಲ ಬಾರಿಗೆ ಜಂಟಿ ಸಮರಾಭ್ಯಾಸ ನಡೆಸುತ್ತಿವೆ. ಪ್ರವಾಸ ಸಂದರ್ಭದಲ್ಲಿ ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್‌ ಸುನಿಲ್‌ ಲಾಂಬಾ ಹಾಗೂ ನೌಕಾಪಡೆ, ಸೇನೆ ಹಾಗೂ ರಾಷ್ಟ್ರೀಯ ಭದ್ರತಾ ವಿಭಾಗದ ಹಿರಿಯ ಅಧಿಕಾರಿಗಳನ್ನು ರಿಚರ್ಡ್ಸನ್‌ ಭೇಟಿಯಾಗಲಿದ್ದಾರೆ. 

ಭಾರತ ಹಾಗೂ ಅಮೆರಿಕ ನಡುವೆ ಪರಸ್ಪರ ಮಾಹಿತಿ ಹಂಚಿಕೆ, ಪಾಲುದಾರಿಕೆ ಬಲಗೊಳಿಸುವುದು ಈ ಪ್ರವಾಸದ ಉದ್ದೇಶವಾಗಿದೆ. ತಮ್ಮ ನಿಲುವು, ಅಭಿಪ್ರಾಯಗಳ ಕುರಿತು ಆಗಾಗ್ಗೆ ಚರ್ಚೆ ನಡೆಸುವುದು ಅಗತ್ಯವಾಗಿದೆ ಎಂದು ರಿಚರ್ಡ್ಸನ್‌ ತಿಳಿಸಿದ್ದಾರೆ. 

Post Comments (+)