ಭಾನುವಾರ, ಸೆಪ್ಟೆಂಬರ್ 26, 2021
27 °C

ವೆನಿಜುವೆಲಾ: ಜಂಬ್ರಾನೊ ಬಂಧನ ವಿರೋಧಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರಾಕಸ್: ವೆನಿಜುವೆಲಾದ ವಿರೋಧ ಪಕ್ಷ ನ್ಯಾಷನಲ್ ಅಸೆಂಬ್ಲಿಯ ಉಪ ಸಭಾಪತಿ ಎಡ್ಗರ್ ಜಂಬ್ರಾನೊ ಬಂಧನ ವಿರೋಧಿಸಿ ಶನಿವಾರವೂ ದೇಶ ವ್ಯಾಪಿ ಪ್ರತಿಭಟನೆ ಮುಂದುವರಿಯಿತು.

ದೇಶದ್ರೋಹ, ನಾಗರಿಕ ದಂಗೆ ಹಾಗೂ ಸಂಚು ಆರೋಪದ ಮೇಲೆ ಜಂಬ್ರಾನೊ ಅವರನ್ನು ಬುಧವಾರ ಬಂಧಿಸಲಾಗಿತ್ತು. ವಿರೋಧ ಪಕ್ಷದ ಸಂಸದರ ವಿರುದ್ಧ ಸುಪ್ರೀಂ ಕೋರ್ಟ್ ಕೈಗೊಂಡಿದ್ದ ಕ್ರಮಗಳನ್ನು ವಿರೋಧಿಸಿ, ನ್ಯಾಷನಲ್ ಅಸೆಂಬ್ಲಿಯ ನಾಯಕ ಜುವಾನ್ ಗಡೊ ಪ್ರತಿಭಟನೆಗೆ ಕರೆ ನೀಡಿದ್ದರು. ಇದನ್ನು ಬೆಂಬಲಿಸಿದ್ದಕ್ಕಾಗಿ ಜಂಬ್ರಾನೊ ಅವರನ್ನು ಬಂಧಿಸುವಂತೆ ಅಧ್ಯಕ್ಷ ನಿಕೊಲಸ್ ಮಡುರೊ ಆದೇಶಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು