ಗುರುವಾರ , ಮಾರ್ಚ್ 4, 2021
24 °C

VIDEO: ಕೋವಿಡ್ ನೆಗೆಟಿವ್ ವರದಿ ಕೈಯಲ್ಲಿದ್ದರೆ ಮಾತ್ರ ರಾಜ್ಯ ಪ್ರವೇಶ: ಕೇರಳ ಗಡಿಯಲ್ಲಿ ಕಟ್ಟೆಚ್ಚರ, ವಾಗ್ವಾದ

ಉಳ್ಳಾಲ: ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯಗಳ ಗಡಿಭಾಗ ತಲಪಾಡಿಯಲ್ಲಿ ಆರೋಗ್ಯ ಅಧಿಕಾರಿಗಳ ಪರಿಶೀಲನಾ ಕೇಂದ್ರ ಇಂದಿನಿಂದ ಮತ್ತೆ ಆರಂಭಗೊಂಡಿದೆ. ಆರ್ ಟಿ ಪಿಸಿ ಆರ್ ವರದಿ ಕೈಯಲ್ಲಿದ್ದಲ್ಲಿ ಮಾತ್ರ ನಾಳೆಯಿಂದ ಕರ್ನಾಟಕ ಪ್ರವೇಶಕ್ಕೆ ಅವಕಾಶ ಎಂದು ಅಧಿಕಾರಿಗಳು ತಿಳಿಸಿದರು.

ಇದನ್ನೂ ಓದಿ.. ವರದಿ ಕೈಯಲ್ಲಿದ್ದರೆ ಮಾತ್ರ ರಾಜ್ಯ ಪ್ರವೇಶ: ತಲಪಾಡಿಯಲ್ಲಿ ಕೇರಳಿಗರ ಪ್ರತಿಭಟನೆ

ತಪಾಸಣೆ ನಡೆಸಿದಾಗ ಹಲವರ ಬಳಿ ವರದಿ ಇರಲಿಲ್ಲ. ಈ ಸಂದರ್ಭ ಜನರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಕರ್ನಾಟಕದ ವಾಹನಗಳನ್ನು ಕೆಲಕಾಲ ಗಡಿನಾಡು ಕನ್ನಡಿಗರು ತಡೆದಿದ್ದರು. ಹೀಗಾಗಿ, ನಾಳೆಯಿಂದ ಆರ್‌ಟಿಪಿಸಿಆರ್ ಟೆಸ್ಟ್ ತರುವಂತೆ ಅಧಿಕಾರಿಗಳು ಸೂಚಿಸಿದ ಬಳಿಕ ಪರಿಸ್ಥಿತಿ ತಿಳಿಗೊಂಡಿತು.