ಬುಧವಾರ, ಸೆಪ್ಟೆಂಬರ್ 23, 2020
27 °C

ಚಿಕ್ಕಮಗಳೂರು | ಶಂಕರಾಚಾರ್ಯರ ಪ್ರತಿಮೆ ಮೇಲೆ ಎಸ್‌ಡಿಪಿಐ ಬಾವುಟ!

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿಯ ಶಂಕರಾಚಾರ್ಯ ವೃತ್ತದಲ್ಲಿನ ಮಂಟಪದ ಗೋಪುರದಲ್ಲಿ ಹಸಿರು, ಕೇಸರಿ, ತಿಳಿ ನೀಲಿ ಬಣ್ಣದ ಬಟ್ಟೆ ಗುರುವಾರ ಬೆಳಿಗ್ಗೆ ಕಂಡುಬಂದಿದ್ದು, ಗೊಂದಲ ಸೃಷ್ಟಿಸಿದೆ.

ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಹಿಂದೂ ಸಂಘಟನೆಗಳವರು ಆಕ್ರೋಶ ವ್ಯಕ್ತಪಡಿಸಿದರು. ‘ಶಂಕರಾಚಾರ್ಯರ ಪ್ರತಿಮೆ ಮೇಲೆ ಎಸ್‌ಡಿಪಿಐ ಬಾವುಟ ಹಾಕುತ್ತಾರೆ ಎಂದರೆ ಏನರ್ಥ. ಕೃತ್ಯ ಎಸಗಿರುವ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸಬೇಕು’ ಎಂದು ಬಿಜೆಪಿ ಮುಖಂಡ ಡಿ.ಎನ್‌.ಜೀವರಾಜ್‌ ಸಹಿತ ಇತರರು ಒತ್ತಾಯಿಸಿದರು.

ಜೀವರಾಜ್‌ ಮತ್ತು ಪೊಲೀಸರ ಮಾತುಕತೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.