ವೀಕೆಂಡ್‌ನಲ್ಲಿ ಫ್ಯಾಮಿಲಿ ಫನ್‌

7

ವೀಕೆಂಡ್‌ನಲ್ಲಿ ಫ್ಯಾಮಿಲಿ ಫನ್‌

Published:
Updated:
Prajavani

ವಾರಾಂತ್ಯವನ್ನು ಮಜವಾಗಿ ಕಳೆಯಬೇಕು. ಆದರೆ ಮಕ್ಕಳೊಂದಿಗೆ ನಗರದಲ್ಲಿಯೇ ತಮ್ಮ ವಾರಾಂತ್ಯವನ್ನು ಕಳೆಯಲು ಸಾಕಷ್ಟು ಅವಕಾಶಗಳಿವೆ.

ಪಬ್‌, ಕ್ಲಬ್‌ಗಳಿಗೆ ಕುಟುಂಬ ಸಮೇತ ಹೋಗಲು ಇಷ್ಟಪಡದವರು, ಮಾಲ್ ಹಾಗೂ ಪಾರ್ಕ್‌ಗಳನ್ನು ತಮ್ಮ ವಾರಾಂತ್ಯದ ಮೋಜಿಗೆ ಆಯ್ಕೆ ಮಾಡಿಕೊಳ್ಳಬಹುದು. 

ವೈಟ್‌ಫೀಲ್ಡ್‌ನಲ್ಲಿರುವ ಇನ್ನರ್‌ಬಿಟ್‌ ಮಾಲ್‌ನಲ್ಲಿ ಈ ವಾರ ಕುಟುಂಬ ಸಮೇತ ಬರುವವರಿಗಾಗಿಯೇ ವಿಶೇಷವಾಗಿ ಎರಡು ದಿನಗಳ ‘ಫ್ಯಾಮಿಲಿ ಫನ್‌‘ ಆಯೋಜಿಸಿದೆ. ವಾರವಿಡೀ ಕೆಲಸ ಮಾಡಿ ದಣಿದ ಪತಿ, ಪತ್ನಿಯರು ಹಾಗೂ ಪರೀಕ್ಷೆ ಭಯದಲ್ಲಿರುವ ಮಕ್ಕಳು ಕೂಡ ಈ ಫ್ಯಾಮಿಲಿ ಫನ್‌ನಲ್ಲಿ ಎಂಜಾಯ್‌ ಮಾಡಬಹುದು. 

ಶಾಪಿಂಗ್‌ ಜೊತೆಜೊತೆಗೆ ಫನ್‌ ಗೇಮ್‌ಗಳಲ್ಲೂ ಭಾಗಿಯಾಗುವಂತೆ ಮಾಡುವುದರ ಜೊತೆ ಸ್ಮರಣೀಯವಾಗಿ ವೀಕೆಂಡ್ ಆಚರಿಸಬಹುದು. ಹೌಸೀ ಸೆಷನ್‌ ಹಾಗೂ ಕ್ಯಾಟರ್‌ಪಿಲ್ಲರ್‌ ವಾಕ್‌ ಅನ್ನು ಆಯೋಜಿಸಲಾಗಿದೆ. ವೇಗವಾದ ಗೇಮ್‌ಗಳನ್ನು ಆಡುವ ಜೊತೆ ಉಡುಗೊರೆಗಳನ್ನೂ ಗೆಲ್ಲಬಹುದು. 

ಕಲರ್ಸ್‌ ಆಫ್‌ ಇಂಡಿಯಾ ಥೀಮ್‌ ಮೂಲಕ ದೇಶದ ಬೇರೆ ಬೇರೆ ಮಾರುಕಟ್ಟೆಗಳ ವಸ್ತುಗಳನ್ನು ಮಾಲ್‌ನಲ್ಲಿ ಪರಿಚಯಿಸಲಾಗುತ್ತಿದೆ. ರಾಜಸ್ತಾನದ ಬಂದಾನಿ, ಲಖನೌದ ಚಿಕನ್‌ಕರಿ, ಪಂಜಾಬ್‌ನ ಜುತಿ, ಪುಲ್ಕರಿ, ಬಂಗಾಳದ ತಾತ್‌, ತಮಿಳುನಾಡಿನ ಆರ್ಗ್ಯಾನಿಕ್‌ ಕಾಟನ್‌ ಮಳಿಗೆಗಳನ್ನು ಈ ವೀಕೆಂಡ್‌ಗಾಗಿ ಪರಿಚಯಿಸಲಾಗಿದೆ.

ಚೀನಾದ ಸಾಂಪ್ರದಾಯಿಕ ನೃತ್ಯದ ಜಲಕ್‌: ಚೀನಾದಲ್ಲಿ ಹೊಸ ವರ್ಷದ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ಸಿಂಹ ನೃತ್ಯವನ್ನು ಮಾಡಲಾಗುತ್ತದೆ. ಅದೇ ನೃತ್ಯವನ್ನು ನಗರದಲ್ಲಿಯೂ ಪರಿಚಯಿಸುವ ಪ್ರಯತ್ನ ಮಾಡಲಾಗಿದೆ.

ಸಿಂಹವನ್ನು ಚೀನಾದ ಸಂಸ್ಕೃತಿಯಲ್ಲಿ ಮಂಗಳಕರ ಪ್ರಾಣಿ ಎಂದು ಪರಿಗಣಿಸಲಾಗುತ್ತದೆ. ಇದು ಶಕ್ತಿ ಹಾಗೂ ದೈವದ ಸ್ವರೂಪ ಎನ್ನುವ ನಂಬಿಕೆಗಳೂ ಇವೆ. ಚೀನಾದ ಬಹುತೇಕ ಹಬ್ಬಗಳಲ್ಲಿಯೂ ಸಿಂಹ ನೃತ್ಯ ಇದ್ದೇ ಇರುತ್ತದೆ. ಈ ನೃತ್ಯದ ಬಳಿಕ ಕೆಟ್ಟ ಶಕ್ತಿ ಅಳಿದು ಜೀವನದಲ್ಲಿ ಧನಾತ್ಮಕತೆ ಹೆಚ್ಚಲಿದೆ  ಎಂಬ ನಂಬಿಕೆ ಅವರಲ್ಲಿ ಗಾಢವಾಗಿದೆ.

ರುಚಿಗೂ ಇದೆ ಚೀನಾ ನಂಟು: ಈ ನೃತ್ಯ ಮಾಡಿದ ಕಡೆಯೆಲ್ಲಾ ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ. ಆದ್ದರಿಂದ ಬೆಂಗಳೂರಿಗೆ ಇದನ್ನು ಕರೆತರಲಾಗಿದೆ ಎಂಬುದು ಆಯೋಜಕರ ಅಭಿಪ್ರಾಯ. ಕೇವಲ ಚೀನಾದ ನೃತ್ಯ ಮಾತ್ರ ಅಲ್ಲ. ಚೀನಾದ ಸಾಂಪ್ರದಾಯಿಕ ಅಡುಗೆಗಳನ್ನೂ ಸವಿಯಬಹುದು.

ಚೀನಾದ ಹೊಸ ವರ್ಷದ ಮೆನುವನ್ನು ಸಿದ್ಧಪಡಿಸಲಾಗುತ್ತಿದೆ. ವೈಲ್ಡ್‌ ಮಶ್ರೂಮ್‌ ಡಂಪ್ಲಿಂಗ್‌, ಸ್ಪೈಸಿ ಸ್ಕಾಲ್ಪ್‌ ಡಂಪ್ಲಿಂಗ್‌, ಚಿಕನ್‌ ಶುಯಿ ಮೈ, ಕ್ರಿಸ್ಪಿ ಬೇಕಡ್‌ ಲ್ಯಾಂಬ್‌ ಪಫ್‌ ಸವಿಯಬಹುದು. 

ಚೀನಾದ ಹೊಸವರ್ಷದಲ್ಲಿ ಸವಿಯುವ ವಿಶೇಷವಾದ ಕಾಕ್ಟೇಲ್‌ ಕೂಡ ಲಭ್ಯವಿದೆ.  ನಗಮಿ ಫಾರ್ಚೂನ್‌ಫೀಚರಿಂಗ್‌ ಬೀಫೀಟರ್‌, ಕುಂಕುತ್‌ ಮರ್ಮಾಲ್ದೆ, ರ‍್ಯಾಸ್ಪ್‌ಬೆರಿ ಕಾರ್ಡಿಯಲ್‌ ಆ್ಯಂಡ್‌ ಲೈಮ್‌ ಜ್ಯೂಸ್‌ ದೊರೆಯಲಿದೆ.

ಸ್ಟಿರ್‌ ಫ್ರೈ ಚಿಕನ್‌, ಚಿಲ್ಲಿ ಆಯಿಲ್‌ ವಿಥ್‌ ಶುಗರ್ ಸ್ನ್ಯಾಪ್‌, ಶಲ್ಲಟ್‌ ಆ್ಯಂಡ್ ಲೀಕ್‌, ಸ್ಟೀಮ್ಡ್‌ ರೆಡ್‌ ಸ್ನ್ಯಾಪರ್‌, ಲೋಟಸ್‌ ರೂಟ್‌ನ್ನು ಸವಿಯಬಹುದು. 

ಫ್ಯಾಮಿಲಿ ಫನ್‌

lಫನ್‌ ಗೇಮ್‌ಗಳು ಮಧ್ಯಾಹ್ನ 2ರಿಂದ ರಾತ್ರಿ 8ರವರೆಗೆ.

lಹೊಸ ಮಳಿಗೆಗಳಲ್ಲಿ ಮಾರಾಟ: ಮಧ್ಯಾಹ್ನ 12ರಿಂದ ರಾತ್ರಿ 9

lಸ್ಥಳ: ಇನ್ನರ್‌ಬಿಟ್‌ ಮಾಲ್‌, ವೈಟ್‌ಫೀಲ್ಡ್‌

lಯಾವಾಗ: ಫೆಬ್ರುವರಿ 9, 10

ಚೀನಾದ ಹುಲಿ ನೃತ್ಯ

lಯಾವಾಗ: ಭಾನುವಾರ

lಸಮಯ: ಮಧ್ಯಾಹ್ನ 1.30. ಸಂಜೆ 5ರಿಂದ 8.30

lಸ್ಥಳ–ಯವುಚಾ, ಐದನೇ ಮಹಡಿ, ಎಂ.ಜಿ.ರೋಡ್‌ ಮಾಲ್‌, ಎಂ.ಜಿ.ರಸ್ತೆ. ವೆಬ್‌ಸೈಟ್ ವಿಳಾಸ: https://www.yauatcha.com/

lಸಂಪರ್ಕ ಸಂಖ್ಯೆ: 92222 22800

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !