ಭಾನುವಾರ, ಏಪ್ರಿಲ್ 18, 2021
31 °C

ಕಾಡು ಪ್ರಾಣಿಗಳ ಬೇಟೆ: ನಾಲ್ವರು ಯುವಕರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ: ಮಲೆ ಮಹದೇಶ್ವರ ವನ್ಯಜೀವಿ ವಿಭಾಗ ಮತ್ತು ಬಿ.ಆರ್.ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಾಡು ಪ್ರಾಣಿಗಳನ್ನು ಬೇಟೆಯಾಡಿ ಚರ್ಮ, ಎಲುಬುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ‌ ನಾಲ್ವರು ಯುವಕರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ತಾಲ್ಲೂಕಿನ ಗುಂಡಾಲ್ ಜಲಾಶಯದ ಬಳಿ ಆರೋಪಿಗಳನ್ನು ಮಾಲು ಸಮೇತ ಬಂಧಿಸಿದ್ದಾರೆ.

ಹನೂರು ತಾಲ್ಲೂಕಿನ ನಲ್ಲಿಕತ್ರಿ ಗ್ರಾಮದ ಮಹಾದೇವ, ಕುಮಾರ್, ಗೊಂಬೆಗಲ್ಲು ಗ್ರಾಮದ ಮಹದೇವ, ರಂಗಸ್ವಾಮಿ ಎಂಬುವವರನ್ನು ಬಂಧಿಸಿದ್ದಾರೆ. ನಾಲ್ವರು ಕೂಡ ಸೋಲಿಗ ಸಮುದಾಯದವರು.

ಬಂಧಿತರಿಂದ ಒಂದು‌ ಹುಲಿಯ ಮೂಳೆಗಳು, ನಾಲ್ಕು ಉಗುರುಗಳು, ಚಿರತೆಯ ಎರಡು‌ ಉಗುರುಗಳು, ಎರಡು  ಜಿಂಕೆ ಚರ್ಮ, ಎರಡು ಕಾಡುಕುರಿ ಚರ್ಮ, ಕಡವೆಯ ಚರ್ಮ, ಸೀಳು ನಾಯಿ ಚರ್ಮ ಹಾಗೂ ಮೂಳೆಗಳು, ಎರಡು ಹಾರುವ ಅಳಿಲಿನ ಚರ್ಮ ಸೇರಿದಂತೆ ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಲೆ‌ಮಹದೇಶ್ವರ ವನ್ಯಧಾಮ, ಬಿಆರ್‌ಟಿ‌ ಹುಲಿ‌ಸಂರಕ್ಷಿತ ಪ್ರದೇಶ ಹಾಗೂ ಕಾವೇರಿ ವನ್ಯಧಾಮದ‌ ಅಧಿಕಾರಿಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು