ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಮ್ಮ ಹೆಣ್ಣುಮಕ್ಕಳು ಎಲ್ಲಿ ಸುರಕ್ಷಿತ? ಉತ್ತರವಿದೆಯೇ?

ಲತಾ ಮಲ್ಲಿಕಾರ್ಜುನ್
Published : 6 ಸೆಪ್ಟೆಂಬರ್ 2024, 23:30 IST
Last Updated : 6 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments

ಒಂದಿನ ನನ್ನ ಮಗಳು ನನ್ನನ್ನೊಮ್ಮೆ ಕೇಳಿದಳು.. ಅಮ್ಮಾ,... ಬಸ್ಸಲ್ಲಿ ಹೋಗುವುದು ಸೇಫಾಗಿದೆಯೇ? ಅದೆಲ್ಲಿಂದಲೂ ನುಸುಳುವ ಕಾಣದ ಕೈಗಳು ನೆನಪಾದವು. ಉತ್ತರಿಸುವ ಮೊದಲೇ ಮಗಳ ಇನ್ನೊಂದು ಪ್ರಶ್ನೆ.

ಟ್ಯಾಕ್ಸಿಗೆ ಬರಲಾ.. ಟ್ಯಾಕ್ಸಿ ಸುರಕ್ಷಿತವೇ?.. ಅದೇ ಆ ಕನ್ನಡಿಯಲ್ಲಿ ಕಂಗಳಲ್ಲೇ ನುಂಗುವಂತೆ ನೋಡ್ತಾನಲ್ಲ.. ಆ ಚಾಲಕನ ಜೊತೆಗೆ ನಾನು ಸುರಕ್ಷಿತವೇ? ಹೋಗಲಿಬಿಡು ಅಮ್ಮಾ.. ನಾನು ಶಾಲೆಯಲ್ಲಿ ಸುರಕ್ಷಿಳೇ? ಎಳೆಕೂಸಿಗೆ ಕಿರುಕುಳ ನೀಡಿದ ಕಾರ್ಮಿಕ ನೆನಪಾದ.

ಕಾಲೇಜಿಗೆ ಹೋದರೆ ಇದೆಲ್ಲ ರಗಳೆ ಇರಲ್ಲ ಅಲ್ವಾ.. ಕಂಗಳಲ್ಲಿಯೇ ನುಂಗುವ, ಆಚೆ ಹೋಗಲು ಪುಸಲಾಯಿಸುವ, ಎಲ್ಲದಕ್ಕೂ ಒಪ್ಪಿಸುವ ಛಾತಿ ಇರುವ ಯುವಕರು ನೆನಪಾದರು. ಇದನ್ನೂ ದಾಟಿ ಕಚೇರಿಗೆ ಹೋದರೆ.. ಕಚೇರಿ ಸುರಕ್ಷಿತವೇ? ಇಲ್ಲಿಯೂ ಜನರಿದ್ದಾರೆ, ನೀ ಉಟ್ಟಿದ್ದೇನು, ತೊಟ್ಟಿದ್ದೇನು, ನಿನ್ನ ಒಲವೇನು, ನಿಲುವೇನು? ಅಂದಿದ್ದೇನು, ಅನ್ನದೇ ಇರುವುದೇನು ಎಂದೆಲ್ಲ ತೀರ್ಪು ನೀಡುವವರು.. ಅಮ್ಮಾ.. ಹೇಳಮ್ಮ.. ಹೊರಗೆ ಹೋಗಿಯೂ ಸುರಕ್ಷಿತವಾಗಿರುವುದು ಹೇಗೆ?

ಹಕ್ಕಿಯಂತೆ ಗೂಡಿನಿಂದಾಚೆ ಜಿಗಿದು, ಬಾನಾಡಿಯಾಗಿ, ನನ್ನ ಗುರಿಯ ಆಕಾಶದಲ್ಲಿ ಸ್ವಚ್ಛಂದ ವಿಹರಿಸಿ, ವಿರಮಿಸಲು ಮನೆಗೆ ಸುರಕ್ಷಿತವಾಗಿ ಬರಲು ಸಾಧ್ಯವೇ ಅಮ್ಮಾ.. ಯಾರೂ ಮುಟ್ಟದಂತೆ ಮನೆಗೆ ಬರುವುದು ಸಾಧ್ಯವೇ ಅಮ್ಮಾ?

ನಮ್ಮ ಹೆಣ್ಣುಮಕ್ಕಳು ಎಲ್ಲಿ ಸುರಕ್ಷಿತ? ಗರ್ಭದಲ್ಲಿಯೂ ಕಂಟಕಗಳಿರುವಾಗ... ಉತ್ತರಕ್ಕಾಗಿ ತಡಕಾಡಬೇಕಿದೆ!!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT