ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ಲಾಸಿ ಲುಕ್‌ ಟ್ರೆಂಡಿ ಮೇಕಪ್‌

ದೀಪಾ ಹೊಳಿಮಠ
Published 28 ಅಕ್ಟೋಬರ್ 2023, 2:20 IST
Last Updated 28 ಅಕ್ಟೋಬರ್ 2023, 2:20 IST
ಅಕ್ಷರ ಗಾತ್ರ

ಗ್ಲಾಸಿ ಲುಕ್‌ ಇವತ್ತಿನ ಟ್ರೆಂಡ್‌. ಕಾಲೇಜು ಹುಡುಗಿಯರಿಂದ ಹಿಡಿದು, ಮಧ್ಯವಯಸ್ಸಿನ ಮಹಿಳೆಯರವರೆಗೆ ಎಲ್ಲರಿಗೂ ಇಷ್ಟ ಗ್ಲಾಸಿ ಲುಕ್‌. ಮೇಕಪ್‌ ಮಾಡಿಕೊಳ್ಳಬೇಕು, ಆದರೆ ಮೇಕಪ್‌ ಮಾಡಿದಂತೆ ಕಾಣಬಾರದು ಎನ್ನುವುದು ಬಹುತೇಕರ ಇಂಗಿತ. ದೈನಂದಿನ ಕಚೇರಿಯೇ ಆಗಲಿ, ಕಾನ್ಫರೆನ್ಸ್‌, ಮೀಟಿಂಗ್‌ ಇರಲಿ, ಅಥವಾ ವೇದಿಕೆ ಮೇಲಿನ ಕಾರ್ಯಕ್ರಮ, ನೈಟ್‌ ಪಾರ್ಟಿ.... ಯಾವುದೇ ಇದ್ದರೂ ಮುಖ ತೊಳೆದಿಟ್ಟ ಗ್ಲಾಸಿನಂತೆ ಹೊಳೆಯುತಿರಬೇಕು ಎನ್ನುವವರೇ ಹೆಚ್ಚು. ಈ ಗ್ಲಾಸಿ ಲುಕ್‌ ಪಡೆಯಲು ಅನುಸರಿಸಬೇಕಿರುವ ಮಾರ್ಗಗಳೇನು? ದೀಪಾ ಹೊಳಿಮಠ ಬರಹ ಇಲ್ಲಿದೆ.

***

ಹಾಗೆ ನೋಡಿದರೆ ಗ್ಲಾಸಿ ಲುಕ್‌ ಪಡೆಯುವುದು ಬಹಳ ಸುಲಭ. ಇದು ಯಾವತ್ತೂ ಹಳತಾಗದ, ಎಲ್ಲಾ ಮುಖವರ್ಣಗಳಿಗೂ ಅನ್ವಯವಾಗುವ ನಿತ್ಯನೂತನ ಶೈಲಿ.  ನಿಮ್ಮ ತ್ವಚೆ ಯಾವುದೇ ಪ್ರಕಾರದ್ದಾಗಿರಲಿ, ಅದು ಹೊಳೆಯುತಿರಬೇಕು ಎಂದರೆ ನೀವು ಕೆಲ ಸೂಕ್ಷ್ಮ ತಂತ್ರಗಳನ್ನು ಅನುಸರಿಸಬೇಕಾಗುತ್ತದೆ. ಅದಕ್ಕಾಗಿ ಇಲ್ಲಿದೆ ಚಿಕ್ಕ ಮಾಹಿತಿ:

l ಯಾವುದೇ ಮೇಕ್ಅಪ್ ನ ಮೊಟ್ಟಮೊದಲ ಹೆಜ್ಜೆ ಎಂದರೆ ಮುಖವನ್ನು ಮೇಕ್ಅಪ್ ಗೆ ಅಣಿಗೊಳಿಸುವುದು. ಅದಕ್ಕಾಗಿ, ಮೊದಲು ಮುಖವನ್ನು ಸ್ವಚ್ಛಗೊಳಿಸಿ, ನಂತರ ಫೇಸ್‌ ಆಯಿಲ್‌ ನಿಂದ ಮುಖವನ್ನು ಹೈಡ್ರೀಕರಿಸಬೇಕು. 

l ಎರಡನೇ ಹೆಜ್ಜೆಯಾಗಿ ನಿಮ್ಮ ಮುಖಕ್ಕೆ ಹೊಂದುವ ಮಾಶ್ವರೈಸರ್‌ ಅನ್ನು ಸಮಾನವಾಗಿ ಅಪ್ಲೈ ಮಾಡಿ. ಇಡೀ ದಿನ ಮುಖದಲ್ಲಿನ ಎಣ್ಣೆ, ಜಿಡ್ಡು ಅಥವಾ ಶುಷ್ಕತೆಯನ್ನು ನಿಯಂತ್ರಿಸುವ ಮತ್ತು ಸಮತೋಲನಗೊಳಿಸುವ ಕೆಲಸವನ್ನು  ಮಾಶ್ವರೈಸರ್ ಮಾಡುತ್ತದೆ.

l ನಂತರ ಪ್ರೈಮರ್‌ ಕಡೆ ಗಮನ ಹರಿಸಿ, ಗ್ಲಾಸಿ ಲುಕ್‌ ಗಾಗಿ ನಿರ್ದಿಷ್ಟವಾಗಿ, ಕ್ರೀಮಿ ಮತ್ತು ಲಿಕ್ವಿಡ್‌ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಸೂಕ್ತ.

l ಇನ್ನು ಒಂದೇ ಕ್ರಮವಾಗಿರದ ಸ್ಕಿನ್‌ ಟೋನ್‌ ಹೊಂದಿರುವವರು ಕನ್ಸಿಲರ್‌ ಸಹಾಯ ಪಡೆಯಬಹುದು.

l ಬ್ಲಶ್ ಬಳಸುವಾಗ ಮೃದುವಾದ, ನೈಸರ್ಗಿಕವಾದ ಕ್ರೀಮಿ ಬ್ಲಶ್ ಬಳಸುವುದನ್ನು ಮರೆಯದಿರಿ.

l ಅನಂತರದ ಹೆಜ್ಜೆಯಾಗಿ ಲಿಕ್ವಿಡ್‌ ಫೌಂಡೇಶನ್‌ ಬಳಸಬೇಕು. ಜೊತೆಗೆ ಅಗತ್ಯವಿದ್ದವರು ಲಿಕ್ವಿಡ್‌ ಹೈಲೈಟರ್‌ ಕೂಡ ಉಪಯೋಗಿಸಬಹುದು. ಕೆನ್ನೆಯ ಮೂಳೆಗಳು ಮತ್ತು ಹುಬ್ಬು ಮೂಳೆಯ ಪ್ರದೇಶಕ್ಕೆ ಲಿಕ್ವಿಡ್ ಹೈಲೈಟರ್ ಅತ್ಯಗತ್ಯ. ಇದು ಚರ್ಮಕ್ಕೆ ಕಾಂತಿ ನೀಡುತ್ತದೆ ಮತ್ತು ಚರ್ಮವನ್ನು ಇನ್ನಷ್ಟು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.

l ಹೊಳೆಯುವ ಗ್ಲಾಸಿ ನೋಟವನ್ನು ಬಯಸುವವರು ಕಣ್ಣಿನ ಮೇಕ್ಅಪ್ ಅನ್ನು ಸಾಧ್ಯವಾದಷ್ಟು ಸರಳ ಮತ್ತು ನೈಸರ್ಗಿಕವಾಗಿಟ್ಟುಕೊಳ್ಳುವುದು ಮುಖ್ಯ.

l ಇತ್ತೀಚೆಗೆ ಹೆಚ್ಚು ಜನ ಕಣ್ಣಿನ ರೆಪ್ಪೆಗಳ ಕೆಳಗೆ ವಾಟರ್‌ ಲೈನ್‌ ಕೊಡುವ ಮೂಲಕ ಕಣ್ಣಿನ ಹೊಳಪು ಹೆಚ್ಚಿಸುವ ಪ್ರಯತ್ನ ಮಾಡುತ್ತಾರೆ.

l ಗ್ಲಾಸಿ ಲುಕ್‌ ಪಡೆಯಲು ಹುಬ್ಬು ಮೂಳೆಗಳಿಗೆ ಗ್ಲಾಸಿ ಲಿಕ್ವಿಡ್‌ ಬಳಸಿ, ಕಣ್ಣ ರೆಪ್ಪೆಗಳಿಗೆ ತೆಳುವಾದ ವ್ಯಾಸಲೀನ್‌ ಅನ್ನು ಬಳಸುವುದರಿಂದ ಕಣ್ಣಿನ ಹೊಳಪು ಹೆಚ್ಚುವುದು.

l ಕೊನೆಯದಾಗಿ, ನಿಮ್ಮ ಮುಖದ ಹೊಳಪನ್ನು ಪೂರ್ಣಗೊಳಿಸಲು ಲಿಪ್ ಗ್ಲಾಸ್ ಬಳಸಿ. ಲಿಪ್‌ ಗ್ಲಾಸ್ ಮಾತ್ರ ಸಾಕು ಎನ್ನುವವರು ತಮ್ಮ ನೈಸರ್ಗಿಕ ತುಟಿಯ ಬಣ್ಣಕ್ಕೆ ಹೊಂದುವಂತಹ ಲಿಪ್‌ ಗ್ಲಾಸ್ ಬಳಸಬಹುದು. ಬೇಕೆಂದರೆ ಲಿಪ್‌ ಸ್ಟಿಕ್‌ ಮೇಲೆ ಕೂಡ ಲಿಪ್ ಗ್ಲಾಸ್‌ ಹಾಕಬಹುದು. ಆಯ್ಕೆ ನಿಮ್ಮದೇ.

ಯಾವುದೇ ಮೇಕಪ್ ನೈಸರ್ಗಿಕವಾಗಿ ಕಾಣಬೇಕು ಎಂದರೆ ಅದು ಒಂದು ದಿನದ ಪ್ರಯತ್ನವಲ್ಲ, ಪ್ರತಿದಿನವೂ ತ್ವಚೆಯ ಆರೋಗ್ಯವನ್ನು ಕಾಪಾಡುವತ್ತ ಗಮನ ಹರಿಸಬೇಕು. ಕ್ಲೆನ್ಸಿಂಗ್‌, ಟೋನಿಂಗ್ ಹಾಗೂ ಮಾಶ್ಚರೈಸರ್‌ ಸೂತ್ರವನ್ನು ಅನುಸರಿಸಿ ತ್ವಚೆಯ ತಾಜಾತನವನ್ನು ಕಾಪಾಡಬೇಕು. ನಿತ್ಯದ ಬಳಕೆಗೆ ಸನ್‍ಸ್ಕ್ರೀನ್ ಬಳಸಿ. ಮುಖದ ಮೃದುತ್ವವನ್ನು ಕಾಪಾಡುವಂತಹ ಕ್ರೀಂ ಬಳಸಿ.

Cork Ireland
red lips
Cork Ireland red lips

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT