ಪುಟ್ಟಪೋರಿ ತನ್ವಿಯದ್ದು ಒಂದೇ ಹಟ. ‘ಅಮ್ಮಾ, ನಾಳೆ ಶ್ರೀಕೃಷ್ಣ ಜನ್ಮಾಷ್ಟಮಿ. ಶಾಲೆಯಲ್ಲಿ ಫ್ಯಾನ್ಸಿ ಡ್ರೆಸ್ ಕಾಂಪಿಟಿಷನ್ ಇದೆ. ನಾನು ರಾಧೆ ತರಹ ವೇಷ ಹಾಕಬೇಕು. ಅದರಲ್ಲೂ ತುರುಬನ್ನು ‘ಮೊಗ್ಗಿನ ಜಡೆ’ಯಿಂದ ಅಲಂಕರಿಸಬೇಕು, ಆಗುತ್ತಾ ಅಮ್ಮಾ...’ ಮಗಳ ಆಸೆಗೆ ತಣ್ಣೀರೆರಚಲು ಯಾವ ತಾಯಿ ತಾನೇ ಬಯಸುತ್ತಾಳೆ? ಆದರೆ ಒಂದೇ ದಿನದಲ್ಲಿ ಹೇಗಪ್ಪಾ ರಾಧೆಯಂತೆ ಕಾಣುವ ತರಹ ಮೊಗ್ಗಿನ ಜಡೆ ರೆಡಿ ಮಾಡೋದು ಎಂಬ ಆತಂಕ ತಾಯಿಗೆ. ತಕ್ಷಣ ಮಾರುಕಟ್ಟೆಗೆ ತೆರಳಿದ ಅಮ್ಮ, ಜಡೆ, ಜಡೆಬಿಲ್ಲೆ ಖರೀದಿಸಿಯೇ ಬಿಟ್ಟಳು. ಇದನ್ನು ಮೊಗ್ಗಿನ ಜಡೆಯಿಂದ ಅಲಂಕರಿಸಬೇಕಲ್ಲ? ಗೆಳತಿಯ ಸಲಹೆ ಪಡೆದು ಬ್ಯುಟೀಷಿಯನ್ ಮೊರೆ ಹೋದಳು. ಮರುದಿನ ಬೆಳಿಗ್ಗೆ ಪುಟಾಣಿ ತನ್ವಿ ‘ರಾಧೆ’ಯಾಗಿಯೇ ಬಿಟ್ಟಳು. ಅದೂ ಅತ್ಯಾಕರ್ಷಕವಾಗಿ ಕಂಗೊಳಿಸುವ ಮೊಗ್ಗಿನ ಜಡೆಯೊಂದಿಗೆ!

ಮೊಗ್ಗಿನ ಜಡೆ ಹಾಕಿಸಿಕೊಳ್ಳುವ ಹಳೆಯ ಕಾಲದ ಹೆಣ್ಣುಮಕ್ಕಳ ಕ್ರೇಜ್ ಈಗ ಹೊಸ ಟ್ರೆಂಡ್ ಆಗಿ ಮತ್ತೆ ಬಂದಿದೆ. ಮದುವೆ ಸಮಾರಂಭಗಳಲ್ಲಿ ಮದುಮಗಳ ಅಲಂಕಾರ ಮುಗಿಯುವುದೇ ತಡ, ಹೆಣ್ಣುಮಕ್ಕಳ ಉದ್ದನೆಯ ಕ್ಯೂ ಬ್ಯುಟೀಷಿಯನ್ ಬಳಿ ಇರುತ್ತದೆ. ಅಲಂಕಾರ ಮಾಡಿಸಿಕೊಳ್ಳಲು, ಜಡೆ ಹಾಕಿಸಿಕೊಳ್ಳಲು ಕಾದಿರುತ್ತದೆ. ಅದರಲ್ಲೂ ಮೊಗ್ಗಿನ ಜಡೆ ಹಾಕಿಸಿಕೊಳ್ಳಲು ತಾ ಮುಂದು, ನಾ ಮುಂದು ಎಂದು ಹಾತೊರೆಯುವವರೇ ಹೆಚ್ಚು.

ಶಾಲಾ ವಾರ್ಷಿಕೋತ್ಸವಗಳಲ್ಲಿ ಹೆಣ್ಣುಮಕ್ಕಳು ನೃತ್ಯ ಮಾಡಲು ಮೊಗ್ಗಿನ ಜಡೆ ಹಾಕಿಸಿಕೊಳ್ಳುವುದಿದೆ. ಭರತನಾಟ್ಯದಲ್ಲಂತೂ ಮೊಗ್ಗಿನ ಜಡೆಗೇ ಹೆಚ್ಚಿನ ಆದ್ಯತೆ. ಏಕೆಂದರೆ ಇದನ್ನು ಹಾಕಿಕೊಳ್ಳುವುದು ಸುಲಭ. ಈಗೀಗಂತೂ ರೆಡಿಮೇಡ್ ಮೊಗ್ಗಿನ ಜಡೆಗಳು ಸಿಗುತ್ತವೆ. ಇದು ತಾಜಾ ದುಂಡುಮಲ್ಲಿಗೆಯಿಂದ ಮಾಡಿದ್ದಲ್ಲ. ಕೃತಕ ಹೂವಿನಿಂದ ಮಾಡಿದ್ದು. ಆದರೆ ನೋಟದಲ್ಲಿ ನೈಜ ಹೂವಿಗಿಂತಲೂ ಚೆನ್ನಾಗಿ ಕಾಣಿಸುತ್ತದೆ.

ಮಲ್ಲಿಗೆ ಮೊಗ್ಗಿನಿಂದ...

ಸಾಮಾನ್ಯವಾಗಿ ಮೊಗ್ಗಿನ ಜಡೆಯನ್ನು ದುಂಡು ಮಲ್ಲಿಗೆಯ ಮೊಗ್ಗುಗಳಿಂದಲೇ ಮಾಡಲಾಗುತ್ತದೆ. ಸೂಜಿ ಮಲ್ಲಿಗೆ ಮೊಗ್ಗು, ಮಂಗಳೂರು ಮಲ್ಲಿಗೆ ಮೊಗ್ಗು, ಕಾಡು ಮಲ್ಲಿಗೆ, ಕಾಕಡ ಮಲ್ಲಿಗೆ ಮೊಗ್ಗುಗಳೂ ಮೊಗ್ಗಿನ ಜಡೆಗೆ ಸೂಕ್ತವೇ ಆಗಿವೆ. ಇಂದು ಮೊಗ್ಗಿನ ಜಡೆ ಹಾಕಿಕೊಳ್ಳಬೇಕಾದರೆ ಹಿಂದಿನ ದಿನವೇ ಇದನ್ನು ಸಿದ್ಧಪಡಿಸಿಕೊಂಡಿರಬೇಕು. ಮೊಗ್ಗಿನ ಜಡೆ ತಯಾರಿಸಿದ ಬಳಿಕ ಅದನ್ನು ನೆನೆಸಿದ ಹತ್ತಿ ಬಟ್ಟೆಯಲ್ಲಿ ಸುತ್ತಿ ತೆಗೆದಿಡಬೇಕು. ಹೀಗೆ ಮಾಡಿದರೆ ಮರುದಿನ ಬಳಸುವಾಗ ಅದರ ತಾಜಾತನ ಹೋಗದು.

ಹಳ್ಳಿ ಮನೆಗಳಲ್ಲಿ...
ಮನೆಯ ಹಿತ್ತಲಿನಲ್ಲಿ ತಾನೇತಾನಾಗಿ ಬೆಳೆದ ಮಲ್ಲಿಗೆ ಮೊಗ್ಗುಗಳನ್ನು ಆಯ್ದು ಬಾಳೆದಿಂಡಿನ ಹಗ್ಗದಲ್ಲಿ ಒಂದೊಂದೇ ಮೊಗ್ಗನ್ನು ಪೋಣಿಸಿ, ನಾಲ್ಕು ಪದರಗಳಲ್ಲಿ ಎಳೆದು ಕಟ್ಟಿ ದಂಡೆ ಮಾಡಿದರೆ ಮೊಗ್ಗಿನ ಜಡೆ ತಯಾರಾದ ಹಾಗೇ. ಕಡುಬಣ್ಣದ ಜರಿ ಲಂಗ ತೊಡಿಸಿ, ಮುದ್ದು ಪುಟಾಣಿಗೆ ಜಡೆ ಕಟ್ಟಿ ಅದರ ಮೇಲೆ ಮೊಗ್ಗಿನ ಜಡೆ ಇಡಬೇಕು. ಇನ್ನೂ ಚೆನ್ನಾಗಿ ಕಾಣಲು ಅಲ್ಲಲ್ಲಿ ಕೆಂಪು ಗುಲಾಬಿ ಎಸಳನ್ನು ಪಿನ್ ಸಹಾಯದಿಂದ ಇಟ್ಟರೆ ಮತ್ತಷ್ಟು ಅಂದ. ಜಡೆಯ ತುದಿಯನ್ನು ಜಡೆಗೊಂಡೆಯಿಂದ ಅಲಂಕರಿಸಬೇಕು. ಈಗ ಒಂದು ಹಂತದ ಅಲಂಕಾರ ಮುಗಿದಂತೆ.

ಚಲನಚಿತ್ರವೂ ಆಗಿದೆ...
2008ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ‘ಮೊಗ್ಗಿನ ಜಡೆ’ ನೋಡಿದ್ದೀರಲ್ಲ? ರಾಮದಾಸ್ ನಾಯ್ಡು ನಿರ್ದೇಶನದ ಈ ಚಿತ್ರದಲ್ಲಿ ಬೇಬಿ ಶ್ರೀಶಾ ನಟಿಸಿದ್ದು, ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗಿತ್ತು. ಈ ಚಿತ್ರದಲ್ಲಿ ಪ್ರಿಯಾ ಎಂಬ ಹುಡುಗಿಗೆ ಆಕೆಯ ತಾಯಿ ಆಧುನಿಕತೆಯ ಕಾರಣದಿಂದಾಗಿ ‘ಮೊಗ್ಗಿನ ಜಡೆ’ ಹಾಕಲು ವಿರೋಧಿಸುವ ಸನ್ನಿವೇಶವಿದೆ. ಕೊನೆಗೆ ಪ್ರಿಯಾ ತನ್ನ ಕುಟುಂಬದಿಂದ ಪ್ರತ್ಯೇಕಗೊಂಡ ನಂತರ ಆಕೆಯ ಕುಟುಂಬವು ಅವಳನ್ನು ಹೇಗೆ ಹುಡುಕುತ್ತದೆ ಮತ್ತು ಅವಳಿಗೆ ಮೊಗ್ಗಿನ ಜಡೆ ಹಾಕಲು ಹೇಗೆ ಅನುಮತಿ ನೀಡುತ್ತದೆ ಎಂಬುದರ ಚಿತ್ರಣ ಇದರಲ್ಲಿದೆ. ಮಕ್ಕಳ ದಿನಾಚರಣೆಯ ಈ ಸಂದರ್ಭದಲ್ಲಿ, ಜರಿ ಲಂಗ ತೊಟ್ಟ ಹೆಣ್ಣುಮಗು ಮೊಗ್ಗಿನ ಜಡೆ ಹಾಕಿಸಿಕೊಂಡು, ಅಂದವಾಗಿ ಅಲಂಕರಿಸಿಕೊಂಡು ಶಾಲೆಗೆ ಹೋದರೆ ಎಲ್ಲರ ಕಣ್ಣು ಈಕೆಯತ್ತಲೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.