ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್‌ನಲ್ಲಿ ಸೀರೆ ಟ್ರೆಂಡ್: ಸೀರೆಯುಟ್ಟು ಮಿಂಚುತ್ತಿದ್ದಾರೆ ಲಲನೆಯರು

#SareeTwitter
Last Updated 7 ಜುಲೈ 2020, 4:27 IST
ಅಕ್ಷರ ಗಾತ್ರ

ಸೀರೆ... ಅನಾದಿ ಕಾಲದಿಂದಲೂ ಭಾರತೀಯ ಹೆಣ್ಣುಮಕ್ಕಳ ನೆಚ್ಚಿನ ದಿರಿಸು. ಅದೆಷ್ಟೇ ಫ್ಯಾಷನ್ ಟ್ರೆಂಡ್ ಬದಲಾದರೂ ಹೆಣ್ಣುಮಕ್ಕಳಿಗೆ ಸೀರೆ ಮೇಲಿನ ಒಲವು ಕಡಿಮೆಯಾಗಿಲ್ಲ. ಈಗ ಕೊರೊನಾ ಆ ಕಾರಣದಿಂದ ಎಲ್ಲರೂ ಮನೆಯೊಳಗೆ ಲಾಕ್‌ ಆಗಿದ್ದಾರೆ. ಕಾರ್ಯಕ್ರಮಗಳು ನಡೆಯುತ್ತಿಲ್ಲ. ಈಗ್ಯಾಕೆ ಸೀರೆಯ ಮಾತು ಅಂತಿರಾ?

ಲಾಕ್‌ಡೌನ್‌ ನಡುವೆಯೂ ಸೀರೆಯ ಮೇಲಿನ ವ್ಯಾಮೋಹ ಕಡಿಮೆಯಾಗಿಲ್ಲ ಎಂಬುದು ಸಾಮಾಜಿಕ ಜಾಲತಾಣದಲ್ಲಿ ಸಾಬೀತುಪಡಿಸಿದ್ದಾರೆ ಹೆಣ್ಣುಮಕ್ಕಳು. ಟ್ವಿಟರ್‌ನಲ್ಲಿ#SareeTwitter‌ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗ್ತಿದೆ. ಸೀರೆ ಉಟ್ಟ ಫೋಟೊಗಳನ್ನು ಹೆಣ್ಣುಮಕ್ಕಳು ಹಂಚಿಕೊಳ್ಳುತ್ತಿದ್ದಾರೆ. ‌ಹಿಂದೊಮ್ಮೆ ಫೇಸ್‌ಬುಕ್‌ ಈ ಟ್ರೆಂಡ್ ಭಾರಿ ಸದ್ದು ಮಾಡಿತ್ತು. ಅದೇ ಟ್ರೆಂಡ್ ಇದೀಗಟ್ವಿಟರ್‌ನಲ್ಲಿ ಆರಂಭವಾಗಿದೆ.

ಕಳೆದ ನಾಲ್ಕು ದಿನಗಳಿಂದ #SareeTwitter ಟ್ವಿಟರ್‌ನಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ರೇಷ್ಮೆ ಸೀರೆ, ಅರ್ಗಾನ್ಜ ಸೀರೆ, ಬನಾರಸಿ ಸೀರೆ, ಇಳಕಲ್ ಸೀರೆ, ಮದ್ರಾಸಿ ಸೀರೆ ಸೇರಿದಂತೆ ವಿವಿಧ ಬಗೆಯ ಸೀರೆಗಳನ್ನು ಉಟ್ಟ ಲಲನೆಯರು ತಮ್ಮ ಫೋಟೊವನ್ನು ಹಂಚಿಕೊಂಡಿದ್ದಾರೆ.

ತಾವು ಸೀರೆ ಉಟ್ಟು ತೆಗೆಸಿದ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ‘ಈ ಟ್ರೆಂಡ್‌ಗೆ ನಾನು ಯಾಕೆ ಸೇರಬಾರದು’, ‘ಟ್ವಿಟರ್‌ ಟ್ರೆಂಡ್‌ನಲ್ಲಿ ನಾನು ಸೇರಿದ್ದೇನೆ’ ’ಹಳೆ ನೆನಪು ಮರುಕಳಿಸಿದೆ’ ಎಂದೆಲ್ಲಾ ಬರೆದುಕೊಂಡಿದ್ದಾರೆ. ಅಮ್ಮ, ಅಜ್ಜಿಯ ಸೀರೆಯಲ್ಲಿ ಮಿಂಚುವ ಮೂಲಕ ಅಮ್ಮನ ಸೀರೆ, ಅಜ್ಜಿಯ ಸೀರೆ ಎಂದು ಭಾವನಾತ್ಮಕವಾಗಿಯೂ ಬರೆದುಕೊಂಡಿದ್ದಾರೆ. ‘ಇದು ನಮ್ಮ ಅಮ್ಮ ಹಾಗೂ ಅಮ್ಮಮ್ಮನ ಸೀರೆ’ ಎಂದು ಬರೆದುಕೊಂಡಿದ್ದಾರೆ ಇಲ್ಲಕ್ಕಿಯಾ ಹಾಗೂ ರಾಘುನ್‌.

ಈ ಎಲ್ಲದರ ನಡುವೆ ಮುದ್ದಿನ ಬೆಕ್ಕಿನ ಮರಿಯೊಂದು ‘ನೀವಷ್ಟೇ ಅಲ್ಲ ನಾನು ಸೀರೆ ಉಡುತ್ತೇನೆ’ ಎಂದು ಹೆಣ್ಣುಮಕ್ಕಳಿಗೆ ಸವಾಲು ಹಾಕಿದಂತಿರುವ ಫೋಟೊ ಇಲ್ಲಿದೆ.

ಇಂದಿರಾಗಾಂಧಿ ಅವರು ಸೀರೆಯಲ್ಲಿರುವ ಕೆಲವು ಫೋಟೊಗಳನ್ನು ಹಂಚಿಕೊಂಡಿರುವ ಮಹಮದ್ ಇಸ್ಮಾಯಿಲ್ ಎಂಬುವವರು ಇದು ನನ್ನ ಆಯ್ಕೆ ಎಂದಿದ್ದಾರೆ.

ಇಂಡೊಲೆಂಟ್ ಪಿಕಾಚು ಎಂಬುವವರು ತಮ್ಮ ಮುದ್ದಿನ ಬಿಳಿ ಬೆಕ್ಕಿಗೆ ಹಳದಿ ಬಣ್ಣದ ಸೀರೆ ಉಡಿಸುವ ಫೋಟೊ ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದ್ದಾರೆ.

ಈ ಫೋಟೊ ತಮ್ಮ ಮಕ್ಕಳ ಜೊತೆ 5 ವರ್ಷದ ಹಿಂದೆ ತೆಗೆಸಿಕೊಂಡಿದ್ದು. ಇದು ಫ್ಯಾಮಿಲಿ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಬಂದಿತ್ತು ಎಂದು ಕ್ಯಾಪ್ಷ್ಯನ್‌ ಬರೆದುಕೊಂಡಿದ್ದಾರೆ ಮೇಘನಾ ಗಿರೀಶ್‌.

1936ರಲ್ಲಿ ಪೈಲೆಟ್‌ ಸರಳ ಥಕ್ರಾಲ್ ಸೀರೆ ಉಟ್ಟು ನಿಂತ ಫೋಟೊವನ್ನು ಹಂಚಿಕೊಂಡಿದೆ ಇಂಡಿಯನ್ ಹಿಸ್ಟರಿ ಪಿಕ್ಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT