ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಮಹಿಳಾ ದಿನ | ಇಲ್ಲಿದೆ ಪವರ್‌ಫುಲ್ ಸಾಧಕಿಯರ 20 ಹೇಳಿಕೆಗಳು

Last Updated 8 ಮಾರ್ಚ್ 2020, 5:53 IST
ಅಕ್ಷರ ಗಾತ್ರ

ಇಂದಿನ ವಿಶೇಷ ಏನು ಅಂತ ಗೊತ್ತಿದೆ ತಾನೆ? ಇಂದು ಅಂದ್ರೆ ಮಾರ್ಚ್ 8ವಿಶ್ವ ಮಹಿಳಾ ದಿನ.ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳನ್ನು ಎತ್ತಿ ಹಿಡಿಯುವುದರೊಂದಿಗೆ ಸಮಾಜದಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ಲಿಂಗ ತಾರತಮ್ಯದಬಗ್ಗೆ ಜಾಗೃತಿ ಮೂಡಿಸಲು ಇದೊಂದು ನೆಪ.

ಈ ಬಾರಿಯ ಮಹಿಳಾ ದಿನಾಚರಣೆಯ ವಿಷಯ‘ಈಚ್‌ ಫಾರ್‌ ಈಕ್ವಲ್’#EachforEqual (ಸಮಾನತೆಗಾಗಿ ಎಲ್ಲರೂ).

‘ರೂಢಿಗತ ಸಿದ್ಧಮಾದರಿಗಳನ್ನು (ಸ್ಟೀರಿಯೊಟೈಪ್) ಪ್ರಶ್ನಿಸಿ, ಪೂರ್ವಗ್ರಹಗಳ ವಿರುದ್ಧ ಹೋರಾಡಿ, ಗ್ರಹಿಕೆಗಳನ್ನು ವಿಸ್ತರಿಸಿ, ಮಹಿಳೆಯರ ನೆಮ್ಮದಿಗೆ ಪೂರಕವಾದ ಸಮಾಜ ರೂಪಿಸಿ, ಮಹಿಳೆಯರ ಸಾಧನೆಗಳನ್ನು ಕೊಂಡಾಡಿ’ ಎನ್ನುವುದುಈ ಪದಗುಚ್ಛದ ಆಶಯವಾಗಿದೆ.

2020ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ವೇಳೆ ಮಹಿಳೆಯರು ಮಹಿಳೆಯರಿಗಾಗಿಯೇ ಹೇಳಿದ ಸ್ಫೂರ್ತಿದಾಯಕ ಪವರ್‌ಫುಲ್ಹೇಳಿಕೆಗಳ ಇಣುಕುನೋಟಇಲ್ಲಿದೆ. ಇದನ್ನು ನೀವೂ ನಿಮ್ಮ ಆಪ್ತ ಮಹಿಳೆಯೊಂದಿಗೆ ಹಂಚಿಕೊಳ್ಳಬಹುದು.

ಸಾನಿಯಾ ಮಿರ್ಜಾ: ನಾನು ಗೆಲ್ಲುತ್ತಿರುವವರೆಗೂ ಜನರು ನನ್ನ ಸ್ಕರ್ಟ್ ಆರು ಇಂಚು ಉದ್ದವೋ ಅಥವಾ ಆರು ಅಡಿ ಉದ್ದವೋ ಎಂದು ಗಮನ ಹರಿಸಬಾರದು (ಆಶಯ– ನನ್ನ ಸಾಧನೆಗೆ ಬೆಲೆ ಕೊಡಿ, ಬಟ್ಟೆಗಲ್ಲ).

ಮೇರಿ ಕೋಮ್:ನೀನು ಮಹಿಳೆ, ಹೀಗಾಗಿಯೇನೀನು ದುರ್ಬಲೆ ಎಂದು ಹೇಳಲು ಯಾರಿಗೂಬಿಡಬೇಡಿ. (ಆಶಯ– ಸಾಧನೆ ಅಥವಾ ದೌರ್ಬಲ್ಯಕ್ಕೂ ಲಿಂಗಕ್ಕೂ ಸಂಬಂಧವಿಲ್ಲ).

ಕಲ್ಪನಾ ಚಾವ್ಲಾ: ಕನಸುಗಳಿಂದಲೇ ಯಶಸ್ಸಿನ ಹಾದಿಯು ಅಸ್ತಿತ್ವದಲ್ಲಿದೆ (ಆಶಯ– ಕನಸು ಕಾಣುವುದನ್ನು ಎಂದಿಗೂ ನಿಲ್ಲಿಸಬೇಡಿ).

ಮಲಾಲಾ ಯೂಸುಫ್: ನಮ್ಮಲ್ಲಿ ಅರ್ಧದಷ್ಟು ಜನರನ್ನು ಹಿಮ್ಮೆಟ್ಟಿಸಿದರೆ ನಾವೆಲ್ಲರೂಯಶಸ್ವಿಯಾಗಲು ಸಾಧ್ಯವಿಲ್ಲ. (ಆಶಯ– ಜಗತ್ತಿನ ಎಲ್ಲ ಮಹಿಳೆಯರೂ ಇತರ ಮಹಿಳೆಯರಿಗೆ ಸ್ಪಂದಿಸಬೇಕು).

ಇರಿನಾ ಡನ್: ಪುರುಷನಿಲ್ಲದ ಮಹಿಳೆಯು ಬೈಸಿಕಲ್ ಇಲ್ಲದ ಮೀನಿನಂತೆ. (ಆಶಯ– ಮೀನಿಗೆ ನೀರು ಬೇಕು, ಬೈಸಿಕಲ್ ಅಲ್ಲ. ಪುರುಷ ಅವಲಂಬನೆ ಇಲ್ಲದೆಯೂ ಮಹಿಳೆಯರು ಸಾಧನೆ ಮಾಡಬಲ್ಲರು).

ಮಾಯಾ ಏಂಜೆಲೊ: ನನ್ನಸ್ವಂತ ಬೆನ್ನು ನನಗೆಸಿಕ್ಕಿತು (ಆಶಯ– ನನ್ನನ್ನು ನಾನು ರಕ್ಷಿಸಿಕೊಳ್ಳಬಲ್ಲೆ)

ಜಾಡಿ ಸ್ಮಿತ್: ನನ್ನನ್ನು ವ್ಯಾಖ್ಯಾನಿಸಿಕೊಳ್ಳುವ ನಿಘಂಟಿನ ಏಕೈಕ ಲೇಖಕಿಯೇ ನಾನು (ಆಶಯ– ಮಹಿಳೆಯರ ಸ್ವಂತಿಕೆಗೆ ಬೆಲೆಕೊಡಿ).

ಮೇರಿ ಕ್ಯೂರಿ: ಯಾವುದೇ ವ್ಯಕ್ತಿ ಅಥವಾ ಘಟನೆಗಳು ಒಬ್ಬರ ಸ್ವಾಭಿಮಾನವನ್ನು ಎಂದಿಗೂ ಸೋಲಿಸಬಾರದು(ಆಶಯ– ಸ್ವಸಾಮರ್ಥ್ಯದ ಮೇಲೆ ವಿಶ್ವಾಸವಿರಲಿ).

ಸೆರೆನಾ ವಿಲಿಯಮ್ಸ್: ಯಾರಿಗಾದರೂ ಹಣಕೊಟ್ಟುಸಮಯ ಹಿಂದಕ್ಕೆ ಓಡಿಸಲು ಆಗುವುದಿಲ್ಲ. ಹೀಗಾಗಿಯೇ ನಾನು ಅದನ್ನು ಮೀರಬಹುದು(ಆಶಯ– ಹಿಂದೆ ನಾವು ಏನಾಗಿದ್ದೆವೋ, ಅದು ಮುಂದೆ ನಾವು ಏನಾಗಬೇಕು ಎಂಬುದಕ್ಕೆ ಮಾನದಂಡವಲ್ಲ)

ಹೆಲೆನ್ ಕೆಲರ್: ಜಗತ್ತು ದುಃಖದಿಂದಲೇ ತುಂಬಿದೆ. ಅಷ್ಟೇ ಅಲ್ಲ ಅದನ್ನು ಮೀರಿದವರಿಂದಲೂ ತುಂಬಿದೆ (ಆಶಯ– ಒಬ್ಬರ ಕಷ್ಟದ ಜೊತೆಗೆ ಅದನ್ನು ಅವರು ಹೇಗೆ ಮೀರಿದರು ಎಂಬುದನ್ನೂ ಅರ್ಥ ಮಾಡಿಕೊಳ್ಳಿ).

ಅಲೆಕ್ಸಾಂಡ್ರಿಯಾ ಒಕಾಸಿಯೊ-ಕಾರ್ಟೆಜ್: ಬದಲಾವಣೆಯು ಧೈರ್ಯವನ್ನು ಬೇಡುತ್ತದೆ(ಆಶಯ– ನಿಮ್ಮ ಮನಸ್ಸಿನ ಮಾತುಗಳಿಗೆ ಬೆಲೆಕೊಡಿ).

ಡಿಯಾನೆ ವಾನ್ ಫರ್ಸ್ಟೆನ್‌ಬರ್ಗ್: ನಾನು ಏನು ಮಾಡಬೇಕೆಂದು ನನಗೆ ತಿಳಿದಿಲ್ಲ, ಆದರೆ ನಾನು ಎಂಥ ಮಹಿಳೆಯಾಗಬೇಕೆಂಬುದು ನನಗೆ ಗೊತ್ತಿದೆ. (ಆಶಯ– ನೀವು ಹೇಗಿರಬೇಕು ಎಂಬುದನ್ನು ನೀವೇ ನಿರ್ಧರಿಸಿ)

ಜಸಿಂಡಾ ಅರ್ಡೆರ್ನ್:ನಾನು ಮೊದಲ ಮಲ್ಟಿಟಾಸ್ಕಿಂಗ್ (ಬಹು ಕೆಲಸ) ಮಹಿಳೆ ಅಲ್ಲ.ಉದ್ಯೋಗ ಮತ್ತು ಮಗುವನ್ನು ಪಡೆದ ಮೊದಲ ಮಹಿಳೆಯೂ ನಾನಲ್ಲ - ಇದಕ್ಕೂ ಮೂದಲು ಇದನ್ನೆಲ್ಲ ಮಾಡಿರುವ ಹಲವಾರು ಮಹಿಳೆಯರಿದ್ದಾರೆ(ಆಶಯ– ಮಲ್ಟಿಟಾಸ್ಕಿಂಗ್ ಮಹಿಳೆಯರ ಸಹಜ ಸಾಮರ್ಥ್ಯ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT