ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲದಲ್ಲಿ ಚರ್ಮ ಒಡೆಯುವ ಮುನ್ನ..

Last Updated 19 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಚುಮು,ಚುಮು ಚಳಿಯಲ್ಲಿ ಎಳೆಯ ಬಿಸಿಲಿಗೆ ಮೈ ಒಡಿ  ನಿಂತರೆ ಏನೋ ಹಿತ. ಆದರೆ ಬಿರು ಬಿಸಿಲಿಗೆ ಮೈ ಒಡ್ಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಚಳಿಗಾಲದಲ್ಲಿ ಹೆಚ್ಚು ಸಮಸ್ಯೆ ಕಾಡುವುದು ನಮ್ಮ ಮೃದುವಾದ ಚರ್ಮಕ್ಕೆ ಹಾಗೂ ಕೂದಲಿಗೆ. ಚಳಿಗಾಲದಲ್ಲಿ ಬಿಸಿ ಎಷ್ಟು ಅಪ್ಯಾಯಮಾನ ನೀಡುತ್ತದೋ ಅಷ್ಟೆ ಅಪಾಯ ಕೂಡ. ಉದಾರಣೆಗೆ ಸುಡುವ ನೀರಿನ ಸ್ನಾನ ಚರ್ಮಕ್ಕೆ ಹಾನಿ ಉಂಟುಮಾಡುತ್ತದೆ.

ಚಳಿಗಾಲದಲ್ಲಿ ಸ್ನಾನ ವಿಧಾನ: ಚರ್ಮದ ಕಾಂತಿಯನ್ನು ನೀವು ಕಾಯ್ದುಕೊಳ್ಳಲೇ ಬೇಕೆಂದಿದ್ದರೆ ಸೂರ್ಯೋದಯಕ್ಕೂ ಮುನ್ನ ಸ್ನಾನ ಮಾಡಬೇಕು.
* ಸಾಮಾನ್ಯ ಬೆಚ್ಚಗಿನ ನೀರನ್ನು ಸ್ನಾನಕ್ಕೆ ಬಳಸಿ.
* ಸ್ನಾನಕ್ಕೂ ಮುನ್ನ ನೀವು ಮೈ,ಮುಖಕ್ಕೆ ಕೆಲವು ಎಣ್ಣೆಗಳನ್ನು ಸವರಿಕೊಳ್ಳಬಹುದು.
* ಆಲೀವ್ ಎಣ್ಣೆ, ಬಾದಾಮಿ ಎಣ್ಣೆ, ಎಳ್ಳೆಣ್ಣೆಯನ್ನು ತುಸು ಬಿಸಿಮಾಡಿ ಹಚ್ಚಿಕೊಳ್ಳಿ. ನಂತರ ಸ್ನಾನ ಮಾಡಿ.
* ಕೊಬ್ಬರಿ ಎಣ್ಣೆಯನ್ನು ನೇರವಾಗಿ ಚರ್ಮಕ್ಕೆ ಹಚ್ಚುವುದು ಸರಿಯಾದ ವಿಧಾನವಲ್ಲ.
ನೀವು ಸ್ನಾನ ಪೂರೈಸಿದ ನಂತರ ಕೊನೆಯಲ್ಲಿ ನಾಲ್ಕು ಚೊಂಬು ನೀರು ಉಳಿದಾಗ ಅದಕ್ಕೆ ಹತ್ತು ಹನಿ ಕೊಬ್ಬರಿ ಎಣ್ಣೆ ಹಾಕಿ ನೀರನ್ನು ಮೈಗೆ ಸುರಿದುಕೊಳ್ಳಿ. ಈಗ ನಿಮ್ಮ ಮೈ ಬಿರಿಯುವುದಿಲ್ಲ.

ಸೋಪ್‌ನ ಬದಲು ಹಿಟ್ಟು ಬಳಸಿ: ಚಳಿಗಾಲದಲ್ಲಿ ಮತ್ತೊಂದು ಸಮಸ್ಯೆ ಮೈ ಸೋಪ್‌ನದು. ಯಾವ ಸೋಪ್ ಹಚ್ಚಿದರೂ ಮೈ ಬಿರಿಯದೇ ಇರುವುದಿಲ್ಲ. ಸೋಪ್ ಬಳಸದಿದ್ದರೆ ಮೈ ವಾಸನೆ ಬರುತ್ತದೆ. ಎಂದೆಲ್ಲ ಯೋಚಿಸುತ್ತಿದ್ದರೆ ನೀವು ಸೋಪ್ ಬದಲು ಕಡಲೇ ಹಿಟ್ಟು, ಮೆಂತ್ಯೆ ಹಿಟ್ಟು, ಹೆಸರು ಹಿಟ್ಟು ಸೇರಿಸಿ ಮೈಗೆ ಹಚ್ಚಿಕೊಂಡು ಸ್ನಾನ ಮಾಡಬಹುದು. ಸುಗಂಧದ ಪರಿಮಳಕ್ಕಾಗಿ ನೀವು ನೀರಿಗೆ ಗಂಧದ ಎಣ್ಣೆ ಸೇರಿಸಿಕೊಳ್ಳಿ. ಗುಲಾಬಿ ಜಲ ಸೇರಿಸಿಕೊಳ್ಳಿ. ಸುಗಂಧ ಭರಿತ ಆರೋಗ್ಯವಂತ ಸೌಂದರ್ಯ ವರ್ಧಕ ಸ್ನಾನ ನಿಮ್ಮದಾಗುವುದು.

ಹಾಲು,ಬೆಣ್ಣೆ,ಕೆನೆ ಚರ್ಮದ ಸೌಂದರ್ಯಕ್ಕಾಗಿ: ನಿಮ್ಮ ಬಿಡುವಿನ ಸಮಯದಲ್ಲಿ ಹಸಿ ಹಾಲನ್ನು ಮೈಗೆಲ್ಲ ಹಚ್ಚಿಕೊಳ್ಳಿ ನಂತರ ಕನೆ ಅಥವಾ ಬೆಣ್ಣೆಗೆ ತುಸು ಉಪ್ಪು ಹಾಕಿ ಮಸಾಜ್ ಮಾಡಿಕೊಳ್ಳಿ. ರಾತ್ರಿ ಪೂರಾ ಹಾಗೆ ಇದ್ದು ಬೆಳಗ್ಗೆ ಸ್ನಾನ ಮಾಡಿಕೊಂಡರೆ ನಿಮ್ಮ ಚರ್ಮ ಬಿರಿಯುವುದಿಲ್ಲ.
* ತುಟಿಗಳು ಒಡೆದುಕೊಂಡಿದ್ದರೆ ಬೆಣ್ಣೆಗೆ ನಾಲ್ಕು ಹನಿ ಜೇನುತುಪ್ಪಸೇರಿಸಿ ಹಚ್ಚಿಕೊಳ್ಳಿ.
* ಕಣ್ಣ ಸುತ್ತಲೂ ಕಪ್ಪು ಹೆಚ್ಚಾಗಿದ್ದರೆ ಹಾಲಿನ ಕೆನೆಗೆ ಗುಲಾಬಿ ಜಲ ಸೇರಿಸಿ ಹಚ್ಚಿಕೊಳ್ಳಿ.
* ಚಳಿಗಾಲದಲ್ಲಿ ಭಾದಿಸಬಹುದಾದ ಎಲ್ಲ ಚರ್ಮ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.
ಕೂದಲ ಆರೈಕೆ: ಚಳಿಗಾಲದ ಸಮಸ್ಯೆ ಕೂದಲ ಸೀಳುವಿಕೆಗಾಗಿ ಆಗ ತಾನೆ ಒಡೆದ ತೆಂಗಿನ ಕಾಯಿಯನ್ನು ತುರಿದುಕೊಳ್ಳಿ ಅದನ್ನು ನುಣ್ಣಗೆ ರುಬ್ಬಿಕೊಳ್ಳಿ ಹೆಚ್ಚು ನೀರು ಸೇರಿಸಬಾರದು
* ಈ ಪೇಸ್ಟನ್ನು ಕೂದಲಿಗೆ ಹಚ್ಚಿಕೊಂಡು ಅರ್ಧಗಂಟೆ ಬಿಟ್ಟು ತೊಳೆದುಕೊಳ್ಳಿ.
* ಕೂದಲಿನ ಶುಷ್ಕ ಸಮಸ್ಯೆ ನಿವಾರಣೆಗೊಳ್ಳುವುದು.
* ವಾರಕ್ಕೊಮ್ಮೆ ಕೊಬ್ಬರಿ ಎಣ್ಣೆಯನ್ನು ತಲೆಬುಡದಿಂದ ಹಚ್ಚುತ್ತ ಕೂದಲ ತುದಿಯ ವರೆಗೂ ಹಚ್ಚಿ ತಲೆ ಕೂದಲನ್ನು ಸಣ್ಣ ಹಲ್ಲಿನ ಬಾಚಣಿಕೆಯಿಂದ ಬಾಚಿ
* ಕೂದಲ ತುದಿಯ ವರೆಗೂ ಜಡೆ ಹೆಣೆದು ರಿಬ್ಬನ್‌ ಹಾಕಿ ಮೇಲೆ ಕಟ್ಟಿಕೊಳ್ಳಿ. ತಿಂಗಳೊಪ್ಪತ್ತಿನಲ್ಲೆ ನಿಮ್ಮ ಕೂದಲು ದಟ್ಟವಾಗಿ ಬೆಳೆಯುವುದು.

ಉಡುಪುಗಳ ಆಯ್ಕೆ:
* ಉಣ್ಣೆಯ ಉಡುಪುಗಳನ್ನು ಹೆಚ್ಚಾಗಿ ಧರಿಸಬಾರದು.
* ಸಂಜೆಯ ಮೇಲೆ ನೀವು ಹೊರ ಹೋಗುತ್ತಿದ್ದರೆ ಉಣ್ಣೆಯ ಉಡುಪು ಧರಿಸಿ.
* ಮನೆಯಲ್ಲಿ ತುಸು ದಪ್ಪನಾದ ಕಾಟನ್ ಉಡುಗೆ ಧರಿಸಿ.
* ಹೊರ ಹೋಗುವಾಗ ಮರೆಯದೇ ಕಾಲುಚೀಲ ಧರಿಸಿ.     

ಒಡೆದ ಹಿಮ್ಮಡಿಗೆ ಪರಿಹಾರ?
ಚಳಿಗಾಲದ ಮತ್ತೊಂದು ಸಮಸ್ಯೆ ಹಿಮ್ಮಡಿ ಊತ ಹಾಗೂ ಒಡೆತ. ಬಿರುಕು ಬಿಟ್ಟ ಪಾದಗಳು ನೋಡಲಾಗದು. ನೋವು ಸಹಿಸಲಾಗದು. ರಾತ್ರಿ ಮಲಗುವ ಮುನ್ನ ಒಂದು ಚಮಚ ಹರಳೆಣ್ಣೆಗೆ ತಾಂಬೂಲಕ್ಕೆ ಮಿಶ್ರಣ ಮಾಡುವ ಸುಣ್ಣವನ್ನು ಚಿಟಿಕೆಯಷ್ಟು ಸೇರಿಸಿ ಕನಿಷ್ಟ ಐದು ನಿಮಿಷ ಬೆರಳುಗಳಿಂದ ಕಲೆಸಿ. ಈ ಲೇಪವನ್ನು ಬಿರುಕಿಗೆ ತುಂಬಿ. ಕ್ರಮೇಣ ಪಾದಗಳ ಬಿರುಕು ಕಡಿಮೆಯಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT