ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋರ್ಚುಗಲ್‌ನ ದಟ್ಟ ಅರಣ್ಯದಲ್ಲಿ ಕಾಳ್ಗಿಚ್ಚು

ಕಾಡುಮರಗಳು, ಒಣಪ್ರದೇಶ ಅಗ್ನಿಗೆ ಆಹುತಿ
Last Updated 15 ಸೆಪ್ಟೆಂಬರ್ 2020, 6:10 IST
ಅಕ್ಷರ ಗಾತ್ರ

ಲಿಸ್ಬಾನ್: ಸುಮಾರು ಒಂದು ಸಾವಿರ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ 15 ನೀರು ಸಿಂಪಡಿಸುವ ವಿಮಾನಗಳೊಂದಿಗಿನ ಸತತ ಹೋರಾಟದೊಂದಿಗೆ ಮಧ್ಯ ಪೋರ್ಚುಗಲ್‌ನ ದಟ್ಟ ಅರಣ್ಯ ಮತ್ತು ಕಾಡು ಗುಡ್ಡಗಳಲ್ಲಿ ಹೊತ್ತಿಕೊಂಡಿದ್ದ ಕಾಳ್ಗಿಚ್ಚನ್ನು ನಂದಿಸಲಾಯಿತು.

ಭಾನುವಾರದಿಂದ ಆರಂಭವಾಗಿರುವ ಕಾಳ್ಗಿಚ್ಚು, ಲಿಸ್ಬನ್‌ನಿಂದ ಉತ್ತರಕ್ಕೆ 200 ಕಿಲೋಮೀಟರ್‌ ದೂರದಲ್ಲಿರುವ ಪ್ರೋಯೆನ್-ಎ-ನೋವಾ ಸುತ್ತಮುತ್ತ ಹಾಗೂ ಮಧ್ಯ ಪೋರ್ಚುಗಲ್‌ನ ಸುತ್ತ ವ್ಯಾಪಿಸಿಕೊಂಡಿತ್ತು. ’ಬೆಂಕಿಯ ಜ್ವಾಲೆ55 ಕಿಲೋಮೀಟರ್ (34 ಮೈಲಿ) ಗಿಂತ ಹೆಚ್ಚು ವಿಸ್ತರಿಸಿತ್ತು. ಪರಿಣಾಮವಾಗಿ ದೊಡ್ಡ ದೊಡ್ಡ ಮರಗಳು, ಒಣಗಿದ ಸಸ್ಯಗಳು ಬೆಂಕಿಗೆ ಆಹುತಿಯಾಗಿವೆ’ ಎಂದು ಎಂದು ಸ್ಥಳೀಯ ನಾಗರಿಕ ಸಂರಕ್ಷಣಾ ಸಂಸ್ಥೆ ಕಮಾಂಡರ್ ಲೂಯಿಸ್ ಬೆಲೊ ಕೋಸ್ಟಾ ಸ್ಥಳೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಕಾಳ್ಗಿಚ್ಚಿನಿಂದ ರಕ್ಷಿಸುವುದಕ್ಕಾಗಿ ಅರಣ್ಯದಂಚಿನಲ್ಲಿದ್ದ ಹಳ್ಳಿಗಳ ಜನರನ್ನು ಸ್ಥಳಾಂತರಿಸಲಾಗಿದೆ. ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದ ಐವರು ಸಿಬ್ಬಂದಿಗೆ ಸುಟ್ಟಗಾಯಗಳಾಗಿವೆ. ಅವರ ವಾಹನಗಳು ಬೆಂಕಿಗೆ ಆಹುತಿಯಾಗಿದೆ.

ಕಳಪೆ ಅರಣ್ಯ ನಿರ್ವಹಣೆಯಿಂದಾಗಿ ಪೋರ್ಚುಗಲ್‌ ಸುತ್ತಲಿನ ಅರಣ್ಯ ಪ್ರದೇಶದಲ್ಲಿ ಪ್ರತಿವರ್ಷ ಹೀಗೆ ಕಾಳ್ಗಿಚ್ಚು ಸಂಭವಿಸುತ್ತಲೇ ಇರುತ್ತದೆ ಎಂಬ ಆರೋಪವೂ ಕೇಳಿಬಂದಿದೆ. ಕಳೆದ ಮೂರು ವರ್ಷಗಳಲ್ಲಿ ಈ ಭಾಗದಲ್ಲಿ ಸಂಭವಿಸಿದ ಎರಡು ಬೃಹತ್ ಅಗ್ನಿ ಅನಾಹುತದ ಘಟನೆಯಲ್ಲಿ 106 ಮಂದಿ ಸಾವನ್ನಪ್ಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT