ಸೋಮವಾರ, ಜನವರಿ 18, 2021
21 °C

ಮೆಕ್ಸಿಕೊ: ಬಾರ್‌ನಲ್ಲಿ ಗುಂಡಿನ ದಾಳಿ, 11 ಮಂದಿ ಸಾವು

ಎಪಿ Updated:

ಅಕ್ಷರ ಗಾತ್ರ : | |

Prajavani

ಮೆಕ್ಸಿಕೊ ನಗರ: ಕೇಂದ್ರ ಮೆಕ್ಸಿಕೊದ ಗ್ವಾನಾಜುವಾಟೊ ನಗರದಲ್ಲಿರುವ ಬಾರ್‌ನಲ್ಲಿ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ 11 ಮಂದಿ ಸಾವನ್ನಪ್ಪಿದ್ದಾರೆ.

ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ ಹೈವೇ ಬದಿಯ ಬಾರ್‌ನಲ್ಲಿದ್ದ ನಾಲ್ವರು ನೃತ್ಯಗಾರ್ತಿಯರು ಈ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಗುಂಡಿನ ದಾಳಿಗೆ ಕಾರಣ ತಿಳಿದಿಲ್ಲ. ಮಾದಕ ವಸ್ತುಗಳ ಜಾಲದೊಂದಿಗೆ ನಂಟಿರುವ ತಂಡ ಈ ಕೃತ್ಯ ನಡೆಸಿರಬಹುದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 

ಗ್ವಾನಾಜುವಾಟೊ ನಗರವನ್ನು ಮೆಕ್ಸಿಕೊ ರಾಜ್ಯದಲ್ಲೇ ಅತಿ ಹೆಚ್ಚು ಹಿಂಸಾಚಾರ ನಡೆಯುವ ಪ್ರದೇಶವೆಂದು ಗುರುತಿಸಲಾಗಿದೆ. ಆಗಸ್ಟ್‌ 2 ರಂದು ಇಂಥದ್ದೇ ಒಂದು ಘಟನೆಗೆ ಸಂಬಂಧಿಸಿ ಸ್ಥಳೀಯ ಗ್ಯಾಂಗ್‌ನ ಮುಖಂಡನೊಬ್ಬನನ್ನು ಬಂಧಿಸಿದ್ದು, ಆತನಿಂದ ಈ ಕೃತ್ಯದ ಬಗ್ಗೆಯೂ ಮಾಹಿತಿ ಸಿಗಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು