ಶುಕ್ರವಾರ, ಮೇ 27, 2022
22 °C
ಶಾಂಕ್ಸಿ ಪ್ರಾಂತ್ಯದಲ್ಲಿ ದುರ್ಘಟನೆ

ರಕ್ಷಣಾ ಕಾರ್ಯಾಚರಣೆ ವಿಫಲ: ಗಣಿಯಲ್ಲಿ ಸಿಲುಕಿದ್ದ 13 ಕಾರ್ಮಿಕರು ಮೃತ

ಪಿಟಿಐ Updated:

ಅಕ್ಷರ ಗಾತ್ರ : | |

ಬಿಜಿಂಗ್: ಮ್ಯಾಂಗನೀಸ್ ಗಣಿಯಲ್ಲಿ ಸಿಲುಕಿ 13 ಜನ ಮೃತಪಟ್ಟಿರುವ ಘಟನೆ ಚೀನಾದ ಉತ್ತರ ಭಾಗವಾದ ಶಾಂಕ್ಸಿ ಪ್ರಾಂತ್ಯದಲ್ಲಿ ನಡೆದಿರುವುದು ವರದಿಯಾಗಿದೆ.

‘ಕಳೆದ ಒಂದು ವಾರದ ಹಿಂದೆ ಡಾಯಂಗ್ಸಿ ಗಣಿಯ ಆಳ ಪ್ರದೇಶದೊಳಗೆ ಅದಿರು ಕುಸಿದು 13 ಕಾರ್ಮಿಕರು ಸಿಲುಕಿಕೊಂಡಿದ್ದರು. ರಕ್ಷಣಾ ಕಾರ್ಯಚರಣೆ ನಡೆಯಿತಾದರೂ ಯಾರೂ ಜೀವಂತವಾಗಿ ಬರಲಿಲ್ಲ. ರಕ್ಷಣಾ ಕಾರ್ಯಾಚರಣೆಯಲ್ಲಿ 1084 ತಜ್ಞರು ಭಾಗವಹಿಸಿದ್ದರು‘ ಎಂದು ಅಲ್ಲಿನ ಸ್ಥಳೀಯಾಡಳಿತ ತಿಳಿಸಿದೆ.

ಘಟನೆಗೆ ಸಂಬಂಧಿಸಿದಂತೆ ಗಣಿ ಪ್ರಾಧಿಕಾರದ 13 ಜನರ ಮೇಲೆ ಮೊಕದ್ದಮೆ ದಾಖಲಾಗಿದ್ದು, ತನಿಖೆ ನಡೆಸಲು ಸರ್ಕಾರ ಅನುಮತಿಸಿದೆ ಎಂದು ಸರ್ಕಾರದ ಅಧಿಕೃತ ಸುದ್ದಿ ಸಂಸ್ಥೆಯಾದ ಕ್ಸಿನ್‌ಹುವಾ ತಿಳಿಸಿದೆ.

ಜಗತ್ತಿನಲ್ಲಿಯೇ ಚೀನಾದ ಗಣಿಗಳು ಅತ್ಯಂತ ಅಪಾಯಕಾರಿ ಎನಿಸಿಕೊಂಡಿವೆ. 2009 ರಲ್ಲಿ ಒಂದೇ ವರ್ಷದಲ್ಲಿ 2631 ಗಣಿ ಕಾರ್ಮಿಕರು ಮೃತಪಟ್ಟಿದ್ದರು. ಇದಕ್ಕೆ ಪ್ರಮುಖ ಕಾರಣ ಅಲ್ಲಿನ ಗಣಿಗಳನ್ನು ನೋಡಿಕೊಳ್ಳುವವರ ನಿರ್ಲಕ್ಷ್ಯ ಎಂದು ಆರೋಪಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು