ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಓಮೈಕ್ರಾನ್‌ನ ಎರಡು ಹೊಸ ಉಪತಳಿಗಳು ಪತ್ತೆ

Last Updated 14 ಏಪ್ರಿಲ್ 2022, 11:49 IST
ಅಕ್ಷರ ಗಾತ್ರ

ಜೊಹಾನ್ಸ್‌ಬರ್ಗ್: ಕೊರೊನಾವೈರಸ್‌ನ ರೂಪಾಂತರಿ ತಳಿಯಾದ ಓಮೈಕ್ರಾನ್‌ನ ಎರಡು ಉಪತಳಿಗಳು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವುದಾಗಿ ವರದಿಯಾಗಿದೆ

‘ಜಗತ್ತಿನಾದ್ಯಂತಓಮೈಕ್ರಾನ್‌ನ 5 ಉಪ ತಳಿಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ಬಿಎ.4, ಬಿಎ.5 ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದಿವೆ’ ಎಂದು ಅಲ್ಲಿನ ರಾಷ್ಟ್ರೀಯ ಆರೋಗ್ಯ ಇಲಾಖೆ ಖಚಿತಪಡಿಸಿದೆ.

‘ಈಉಪ ತಳಿಗಳು ಪರಿಣಾಮಕಾರಿಯಾಗಿರುವುದಿಲ್ಲ ಹಾಗೂ ಪ್ರಾಣ ಹಾನಿ ಉಂಟು ಮಾಡುವುದಿಲ್ಲ. ಇವೆರಡೂ ಕೊರೊನಾ ಐದನೇ ಅಲೆಗೆ ಕಾರಣವಾಗುವುದಿಲ್ಲ’ ಎಂದು ಇಲಾಖೆಯ ವಕ್ತಾರ ಪೋಸ್ಟರ್ ಮೊಹಾಲೆ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಆರೋಗ್ಯ ಇಲಾಖೆ ಬರುವ ಮೇ ತಿಂಗಳಲ್ಲಿ ಕೊರೊನಾದ 5 ನೇ ಅಲೆ ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಿದೆ. ಕೊರೊನಾದ ಕೆಲ ಹೊಸ ತಳಿಗಳು ಒಂದಕ್ಕಿಂತ ಒಂದು ಹೆಚ್ಚು ವೇಗವಾಗಿ ಹರಡುವ ಲಕ್ಷಣಗಳು ಕಾಣಿಸುತ್ತಿವೆ ಎಂದು ಅದು ತಿಳಿಸಿದೆ.

ಕಳೆದ 24 ಗಂಟೆಯಲ್ಲಿದಕ್ಷಿಣ ಆಫ್ರಿಕಾದಲ್ಲಿ1,291 ಹೊಸ ಕೊರೊನಾವೈರಸ್‌ನ ಪ್ರಕರಣಗಳು ಕಂಡು ಬಂದಿದ್ದು ಇಬ್ಬರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಆರೋಗ್ಯ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT