ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಟ್ರಾಜೆನೆಕಾ ಲಸಿಕೆ ಸುರಕ್ಷಿತ: ಬ್ರಿಟನ್‌ನ ಆರೋಗ್ಯ ಉತ್ಪನ್ನ ಸಂಸ್ಥೆ ಸ್ಪಷ್ಟನೆ

1.8 ಡೋಸ್‌ ನೀಡಲಾಗಿದ್ದು, ರಕ್ತ ಹೆಪ್ಪುಗಟ್ಟುವ ಸಮಸ್ಯೆಯಿಂದ 7 ಜನರ ಸಾವು: ಬ್ರಿಟನ್‌
Last Updated 3 ಏಪ್ರಿಲ್ 2021, 13:39 IST
ಅಕ್ಷರ ಗಾತ್ರ

ಲಂಡನ್‌: ಕೋವಿಡ್‌ ವಿರುದ್ಧದ ಆಕ್ಸ್‌ಫರ್ಡ್‌–ಅಸ್ಟ್ರಾಜೆನೆಕಾ ಲಸಿಕೆ ಸುರಕ್ಷಿತ ಎಂದು ಬ್ರಿಟನ್‌ನ ಔಷಧ ಮತ್ತು ಆರೋಗ್ಯ ಉತ್ಪನ್ನಗಳ ನಿಯಂತ್ರಣ ಸಂಸ್ಥೆ (ಎಂಎಚ್‌ಆರ್‌ಎ) ಹೇಳಿದೆ.

ಲಸಿಕೆಯನ್ನು ಪಡೆದವರ ಪೈಕಿ ಏಳು ಜನರು ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ತೊಂದರೆಯಿಂದ ಸಾವನ್ನಪ್ಪಿದ್ದಾರೆ. ಆದರೆ, ಈ ಸಾವುಗಳಿಗೆ ಲಸಿಕೆಗೂ ನೇರ ಸಂಬಂಧ ಇದೆ ಎನ್ನಲು ಯಾವುದೇ ಸಾಕ್ಚ್ಯ ಇಲ್ಲ ಎಂದೂ ಸಂಸ್ಥೆ ಹೇಳಿದೆ.

ಕೋವಿಡ್‌ ಲಸಿಕೆ ಕಾರ್ಯಕ್ರಮ ಕುರಿತು ಮಾಹಿತಿ ನೀಡಿರುವ ಸಂಸ್ಥೆ, ‘ದೇಶದಲ್ಲಿ ಜನರಿಗೆ ಆಕ್ಸ್‌ಫರ್ಡ್‌– ಅಸ್ಟ್ರಾ ಜೆನೆಕಾ ಲಸಿಕೆಯ 1.8 ಡೋಸ್‌ ನೀಡಲಾಗಿದೆ. 30 ಜನರಲ್ಲಿ ರಕ್ತ ಹೆಟ್ಟುಗಟ್ಟುವ ಸಮಸ್ಯೆ ಕಾಣಿಸಿಕೊಂಡಿದ್ದರೆ, 7 ಜನರು ಈ ತೊಂದರೆಯಿಂದ ಸಾವನ್ನಪ್ಪಿದ್ದಾರೆ’ ಎಂದು ತಿಳಿಸಿದೆ.

‘ರಕ್ತಹೆಪ್ಪುಗಟ್ಟವುದಕ್ಕೂ, ಲಸಿಕೆಗೂ ಸಂಬಂಧ ಇದೆಯೇ ಅಥವಾ ಸಾವು ಸಂಭವಿಸಿರುವುದು ಕಾಕತಾಳೀಯವೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಇತರ ಕೆಲವು ಸಣ್ಣ ಅಡ್ಡಪರಿಣಾಮಗಳನ್ನು ಹೊರತುಪಡಿಸಿದರೆ ಲಸಿಕೆ ಸಂಪೂರ್ಣ ಸುರಕ್ಷಿತ. ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT