ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಗುಂಡಿನ ದಾಳಿ : 9 ಮಂದಿ ಸಾವು

Last Updated 22 ಜನವರಿ 2023, 11:24 IST
ಅಕ್ಷರ ಗಾತ್ರ

ಮಾಂಟೆರಿ ಪಾರ್ಕ್: ಚಾಂದ್ರಮಾನ ಹೊಸ ವರ್ಷದ ಆಚರಣೆಯ ಬಳಿಕ ಲಾಸ್ ಏಂಜಲೀಸ್‌ನ ಪೂರ್ವದ ನಗರದಲ್ಲಿ ಶನಿವಾರ ತಡರಾತ್ರಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಒಂಬತ್ತು ಜನರು ಸಾವಿಗೀಡಾಗಿದ್ದಾರೆ. ಸಾವಿರಾರು ಜನ ಹೊಸ ವರ್ಷಾಚರಣೆಯಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ರಾತ್ರಿ 10:22 ಕ್ಕೆ ಗುಂಡಿನ ದಾಳಿ ವರದಿಯಾಗಿದೆ. ಮಾಂಟೆರಿ ಪಾರ್ಕ್‌ನ ವಹಿವಾಟು ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ಬಂದೂಕುಧಾರಿ ವ್ಯಕ್ತಿಯೊಬ್ಬನಿಂದ ದಾಳಿ ನಡೆದಿದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.

ದಾಳಿಗೆ ಪ್ರತಿಯಾಗಿ ಹತ್ತಾರು ಪೊಲೀಸ್ ಅಧಿಕಾರಿಗಳು ಹಲವಾರು ಗಂಟೆಗಳವರೆಗೆ ಪ್ರತಿದಾಳಿ ನಡೆಸಿದ ವರದಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡಲಿಲ್ಲ.

ಮಾಂಟೆರಿ ಪಾರ್ಕ್ 60,000 ಜನರನ್ನು ಹೊಂದಿದ್ದು, ಬಹುಪಾಲು ಮಂದಿ ಏಷ್ಯಾದವರು. ಮೂರು ಜನರು ತಮ್ಮ ವ್ಯಾಪಾರ ಕ್ರೇಂದ್ರಕ್ಕೆ ನುಗ್ಗಿ ಮಳಿಗೆ ಬಾಗಿಲು ಮುಚ್ಚುವಂತೆ ಹೇಳಿದರು ಎಂದು ದಾಳಿ ಸಂಭವಿಸಿದ ಬೀದಿಯಲ್ಲಿ ಆಹಾರ ಕೇಂದ್ರ ಹೊಂದಿರುವ ಸೆಯುಂಗ್ ವೊನ್ ಚೋಯ್ ಲಾಸ್ ಆಂಗಲ್ಸ್ ಟೈಮ್ಸ್‌ಗೆ ಹೇಳಿದ್ದಾರೆ.

ಮೆಷಿನ್ ಗನ್‌ನೊಂದಿಗೆ ದಾಳಿಕೋರನಿದ್ದಾನೆ. ಅವನ ಬಳಿ ಅನೇಕ ಸುತ್ತಿನ ಮದ್ದುಗುಂಡುಗಳಿವೆ. ಆದ್ದರಿಂದ ಆತ ಲೋಡ್ ಮಾಡಿ ಮತ್ತೆ ದಾಳಿ ನಡೆಸಬಹುದು. ಈಗಾಗಲೇ ಇಲ್ಲಿನ ಡ್ಯಾನ್ಸ್ ಕ್ಲಬ್‌ನಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ತಾವು ಭಾವಿಸಿರುವುದಾಗಿ ಆ ಮೂವರು ಹೇಳಿದರು ಎಂದು ಚೋಯ್ ತಿಳಿಸಿದ್ದಾರೆ.

ಶನಿವಾರ ಎರಡು ದಿನಗಳ ಹೊಸ ವರ್ಷದ ಉತ್ಸವದ ಪ್ರಾರಂಭವಾಗಿದೆ. ಇದು ದಕ್ಷಿಣ ಕ್ಯಾಲಿಫೋರ್ನಿಯಾದ ಅತಿದೊಡ್ಡ ಚಾಂದ್ರಮಾನ ಹೊಸ ವರ್ಷದ ಕಾರ್ಯಕ್ರಮಗಳಲ್ಲಿ ಒಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT