ಸೋಮವಾರ, ನವೆಂಬರ್ 30, 2020
26 °C

ಅಮೆರಿಕ ಚುನಾವಣೆ: 200ಕ್ಕೂ ಹೆಚ್ಚು ಭಾರತೀಯ ಮೂಲದವರು ಎಲೆಕ್ಟೋರ್‌ಗಳಾಗಿ ಆಯ್ಕೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಅಮೆರಿಕ ಚುನಾವಣೆಯಲ್ಲಿ ಸುಮಾರು 200ರಿಂದ 300 ಭಾರತೀಯ ಅಮೆರಿಕನ್ನರು ಎಲೆಕ್ಟೋರ್‌ಗಳಾಗಿ ಆಯ್ಕೆಯಾಗಿದ್ದಾರೆ

ಒಂದು ಅಂದಾಜಿನ ಪ್ರಕಾರ ಸೆನೆಟ್‌, ಕಾಂಗ್ರೆಸ್‌ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 200ರಿಂದ 300ಕ್ಕೂ ಹೆಚ್ಚು ಭಾರತೀಯ ಮೂಲದವರು ಚುನಾಯಿತರಾಗಿದ್ದಾರೆ. ಸರ್ಕಾರದ ಅಧಿಕೃತ ಅಂಕಿ ಅಂಶಗಳು ಬಿಡುಗಡೆಯಾದಾಗ ಮಾತ್ರ ನಿಖರವಾದ ಮಾಹಿತಿ ಲಭ್ಯವಾಗಲಿದೆ ಎಂದು ಇಂಡಿಯಾಸ್ಪೋರಾ ವೇದಿಕೆ ವರದಿ ಮಾಡಿದೆ.

ಕೃಷ್ಣಮೂರ್ತಿ, ಅಮಿ ಬೆರಾ, ರೊಹನ್ ಖನ್ನಾ ಮತ್ತು ಪ್ರಮೀಳಾ ಜಯಪಾಲ್ ಅವರು ಸಂಸತ್ತಿಗೆ ಆಯ್ಕೆಯಾದ ಪ್ರಮುಖರಾಗಿದ್ದಾರೆ. ಕುಲಕರ್ಣಿ, ಅನಂತಮುಲಾ, ಹಿಮಾಲ್ ಅವರು ಸೆನೆಟ್‌ಗೆ ಆಯ್ಕೆಯಾಗಿದ್ದಾರೆ.

ಕೇಶರಾಮ್, ಕಲ್ರಾ, ನಿಮಾ ಕುಲಕರ್ಣಿ, ಹಶ್ಮಿ ಸೇರಿದಂತೆ ಹಲವರು ಎಲೆಕ್ಟೋರ್‌ಗಳಾಗಿ ಚುನಾಯಿತರಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು