ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲಿಬಾನ್‌ನಿಂದ ಪಾರಾಗಲು ತಂತಿ ಬೇಲಿ ಮೇಲೆ ಮಕ್ಕಳನ್ನು ಎಸೆಯುತ್ತಿರುವ ತಾಯಂದಿರು

Last Updated 19 ಆಗಸ್ಟ್ 2021, 15:14 IST
ಅಕ್ಷರ ಗಾತ್ರ

ಕಾಬೂಲ್: ತಾಲಿಬಾನ್‌ ಉಗ್ರರಿಂದ ತಮ್ಮ ಮಕ್ಕಳನ್ನು ರಕ್ಷಿಸುವ ಪ್ರಯತ್ನದಲ್ಲಿ ಕಾಬೂಲ್‌ನಲ್ಲಿರುವ ಅಫ್ಗಾನಿಸ್ತಾನ ಮಹಿಳೆಯರು ತಮ್ಮ ಮಕ್ಕಳನ್ನು ಕಾಬೂಲ್‌ನ ಹಮೀದ್ ಕರ್ಜೈ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಬಳಿಯ ಮುಳ್ಳುತಂತಿಯ ತಡೆಗೋಡೆಗಳ ಮೇಲೆ ಎಸೆದಿದ್ದಾರೆ ಎಂದು ಹಿರಿಯ ಬ್ರಿಟಿಷ್ ಸಶಸ್ತ್ರ ಪಡೆಗಳನ್ನು ಉಲ್ಲೇಖಿಸಿ ಸ್ಕೈ ನ್ಯೂಸ್ ವರದಿ ಮಾಡಿದೆ.

‘ಇದು ಭಯಾನಕ ದೃಶ್ಯವಾಗಿದೆ. ಮಹಿಳೆಯರು ತಮ್ಮ ಮಕ್ಕಳನ್ನು ರೇಜರ್ ತಂತಿಯ ಮೇಲೆ ಎಸೆಯುತ್ತಿದ್ದರು. ಮಕ್ಕಳನ್ನ ಕರೆದೊಯ್ಯುವಂತೆ ಸೈನಿಕರನ್ನು ಕೇಳುತ್ತಿದ್ದರು. ಕೆಲವು ಮಕ್ಕಳು ತಂತಿಯಲ್ಲಿ ಸಿಲುಕಿಕೊಂಡಿದ್ದವು’ ಎಂದು ಅವರು ತಿಳಿಸಿದ್ದಾರೆ.

ಗುರುವಾರವೂ ಸಹ ಕಾಬೂಲ್‌ನ ಮುಖ್ಯ ವಿಮಾನ ನಿಲ್ದಾಣದಲ್ಲಿ ಕಿಕ್ದಿರಿದು ತುಂಬಿದ್ದ ಪ್ರಯಾಣಿಕರು ದೇಶ ಬಿಟ್ಟು ಹೇಗಾದರೂ ಹೊರ ಹೋಗಲು ಪ್ರಯತ್ನಿಸುತ್ತಿದ್ದರು.

ವೀಸಾ ಅಥವಾ ವಿಮಾನ ನಿಲ್ದಾಣದವರೆಗೂ ಸುರಕ್ಷಿತವಾಗಿ ತೆರಳಲು ರಾಜಧಾನಿಯಲ್ಲಿ ವಿದೇಶಿ ರಾಯಭಾರ ಕಚೇರಿಯ ಕಾಂಪೌಂಡ್‌ಗಳಲ್ಲಿ ಜನರು ಕಿಕ್ಕಿರಿದು ಸೇರಿದ್ದರು.

ವಾರಾಂತ್ಯದಲ್ಲಿ ಕಾಬೂಲ್‌ಗೆ ತಾಲಿಬಾನಿಗಳ ಮಿಂಚಿನ ದಾಳಿ ಬಳಿಕ ಎಲ್ಲೆಡೆ ಆತಂಕದ ವಾತಾವರಣ ಮನೆ ಮಾಡಿದೆ. ಅಧ್ಯಕ್ಷ ಅಶ್ರಫ್ ಘನಿ ಪಲಾಯನದ ಬಳಿಕ ಆತಂಕಗೊಂಡ ಅಲ್ಲಿನ ಜನ ದೇಶ ಬಿಟ್ಟು ತೆರಳಲು ತುದಿಗಾಲ ಮೇಲೆ ನಿಂತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT