ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗನ್‌ –ತಾಲಿಬಾನ್‌ ಶಾಂತಿ ಮಾತುಕತೆ ‍ಪುನರಾರಂಭ

Last Updated 23 ಫೆಬ್ರುವರಿ 2021, 8:10 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಅಫ್ಗನ್‌ ಸರ್ಕಾರ ಮತ್ತು ತಾಲಿಬಾನ್‌ ಸಂಘಟನೆ ನಡುವಣ ಶಾಂತಿ ಮಾತುಕತೆಯು ಒಂದು ತಿಂಗಳ ಬಳಿಕ ಪುನರರಾಂಭಗೊಂಡಿದೆ.

ಕತಾರ್‌ನಲ್ಲಿ ಶಾಂತಿ ಮಾತುಕತೆಯನ್ನು ಮುಂದುವರಿಸಲಾಗಿದ್ದು, ಈ ಬಗ್ಗೆ ತಾಲಿಬಾನ್‌ ವಕ್ತಾರ ಡಾ.ಮೊಹಮ್ಮದ್‌ ನಯೀಮ್‌ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

‘ತಾಲಿಬಾನ್‌ ಮತ್ತು ಅಫ್ಗನ್‌ ಸರ್ಕಾರದ ನಡುವೆ ಸೌಹಾರ್ದಯುತವಾಗಿ ಮಾತುಕತೆ ಪುನರಾರಂಭಗೊಂಡಿದೆ. ಈ ಮಾತುಕತೆ ಹೀಗೆಯೇ ಮುಂದುವರಿಯಬೇಕು. ಅಲ್ಲದೆ ಶಾಂತಿ ಮಾತುಕತೆಯ ಕಾರ್ಯಸೂಚಿಯನ್ನು ಮುಂಚಿತವಾಗಿ ನಿಗದಿ ಮಾಡಬೇಕು’ ಎಂದು ನಯೀಮ್‌ ಸೋಮವಾರ ರಾತ್ರಿ ಟ್ವೀಟ್‌ ಮಾಡಿದ್ದಾರೆ.

‘ಈ ಶಾಂತಿ ಮಾತುಕತೆಯು ಜನವರಿಯಲ್ಲಿ ಏಕಾಏಕಿ ಸ್ಥಗಿತಗೊಂಡಿತ್ತು. ಇದೀಗ ಮಾತುಕತೆಯ ಆರಂಭದಲ್ಲೇ ಎರಡು ಬಣಗಳು ತಮ್ಮ ಇಚ್ಛೆಯ ಕಾರ್ಯಸೂಚಿಗಳನ್ನೊಳಗೊಂಡ ಪಟ್ಟಿಯನ್ನು ಸಲ್ಲಿಸಿವೆ. ಈ ಪಟ್ಟಿಗೆ ಅನುಗುಣವಾಗಿ ಉಭಯ ಬಣಗಳು ಚರ್ಚೆಯನ್ನು ಮುಂದುವರಿಸಲಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT