ಭಾನುವಾರ, ಮೇ 22, 2022
28 °C

ಇಸ್ರೇಲ್ ಸೇನೆಯ ಸ್ನೈಪರ್‌ ದಾಳಿಗೆ ಅರಬ್ ದೇಶಗಳ ಜನಪ್ರಿಯ ಪತ್ರಕರ್ತೆ ಸಾವು

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಜೆನಿನ್ (ಪ್ಯಾಲೇಸ್ಟೀನ್): ಆಲ್ ಜಜೀರಾ ವಾಹಿನಿಯ ಹಿರಿಯ ಪತ್ರಕರ್ತೆ ಶಿರೀನ್ ಅಬು ಆಕ್‌ಲೇಹಾ ಅವರನ್ನು ಇಸ್ರೇಲ್ ಪಡೆಗಳು ಗುಂಡಿಕ್ಕಿ ಹತ್ಯೆ ಮಾಡಿವೆ.

ಪ್ಯಾಲೇಸ್ತೇನಿಯನ್‌ನ ವೆಸ್ಟ್‌ ಬ್ಯಾಂಕ್‌ನಲ್ಲಿ ನಿರಾಶ್ರಿತರ ಬಗ್ಗೆ ವರದಿ ಮಾಡಲು ಶಿರೀನ್ ತೆರಳಿದ್ದ ಸಂದರ್ಭದಲ್ಲಿ ಇಸ್ರೇಲ್ ಸೇನೆಯ ಸ್ನೈಪರ್‌ಗಳು ಗುಂಡಿನ ದಾಳಿ ನಡೆಸಿ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಎಎಫ್‌ಪಿ ಫೋಟೊಗ್ರಾಫರ್ ತಿಳಿಸಿದ್ದಾರೆ.

ಆಲ್ ಜಜೀರಾ ವಾಹಿನಿ ಹಾಗೂ ಪ್ಯಾಲೇಸ್ಟೀನ್ ಆರೋಗ್ಯ ಇಲಾಖೆ ಈ ಮಾಹಿತಿಯನ್ನು ಖಚಿತಪಡಿಸಿದೆ.

ಶಿರೀನ್ ಅವರು ಅರಬ್‌ ದೇಶಗಳಲ್ಲಿ ಜನಪ್ರಿಯ ಪತ್ರಕರ್ತರಾಗಿದ್ದರು. ಅವರ ನಿಧನದ ಬಗ್ಗೆ ಇಸ್ರೇಲ್ ಆರ್ಮಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು