ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಪುಟಿದೇಳುತ್ತಿದೆ: ಬೈಡನ್‌

ಅಧ್ಯಕ್ಷರಾಗಿ 100 ದಿನ ಪೂರೈಕೆ: ಸಂಸತ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ
Last Updated 29 ಏಪ್ರಿಲ್ 2021, 6:46 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಅಮೆರಿಕ ಹೊಸ ಎತ್ತರಕ್ಕೆ ಬೆಳೆಯುತ್ತಿದೆ. ಭಯದ ಬದಲು ಭರವಸೆ, ಸುಳ್ಳಿನ ಬದಲಾಗಿ ಸತ್ಯವನ್ನು ಹಾಗೂ ಕತ್ತಲೆಯನ್ನು ಬಿಟ್ಟು ಬೆಳಕನ್ನು ಆಯ್ಮೆ ಮಾಡಿಕೊಂಡು ಮುನ್ನಡೆಯುತ್ತಿದೆ’ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಹೇಳಿದರು.

ಸಂಸತ್‌ನ ಜಂಟಿ ಅಧಿವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡು 100 ದಿನಗಳು ಸಂದಿವೆ. ಶತಮಾನದಲ್ಲಿಯೇ ಭಯಾನಕ ಎನಿಸಿದ ಕೋವಿಡ್‌ ಪಿಡುಗು, ಈ ದಶಕದಲ್ಲಿಯೇ ಸಂಕಷ್ಟದಿಂದ ಕೂಡಿದ ಆರ್ಥಿಕತೆಯನ್ನು ಎದುರಿಸಬೇಕಾಯಿತು’ ಎಂದರು.

‘ಇಂಥ ಗಂಡಾಂತರವನ್ನು ಹೊಸ ಸಾಧ್ಯತೆಯಾಗಿ, ಸಂಕಷ್ಟವನ್ನು ಅವಕಾಶವನ್ನಾಗಿ ಹಾಗೂ ಹಿನ್ನಡೆಯನ್ನೇ ಶಕ್ತಿಯನ್ನಾಗಿ ಮಾಡಿಕೊಂಡು ಅಮೆರಿಕದ ಪುಟಿದೇಳುತ್ತಿದೆ’ ಎಂದರು.

‘ಅಮೆರಿಕ ಮತ್ತೆ ಪುಟಿದೇಳುತ್ತಿದೆ. ಆದರೆ ಈ ಪುನರುತ್ಥಾನ ಎಷ್ಟು ದಿನಗಳ ವರೆಗೆ ಇರಲಿದೆ ಎಂಬ ಮಾತುಗಳನ್ನು ಅನೇಕ ವಿಶ್ವನಾಯಕರು ಹೇಳುತ್ತಿರುವುದನ್ನು ನಾನು ಕೇಳಿದ್ದೇನೆ. ಆದರೆ, ಈ ಪ್ರಕ್ರಿಯೆ ತಾತ್ಕಾಲಿಕವಲ್ಲ. ಮತ್ತಷ್ಟು ಸದೃಢ ರಾಷ್ಟ್ರವಾಗಿ ಅಮೆರಿಕ ಹೊರಹೊಮ್ಮಲಿದೆ ಎಂಬುದನ್ನು ಜಗತ್ತಿಗೆ ನಾವು ತೋರಿಸಿ ಕೊಡಬೇಕಿದೆ’ ಎಂದೂ ಬೈಡನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT