ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಂದು ಚೀನೀ ಕಣ್ಗಾವಲು ಬಲೂನ್ ಲ್ಯಾಟಿನ್ ಅಮೆರಿಕದಲ್ಲಿ ಪತ್ತೆ: ಪೆಂಟಗನ್

Last Updated 4 ಫೆಬ್ರುವರಿ 2023, 5:07 IST
ಅಕ್ಷರ ಗಾತ್ರ

ವಾಷಿಂಗ್ಟನ್: ಚೀನಾದ ಮತ್ತೊಂದು ಕಣ್ಗಾವಲು ಬಲೂನ್ ಲ್ಯಾಟಿನ್ ಅಮೆರಿಕವನ್ನು ಹಾದು ಹೋಗುತ್ತಿದೆ ಎಂದು ಪೆಂಟಗನ್ ಶುಕ್ರವಾರ ರಾತ್ರಿ ಹೇಳಿದೆ.

‘ಬಲೂನ್‌ವೊಂದು ಲ್ಯಾಟಿನ್ ಅಮೆರಿಕವನ್ನು ಹಾದು ಹೋಗುತ್ತಿರುವ ವರದಿಗಳನ್ನು ಕೇಳುತ್ತಿದ್ದೇವೆ. ಇದು ಮತ್ತೊಂದು ಚೀನೀ ಕಣ್ಗಾವಲು ಬಲೂನ್ ಎಂಬ ನಿರ್ಣಯಕ್ಕೆ ನಾವು ಬಂದಿದ್ದೇವೆ. ಈ ಬಗ್ಗೆ ಸದ್ಯ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ’ ಎಂದು ಪೆಂಟಗನ್ ಮಾಧ್ಯಮ ಕಾರ್ಯದರ್ಶಿಪ್ಯಾಟ್ ರೈಡರ್ ಹೇಳಿದರು.

ಅಮೆರಿಕದ ಮೊಂಟಾನಾದಲ್ಲಿ ಚೀನಾದ ಕಣ್ಗಾವಲು ಬಲೂನ್ ಹಾರುತ್ತಿರುವುದನ್ನು ಕಂಡುಹಿಡಿದ ಒಂದು ದಿನದ ಬಳಿಕ ಪೆಂಟಗನ್, ಚೀನಾದ ಮತ್ತೊಂದು ಕಣ್ಗಾವಲು ಬಲೂನ್ ಲ್ಯಾಟಿನ್ ಅಮೆರಿಕದಲ್ಲಿ ಹಾದು ಹೋಗುತ್ತಿರುವುದನ್ನು ಪತ್ತೆ ಹಚ್ಚಿದೆ.

ಈ ಸಂಬಂಧ ಚೀನಾ ವಿರುದ್ಧದ ಪ್ರತಿಭಟನಾರ್ಥವಾಗಿ ವಿದೇಶಾಂಗ ಕಾರ್ಯದರ್ಶಿ ಟೋನಿ ಬ್ಲಿಂಕೆನ್ ಅವರ ಚೀನಾ ಪ್ರವಾಸವನ್ನು ರದ್ದುಪಡಿಸಲಾಗಿದೆ.

ಈ ಹೊಸ ಬಲೂನ್ ಯಾವ ದೇಶದ ಮೇಲೆ ಹಾರುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ. ಅದು ಅಮೆರಿಕದ ಕಡೆ ಹೋಗುತ್ತಿದಂತೆ ಕಾಣುತ್ತಿಲ್ಲ ಎಂದು ಸಿಎನ್‌ಎನ್ ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT