ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಕ್ವಡೋರ್‌ ಜೈಲಿನಲ್ಲಿ ಗುಂಡಿನ ಕಾಳಗ: 68 ಸಾವು

Last Updated 14 ನವೆಂಬರ್ 2021, 5:51 IST
ಅಕ್ಷರ ಗಾತ್ರ

ಕ್ವಿಟೊ: ದಕ್ಷಿಣ ಅಮೆರಿಕ ಖಂಡದ ದೇಶವಾಗಿರುವ ಈಕ್ವಡೋರ್‌ನ ಕರಾವಳಿ ನಗರ ಗಯಾಕ್ವಿಲ್‌ನಲ್ಲಿರುವ ಅತಿದೊಡ್ಡ ಜೈಲಿನಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಕನಿಷ್ಠ 68 ಮಂದಿ ಮೃತಪಟ್ಟಿದ್ದು, 25 ಮಂದಿ ಗಾಯಗೊಂಡಿದ್ದಾರೆ.

ಅಂತರರಾಷ್ಟ್ರೀಯ ಡ್ರಗ್ಸ್‌ ಪ್ರಕರಣಗಳಲ್ಲಿ ಶಾಮೀಲಾಗಿರುವ ಆರೋಪಿಗಳ ನಡುವಿನ ಗ್ಯಾಂಗ್‌ವಾರ್‌ ಹಿನ್ನೆಲೆಯಲ್ಲಿ ಈ ಗುಂಡಿನ ಕಾಳಗ ನಡೆದಿದೆ ಎಂದು ಗಯಾಸ್ ಪ್ರಾಂತ್ಯದ ಗವರ್ನರ್‌ ಪಬ್ಲೋ ಅರಸೊಮೆನ ತಿಳಿಸಿದ್ದಾರೆ.

ಶನಿವಾರ ಆರಂಭವಾಗಿರುವ ಈ ಗುಂಡಿನ ಕಾಳಗವನ್ನು ನಿಯಂತ್ರಿಸಲು 700ರಷ್ಟು ಪೊಲೀಸರು ಪ್ರಯತ್ನಿಸುತ್ತಿದ್ದಾರೆ, ಆದರೆ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಇದೇ ಸೆಪ್ಟೆಂಬರ್‌ನಲ್ಲಿ ಇದೇ ಜೈಲಿನಲ್ಲಿ ನಡೆದ ಗುಂಡಿನ ಕಾಳಗದಲ್ಲಿ 119 ಮಂದಿ ಮೃತಪಟ್ಟಿದ್ದರು. ಫೆಬ್ರುವರಿಯಲ್ಲಿ ಹಲವು ಜೈಲುಗಳಲ್ಲಿ ನಡೆದ ಕಾಳಗಗಳಲ್ಲಿ 79 ಮಂದಿ ಮೃತಪಟ್ಟಿದ್ದರು. ಈ ವರ್ಷ ಒಟ್ಟಾರೆಯಾಗಿ ಕಾಳಗಗಳಲ್ಲಿ 300ಕ್ಕೂ ಅಧಿಕ ಮಂದಿ ಕೈದಿಗಳು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT