ಬುಧವಾರ, ಮೇ 18, 2022
24 °C

ಅಮೆರಿಕ: ಎರಡು ‍ಪ್ರಮುಖ ಹುದ್ದೆಗಳಿಗೆ ಭಾರತೀಯ ಮೂಲದ ತಜ್ಞರ ನೇಮಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹ್ಯೂಸ್ಟನ್‌: ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ನೇತೃತ್ವದ ಸರ್ಕಾರವು ಸ್ವಯಂಸೇವೆ ಮತ್ತು ಸೇವೆಯ ಫೆಡರಲ್‌ ಏಜೆನ್ಸಿಯಾದ ಅಮೆರಿಕಾರ್ಪ್ಸ್‌ನ ಎರಡು ‍ಪ್ರಮುಖ ಹುದ್ದೆಗಳಿಗೆ ಭಾರತೀಯ ಮೂಲದ ಸಾರ್ವಜನಿಕ ಸೇವೆಗಳ ತಜ್ಞರನ್ನು ನೇಮಕ ಮಾಡಿದೆ.

ಅಮೆರಿಕಾರ್ಪ್ಸ್‌ ಸ್ಟೇಟ್‌ ಮತ್ತು ನ್ಯಾಷನಲ್‌ನ ನಿರ್ದೇಶಕಿಯಾಗಿ ಸೋನಾಲಿ ನಿಜ್ವಾನ್ ಮತ್ತು ಸಂಸ್ಥೆಯ ವಿದೇಶಾಂಗ ವ್ಯವಹಾರಗಳ ಮುಖ್ಯಸ್ಥನಾಗಿ ಶ್ರೀ ಪ್ರೆಸ್ಟನ್ ಕುಲಕರ್ಣಿ ಅವರನ್ನು ನೇಮಕ ಮಾಡಿದೆ.

ಕುಲಕರ್ಣಿ ಅವರು ಅಮೆರಿಕದ ಕಾಂಗ್ರೆಸ್‌ಗೆ ಎರಡು ಬಾರಿ ಸ್ಪರ್ಧಿಸಿದ್ದರು. ಆದರೆ ಗೆಲವು ಸಾಧಿಸುವಲ್ಲಿ ವಿಫಲರಾದರು. ಸೋನಾಲಿ ನಿಜ್ವಾನ್ ಅವರು ಅಮೆರಿಕದ ವಿದೇಶಾಂಗ ಸೇವೆಗಳ ಅಧಿಕಾರಿಯಾಗಿ 14 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ.

‘ಅಮೆರಿಕಾರ್ಪ್ಸ್‌ಗೆ ಡ್ಯಾನ್‌ ಕೊಹ್ಲ್ ಜತೆಗೆ ಪ್ರೆಸ್ಟನ್ ಕುಲಕರ್ಣಿ ಮತ್ತು ಸೋನಾಲಿ ನಿಜ್ವಾನ್ ಅವರನ್ನು ಆರಿಸಲಾಗಿದೆ. ಈ ಮೂಲಕ ಜೋ ಬೈಡನ್‌ ಸರ್ಕಾರವು ವೈವಿದ್ಯಮಯ ನಾಯಕತ್ವವನ್ನು ಬೆಂಬಲಿಸುತ್ತಿದೆ’ ಎಂದು ಅಮೆರಿಕಾರ್ಪ್ಸ್‌ ಪ್ರಕಟಣೆಯಲ್ಲಿ ತಿಳಿಸಿದೆ.

‘ಈ ನಾಯಕರು ಕೋವಿಡ್‌–19,ಆರ್ಥಿಕ ಚೇತರಿಕೆ, ಜನಾಂಗೀಯ ಸಮಾನತೆ ಮತ್ತು ಹವಾಮಾನ ಬದಲಾವಣೆಯಂತಹ ಸಮಸ್ಯೆಗಳ ವಿರುದ್ಧ ಹೋರಾಡಲು ಬೈಡನ್‌ ಆಡಳಿತಕ್ಕೆ ಸಹಕರಿಸಲಿದ್ದಾರೆ’ ಎಂದು ಅಮೆರಿಕಾರ್ಪ್ಸ್‌ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು