ಭಾನುವಾರ, ಜುಲೈ 3, 2022
21 °C

ಮೊದಲ ಸ್ವದೇಶಿ ಉಪಗ್ರಹ ಉಡಾವಣೆಗೆ ಬ್ರೆಜಿಲ್ ಸಜ್ಚು; ಶ್ರೀಹರಿಕೋಟಾದಿಂದ ಉಡಾವಣೆ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ರಿಯೊ ಡಿ ಜನೈರೊ: ಬ್ರೆಜಿಲ್‌ ತನ್ನ ಮೊದಲ ಸ್ವದೇಶಿ ನಿರ್ಮಿತ ಉಪಗ್ರಹ ಉಡಾವಣೆಗೆ ಸಜ್ಜಾಗಿದೆ ಎಂದು ಆ ದೇಶದ ರಾಷ್ಟ್ರೀಯ ಬಾಹ್ಯಾಕಾಶ ಸಂಶೋದನಾ ಸಂಸ್ಥೆ (ಐಎನ್‌ಪಿಇ) ಬುಧವಾರ ತಿಳಿಸಿದೆ.

ಐಎನ್‌ಪಿಇ ಈ ಸಂಬಂಧ ಪ್ರಕಟಣೆ ಹೊರಡಿಸಿದ್ದು, ಉಪಗ್ರಹಕ್ಕೆ ಅಮೆಜಾನಿಯಾ–1 ಎಂದು ಹೆಸರಿಡಲಾಗಿದ್ದು, ಫೆಬ್ರುವರಿ 28ರಂದು ಭಾರತದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗುವುದು. ಇದು ಬ್ರೆಜಿಲ್‌ನ ಮೂರನೇ ದೂರ ಸಂವೇದಿ ಉಪಗ್ರಹವಾಗಲಿದೆ ಎಂದು ಮಾಹಿತಿ ನೀಡಿದೆ.

ಈ ಹಿಂದೆ ಚೀನಾ ಸಹಯೋಗದಲ್ಲಿ ಸಿಬಿಇಆರ್‌ಎಸ್‌–4 ಮತ್ತು ಸಿಬಿಇಆರ್‌ಎಸ್‌–4ಎ ಉಪಗ್ರಹಗಳನ್ನು ನಿರ್ಮಿಸಿತ್ತು.

ಇದು ಧ್ರುವೀಯ ಕಕ್ಷೆಯಲ್ಲಿ ಮಾತ್ರವೇ ಸುತ್ತುವ ಉಪಗ್ರಹವಾಗಿದ್ದು, ಪ್ರತಿ ಐದು ದಿನಕ್ಕೊಮ್ಮೆ ಭೂಮಿಯ ಚಿತ್ರಗಳನ್ನು ರವಾನಿಸಲಿದೆ. ಅಮೆಜಾನ್‌ ಮಿಷನ್‌ ಯೋಜನೆಯ ಭಾಗವಾಗಿ ನಾಲ್ಕುವರ್ಷ ಕಾರ್ಯಾಚರಿಸಲಿರುವ ಈ ಉಪಗ್ರಹ, ವಿಶ್ವದ ಅತಿದೊಡ್ಡ ಮಳೆಕಾಡು ಅಮೆಜಾನ್‌ನ ಮೇಲ್ವಿಚಾರಣೆ ಮತ್ತು ಅರಣ್ಯ ನಾಶಕ್ಕೆ ಸಂಬಂಧಿಸಿದ ದೂರ ಸಂವೇದಿ ಮಾಹಿತಿಯನ್ನೂ ಒದಗಿಸಲಿದೆ.

ಉಪಗ್ರಹದ ಸಂಯೋಜನೆ ಮತ್ತು ಪರೀಕ್ಷಾ ಕಾರ್ಯಗಳನ್ನು ಸಾವೊ ಪಾಲೋದಲ್ಲಿರುವ ಐಎನ್‌ಪಿಇ ಪ್ರಯೋಗಾಲಯದಲ್ಲಿ ನಡೆಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು