ಶುಕ್ರವಾರ, ಆಗಸ್ಟ್ 19, 2022
25 °C

ಬ್ರಿಟನ್‌ನಲ್ಲಿ ಆಸ್ಟ್ರಾಜೆನೆಕಾ ಕೋವಿಡ್‌ ಲಸಿಕೆ ಪ್ರಯೋಗ ಪುನರಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್‌: ಬ್ರಿಟನ್‌ನಲ್ಲಿ ಕೋವಿಡ್‌–19 ಚಿಕಿತ್ಸೆಗಾಗಿ ನಡೆಸಲಾಗುತ್ತಿರುವ ಆಸ್ಟ್ರಾಜೆನೆಕಾ ಲಸಿಕೆ ಪ್ರಯೋಗವನ್ನು ಶನಿವಾರದಿಂದ ಮತ್ತೆ ಆರಂಭಿಸಲಾಗಿದೆ.  

ಲಸಿಕೆಯು ಜನರನ್ನು ಕೋವಿಡ್‌–19ನಿಂದ ರಕ್ಷಿಸಲು ಸಮರ್ಥವಾಗಿದೆ ಎಂದು ಔಷಧಗಳ ಆರೋಗ್ಯ ನಿಯಂತ್ರಣ ಪ್ರಾಧಿಕಾರ (ಎಂಎಚ್‌ಆರ್‌ಎ) ಖಚಿತಪಡಿಸಿದೆ ಎಂದು ಶನಿವಾರ ರಾಯಿಟರ್ಸ್ ವರದಿ ಮಾಡಿದೆ.

ಬ್ರಿಟಿಷ್‌ ಫಾರ್ಮಾ ಕಂಪನಿ ಆಸ್ಟ್ರಾಜೆನೆಕಾ ಕೋವಿಡ್‌ ಲಸಿಕೆಯ ಅಂತಿಮ ಹಂತದ ಪ್ರಯೋಗಗಳನ್ನು ಇತ್ತೀಚೆಗಷ್ಟೇ ಸ್ಥಗಿತಗೊಳಿಸಿತ್ತು. ಬ್ರಿಟನ್‌ನಲ್ಲಿ ಕೋವಿಡ್‌ ಲಸಿಕೆ ಪ್ರಯೋಗಕ್ಕೆ ಒಳಪಟ್ಟಿದ್ದ ವ್ಯಕ್ತಿಯೊಬ್ಬರಿಗೆ ಬೆನ್ನು ಹುರಿಯಲ್ಲಿ ಉರಿಯೂತ (transverse myelitis) ಕಾಣಿಸಿಕೊಂಡಿರುವುದು ವರದಿಯಾದ ಬೆನ್ನಲ್ಲೇ ಲಸಿಕೆ ಪ್ರಯೋಗ ನಿಲ್ಲಿಸಲಾಗಿತ್ತು

 ಬೆನ್ನು ಹುರಿಯಲ್ಲಿ ತೊಂದರೆ ಕಾಣಿಸಿಕೊಂಡಿರುವುದಕ್ಕೂ ಲಸಿಕೆಯ ಪ್ರಯೋಗಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಎಂಎಚ್‌ಆರ್‌ಎ ಖಚಿತಪಡಿಸಿದೆ.

ಆಸ್ಟ್ರಾಜೆನೆಕಾ ಎಲ್ಲ ರಾಷ್ಟ್ರಗಳಿಗೂ ಒಂದೇ ಸಮಯದಲ್ಲಿ ಲಸಿಕೆ ಪೂರೈಕೆ ಮಾಡುವ ಗುರಿ ಇಟ್ಟುಕೊಂಡಿದೆ. ಕಂಪನಿ ಜಗತ್ತಿನಾದ್ಯಂತ ಸ್ಥಾಪಿಸಿರುವ ಕೇಂದ್ರಗಳ ಮೂಲಕ ಒಟ್ಟು 300 ಕೋಟಿ ಡೋಸ್‌ಗಳಷ್ಟು ಲಸಿಕೆ ತಯಾರಿಸುವ ಸಾಮರ್ಥ್ಯ ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು