ಗುರುವಾರ , ಜೂನ್ 30, 2022
22 °C

ಭಾರತೀಯರಿಗೆ ಅತಿ ಹೆಚ್ಚು ಕುಶಲ ವೃತ್ತಿಪರ ವೀಸಾ: ಬೋರಿಸ್ ಜಾನ್ಸನ್ ಒಲವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಭಾರತ– ಬ್ರಿಟನ್‌ ನಡುವಿನ ಮಹತ್ವಾಕಾಂಕ್ಷೆಯ ಮುಕ್ತ ವ್ಯಾಪಾರ ಒಪ್ಪಂದ(ಎಫ್‌ಟಿಎ) ತ್ವರಿತಗೊಳಿಸುವ ಭಾಗವಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು, ಭಾರತೀಯರಿಗೆ ಹೆಚ್ಚಿನ ಕುಶಲ ವೃತ್ತಿಪರ ವೀಸಾಗಳನ್ನು ನೀಡಲು ಬೆಂಬಲ ವ್ಯಕ್ತಪಡಿಸಿದ್ದಾರೆ. 

ಬುಧವಾರ ರಾತ್ರಿ ಭಾರತದ ಪ್ರವಾಸ ಕೈಗೊಳ್ಳುವ ವೇಳೆ ಬ್ರಿಟನ್ ಪತ್ರಕರ್ತರ ಜೊತೆ ಮಾತನಾಡಿದ ಅವರು, ಬ್ರಿಟನ್‌ನಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಪ್ರೊಗ್ರಾಮಿಂಗ್ ವಲಯದಲ್ಲಿ ಪರಿಣಿತರ ಸಂಖ್ಯೆ ವಿರಳವಾಗಿದೆ ಎಂಬುದನ್ನು ಒಪ್ಪಿಕೊಂಡರು. ಅಲ್ಲದೆ ಕೌಶಲ್ಯ ಹೊಂದಿದ ಸಾವಿರಾರು ನೌಕರರ ಅಗತ್ಯ ಬ್ರಿಟನ್‌ಗಿದೆ ಎಂದು ಹೇಳಿದರು. 

ಬ್ರಿಟನ್‌ನ ಗೃಹ ಕಾರ್ಯಾಲಯದ ಅಂಕಿಅಂಶಗಳ ಪ್ರಕಾರ, ಹೆಚ್ಚು ಪ್ರಮಾಣದ ಕುಶಲ ವೃತ್ತಿಪರ ವೀಸಾಗಳನ್ನು ಭಾರತೀಯರಿಗೆ ನೀಡಲಾಗಿದೆ. ಕಳೆದ ವರ್ಷ 67,839 ಮಂದಿಗೆ ಕುಶಲ ವೃತ್ತಿಪರ ವೀಸಾಗಳನ್ನು ನೀಡಲಾಗಿದ್ದು, 2019ರ ವರ್ಷಕ್ಕೆ ಹೋಲಿಸಿದರೆ, ಇದು ಶೇ 14ರಷ್ಟು ಹೆಚ್ಚು. 

ಏತನ್ಮಧ್ಯೆ, ಭಾರತ ಮತ್ತು ಬ್ರಿಟನ್ ಮಧ್ಯೆ 3ನೇ ಸುತ್ತಿನ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ ನಡೆಯಲಿದೆ. ಈ ವರ್ಷದ ಅಂತ್ಯದಲ್ಲಿ ಈ ಕುರಿತು ಅಂತಿಮ ನಿರ್ಣಯ ಕೈಗೊಳ್ಳುವ ವಿಶ್ವಾಸವನ್ನು ಪ್ರಧಾನಿ ಜಾನ್ಸನ್ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ನಮಗೆ ಈ ವಿಚಾರದಲ್ಲಿ ಆತುರವೇನೂ ಇಲ್ಲ ಎಂದು ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು