ಕೋಸ್ಟರಿಕಾ: ತುರ್ತು ಭೂಸ್ಪರ್ಶದ ವೇಳೆ ಎರಡು ತುಂಡಾದ ಕಾರ್ಗೊ ವಿಮಾನ
ಸ್ಯಾನ್ ಜೋಸ್: ತುರ್ತು ಭೂಸ್ಪರ್ಶದ ಸಮಯದಲ್ಲಿ ಸರಕು ವಿಮಾನವೊಂದು ಎರಡು ತುಂಡಾಗಿರುವ ಘಟನೆ ಕೋಸ್ಟರಿಕಾದ ಸ್ಯಾನ್ ಜೋಸ್‌ನಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಹೀಗಾಗಿ, ತಾತ್ಕಾಲಿಕವಾಗಿ ವಿಮಾನ ನಿಲ್ದಾಣವನ್ನು ಮುಚ್ಚಲಾಗಿತ್ತು.
ಜರ್ಮನ್ ಲಾಜಿಸ್ಟಿಕ್ಸ್ ದೈತ್ಯ ಸಂಸ್ಥೆ ಡಿಎಚ್‌ಎಲ್‌ಗೆ ಸೇರಿದ ವಿಮಾನದಿಂದ ಹೊಗೆ ಹೊರಹೊಮ್ಮುತ್ತಿತ್ತು, ವಿಮಾನ ರನ್‌ವೇಯಲ್ಲಿ ಇಳಿಯುವಾಗ ಪಕ್ಕಕ್ಕೆ ಸರಿದು ಎರಡು ತುಂಡಾಗಿದೆ. ವಿಮಾನದಲ್ಲಿದ್ದ ಇಬ್ಬರು ಸಿಬ್ಬಂದಿ ‘ಸುರಕ್ಷಿತವಾಗಿದ್ದಾರೆ’ಎಂದು ಕೋಸ್ಟರಿಕಾದ ಅಗ್ನಿಶಾಮಕ ದಳದ ಮುಖ್ಯಸ್ಥ ಹೆಕ್ಟರ್ ಚೇವ್ಸ್ ಹೇಳಿದ್ದಾರೆ.
ಗ್ವಾಟೆಮಾಲ ಮೂಲದ ಸಿಬ್ಬಂದಿಯನ್ನು ‘ವೈದ್ಯಕೀಯ ತಪಾಸಣೆಗಾಗಿ’ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ರೆಡ್ ಕ್ರಾಸ್ ಕಾರ್ಯಕರ್ತ ಗೈಡೋ ವಾಸ್ಕ್ವೆಜ್ ಹೇಳಿದ್ದಾರೆ.
ಓದಿ... ಜನ ಏನಾದರೂ ಮಾತಾಡ್ತಾರೆ.. ಸುಪ್ರಿಯಾ ಜತೆಗಿನ ಸಂಭಾಷಣೆ ಬಗ್ಗೆ ತರೂರ್ ಹೇಳಿದ್ದೇನು?
WATCH: DHL cargo plane veers off runway while trying to land at Costa Rica airport pic.twitter.com/zuZVjBqZ6Z
— BNO News (@BNONews) April 7, 2022
ಪೈಲಟ್ ಕೊಂಚ ವಿಚಲಿತರಾದರೂ ಇಬ್ಬರೂ ಸಿಬ್ಬಂದಿ ಸುರಕ್ಷಿತವಾಗಿದ್ದು, ‘ಎಲ್ಲವೂ ಅವರಿಗೆ ಸ್ಪಷ್ಟವಾಗಿ ನೆನಪಿದೆ’ಎಂದು ವಾಸ್ಕ್ವೆಜ್ ಹೇಳಿದರು.
ಬೋಯಿಂಗ್-757 ವಿಮಾನವು ಸ್ಯಾನ್ ಜೋಸ್‌ನ ಹೊರಗಿನ ಜುವಾನ್ ಸಾಂತಾಮಾರಿಯಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿತ್ತು ಬೆಳಿಗ್ಗೆ 10:30ರ ಸುಮಾರಿಗೆ ಇಳಿಯುವ ವೇಳೆ ಅಪಘಾತ ಸಂಭವಿಸಿದೆ. ಯಾಂತ್ರಿಕ ವೈಫಲ್ಯದಿಂದಾಗಿ ತುರ್ತು ಲ್ಯಾಂಡಿಂಗ್‌ಗೆ ಮುಂದಾದಾಗ ಈ ಅಪಘಾತ ಸಂಭವಿಸಿದೆ.
ಹೈಡ್ರಾಲಿಕ್ ಸಮಸ್ಯೆಯ ಬಗ್ಗೆ ಸಿಬ್ಬಂದಿ ಸ್ಥಳೀಯ ಅಧಿಕಾರಿಗಳಿಗೆ ಮೊದಲೇ ಮಾಹಿತಿ ನೀಡಿದ್ದರು.
ಇದನ್ನೂ ಓದಿ.. ಇಂಡೋ ಅಮೆರಿಕನ್ ವೇದಾಂತ್ ಪಟೇಲ್ ‘ಸೂಪರ್ ಟ್ಯಾಲೆಂಟೆಡ್’ಎಂದ ಶ್ವೇತಭವನದ ಅಧಿಕಾರಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.