ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ 80 ಹೊಸ ಕೋವಿಡ್‌ ಪ್ರಕರಣಗಳು ಪತ್ತೆ: ಹಲವೆಡೆ ಲಾಕ್‌ಡೌನ್‌

Last Updated 6 ಆಗಸ್ಟ್ 2021, 5:44 IST
ಅಕ್ಷರ ಗಾತ್ರ

ಬೀಜಿಂಗ್‌: ಚೀನಾದಲ್ಲಿ ಶುಕ್ರವಾರ ಹೊಸದಾಗಿ 80 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇದನ್ನು ನಿಯಂತ್ರಿಸಲು ಅಲ್ಲಿನ ಸರ್ಕಾರ ಲಾಕ್‌ಡೌನ್‌, ಪ್ರಯಾಣ ನಿರ್ಬಂಧ ಸೇರಿದಂತೆ ಇತರೆ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಈ ಪೈಕಿ ಜಿಯಾಂಗ್ಸ್‌ ಪ್ರಾಂತ್ಯದ ಯಾಂಗ್‌ಜ್ಹೌನಲ್ಲಿ 58 ಪ್ರಕರಣಗಳು ವರದಿಯಾಗಿವೆ. ಜಿಯಾಂಗ್ಸ್‌ ಪ್ರಾಂತ್ಯದ ರಾಜಧಾನಿ ನಾನ್ಜಿಂಗ್‌ನಲ್ಲಿ ವಿಮಾನ ನಿಲ್ದಾಣದ ಹಲವು ಸಿಬ್ಬಂದಿಯಲ್ಲಿ ಸೋಂಕಿನ ಡೆಲ್ಟಾ ರೂಪಾಂತರ ತಳಿ ದೃಢಪಟ್ಟಿದೆ. ಇನ್ನುಳಿದ ಪ್ರಕರಣಗಳು ಹೈನಾನ್‌ ಬಳಿಯ ಆರು ಪ್ರಾಂತ್ಯದಲ್ಲಿ ಪತ್ತೆಯಾಗಿವೆ. ಇದರೊಂದಿಗೆ ನಾನ್ಜಿಂಗ್‌ಗೆ ಸಂಬಂಧಿಸಿದ ಪ್ರಕರಣಗಳ ಸಂಖ್ಯೆ 1,222ಕ್ಕೆ ಏರಿಕೆಯಾಗಿದೆ.

ಈ ಹಿನ್ನೆಲೆಯಲ್ಲಿ ನಗರದಲ್ಲಿ ಪ್ರಯಾಣ ನಿರ್ಬಂಧ ಮತ್ತು ಕಠಿಣ ಲಾಕ್‌ಡೌನ್‌ ನಿಯಮಗಳನ್ನು ಹೇರಲಾಗಿದೆ.

ಚೀನಾದಲ್ಲಿ ದೇಶಿಯವಾಗಿ ಅಭಿವೃದ್ದಿಪಡಿಸಿದ ಲಸಿಕೆಯ ಕಾರ್ಯಕ್ಷಮತೆ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಲಾಗಿವೆ. ಈ ನಡುವೆಯೂ ಚೀನಾದಲ್ಲಿ ಈವರೆಗೆ ಲಸಿಕೆಯ 160 ಕೋಟಿ ಡೋಸ್‌ಗಳನ್ನು ನೀಡಲಾಗಿದೆ.

‘ಸ್ಥಳೀಯ ಪ್ರಕರಣಗಳನ್ನು ಹೊರತುಪಡಿಸಿ ವಿದೇಶದಿಂದ ಬಂದ 44 ವ್ಯಕ್ತಿಗಳಲ್ಲಿ ಶುಕ್ರವಾರ ಕೋವಿಡ್‌ ಪತ್ತೆಯಾಗಿದೆ. ಪ್ರಸ್ತುತ 1,370 ಮಂದಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 34 ಮಂದಿಯ ಪರಿಸ್ಥಿತಿ ಗಂಭೀರವಾಗಿದೆ’ ಎಂದು ಅಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ.

ಚೀನಾದಲ್ಲಿ ಈವರೆಗೆ ಒಟ್ಟಾರೆ 93,498 ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 4,636 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT