ಬುಧವಾರ, ಫೆಬ್ರವರಿ 1, 2023
18 °C

ಚೀನಾ: ಕೋವಿಡ್ ನಿರ್ಬಂಧಗಳಲ್ಲಿ ಸಡಿಲ

ರಾಯಿಟರ್ಸ್‌‌‌ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌: ಕಳೆದ ವಾರಾಂತ್ಯದಲ್ಲಿ ಚೀನಾದಲ್ಲಿ ನಡೆದ ಪ್ರತಿಭಟನೆ ನಂತರ ಉರುಮ್ಕಿ ಸೇರಿದಂತೆ ಬಹಳಷ್ಟು ನಗರಗಳಲ್ಲಿ ಹೇರಲಾಗಿದ್ದ ಕಠಿಣ ಕೋವಿಡ್ ನಿರ್ಬಂಧಗಳನ್ನು ಭಾನುವಾರ ಸಡಿಲಗೊಳಿಸಲಾಗಿದೆ.

ಕಳೆದ ತಿಂಗಳು ಕ್ಸಿನ್‌ಜಿಯಾಂಗ್ನ ರಾಜಧಾನಿ ಉರುಮ್ಕಿಯಲ್ಲಿ ಸಂಭವಿಸಿದ್ದ ಅಗ್ನಿ ದುರಂತದಲ್ಲಿ ಸಂತ್ರಸ್ತರು ತಪ್ಪಿಸಿಕೊಳ್ಳಲಾಗಲಿಲ್ಲ. ಇದಕ್ಕೆ ಕಠಿಣ ಕೋವಿಡ್ ನಿರ್ಬಂಧ ಹಾಗೂ ಲಾಕ್‌ಡೌನ್‌ ಕಾರಣ ಎಂದು ಸಾರ್ವಜನಿಕರು ಪ್ರತಿಭಟನೆ ಆರಂಭಿಸಿದ್ದರು. ಈಗ ಆ ಪ್ರದೇಶದಲ್ಲಿನ ಮಾಲ್‌, ಮಾರುಕಟ್ಟೆ, ರೆಸ್ಟೋರೆಂಟ್‌ ಮತ್ತು ಇತರ ಸಾರ್ವಜನಿಕ ‍ಸ್ಥಳಗಳನ್ನು ತೆರೆಯಲಾಗಿದ್ದು, ತಿಂಗಳಿದ್ದ ಇದ್ದ ಕಟ್ಟುನಿಟ್ಟಿನ ಲಾಕ್‌ಡೌನ್‌ಗೆ ಅಂತ್ಯ ಹಾಡಲಾಗಿದೆ. ಉರುಮ್ಕಿ ಮಾತ್ರವಲ್ಲದೇ, ಜೆನ್‌ಜಾಹೊ, ಶಾಂಘೈ ಸೇರಿದಂತೆ ಚೀನಾದ ಬಹಳಷ್ಟು ನಗರಗಳಲ್ಲಿ ಲಾಕ್‌ಡೌನ್‌, ಕ್ವಾರಂಟೈನ್‌ ಹಾಗೂ ಕರೋನಾ ಪರೀಕ್ಷೆಗಳನ್ನು ಕೈ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು